ದಾಖಲೆ ಬರೆಯಲು ಮಹಿ, ರಸಲ್, ಕುಮ್ಮಿನ್ಸ್ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

ಅಬುದಾಬಿ, ಅ.7- ಏಕದಿನವಿರಲಿ, ಟ್ವೆಂಟಿ-20 ಪಂದ್ಯವೇ ಇರಲಿ ತಮ್ಮ ತಂಡಗಳ ಗೆಲುವಿಗೆ ಶ್ರಮ ಹಾಕಲು ಸದಾ ಸಿದ್ಧವಾಗಿರುವ ಭಾರತ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ, ವೆಸ್ಟ್‍ಇಂಡೀಸ್‍ನ ಅಲೌಂಡರ್À ಆ್ಯಂಡ್ರೂ ರಸಲ್, ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಮಹತ್ತರ ಕಾಣಿಕೆ ನೀಡಿರುತ್ತಾರೆ.

ಇಂದು ಅಬುದಾಬಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಈ ಮೂವರು ಆಟಗಾರರು ದಾಖಲೆ ಬರೆಯಲು ಸಜ್ಜಾಗಿ ನಿಂತಿದ್ದಾರೆ.

# ಧೋನಿಗೆ 300 ಸಿಕ್ಸರ್‍ಗಳ ಕಾತರ:
2011ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಸಿಕ್ಸರ್ ಸಿಡಿಸಿಯೇ ಭಾರತ ತಂಡವನ್ನು ವಿಶ್ವಚಾಂಪಿಯನ್ಸ್ ಆಗಿಸಿದ್ದ ನಾಯಕ ಮಹೇಂದ್ರಸಿಂಗ್ ಧೋನಿ ಇಂದಿನ ಪಂದ್ಯದಲ್ಲಿ ಒಂದೇ ಒಂದು ಸಿಕ್ಸರ್ ಸಿಡಿಸಿದರೆ ಚುಟುಕು ಮಾದರಿಯಲ್ಲಿ 300 ಸಿಕ್ಸರ್ ಬಾರಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ. ಧೋನಿ ಇದುವರೆಗೂ 98 ಚುಟುಕು ಪಂದ್ಯಗಳಿಂದ 299 ಸಿಕ್ಸರ್‍ಗಳನ್ನು ಸಿಡಿಸಿದ್ದಾರೆ.

ಮಹೇಂದ್ರಸಿಂಗ್ ಧೋನಿ ಸುನೀಲ್ ನರೇನ್‍ರ ಬೌಲಿಂಗ್‍ನಲ್ಲಿ ಇದುವರೆಗೂ ಒಂದೇ ಒಂದು ಬೌಂಡರಿ ಗಳಿಸಲು ವಿಫಲರಾಗಿದ್ದು ಇಂದಿನ ಪಂದ್ಯದಲ್ಲಿ ನರೇನ್ ವಿರುದ್ಧ ಬೌಂಡರಿ ಗಳಿಸಲು ಧೋನಿ ಕಾತರರಾಗಿದ್ದಾರೆ.

# ರಸೆಲ್‍ಗೆ 200 ವಿಕೆಟ್‍ಗಳ ಸಂಭ್ರಮ:
ವೆಸ್ಟ್‍ಇಂಡೀಸ್ ತಂಡದ ಶ್ರೇಷ್ಠ ಅಲೌಂಡರ್ ಆಗಿ ಗುರುತಿಸಿಕೊಂಡಿರುವ ಕೆಕೆಆರ್‍ನ ಭರವಸೆಯ ಆಟಗಾರ ಆ್ಯಂಡ್ರೂ ರಸಲ್ ಇಂದಿನ ಪಂದ್ಯದಲ್ಲಿ 2 ವಿಕೆಟ್‍ಗಳನ್ನು ಕಬಳಿಸಿದರೆ ಟ್ವೆಂಟಿ-20 ಮಾದರಿಯ ಕ್ರಿಕೆಟ್‍ನಲ್ಲಿ 200 ವಿಕೆಟ್ ಕಿತ್ತ ಕೆರೆಬಿಯನ್ ಬೌಲರ್ ಆಗಿ ಹೊರಹೊಮ್ಮಲಿದ್ದಾರೆ. 49 ಚುಟುಕು ಪಂದ್ಯಗಳಿಂದ ರಸೆಲ್ 198 ವಿಕೆಟ್‍ಗಳನ್ನು ಕೆಡವಿದ್ದಾರೆ.

# ಕಮ್ಮಿನ್ಸ್ ಬೇಕು 1 ವಿಕೆಟ್:
ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮ್ಮಿನ್ಸ್ ಚುಟುಕು ಕ್ರಿಕೆಟ್‍ನಲ್ಲಿ ತಮ್ಮ ಬೌಲಿಂಗ್‍ನಿಂದ ಎದುರಾಳಿ ಬೌಲರ್‍ಗಳನ್ನುದಿಕ್ಕೆಡುವಂತೆ ಮಾಡುವಲ್ಲಿ ನಿಸ್ಸೀಮರು. ಇದುವರೆಗೂ ಅವರು ಆಡಿರುವ 30 ಟ್ವೆಂಟಿ-20 ಪಂದ್ಯಗಳಿಂದ 99 ವಿಕೆಟ್‍ಗಳನ್ನು ಕೆಡವಿದ್ದು ಇಂದಿನ ಪಂದ್ಯದಲ್ಲಿ 1 ವಿಕೆಟ್ ಕಬಳಿಸುವ ಮೂಲಕ ಈ ಮಾದರಿಯಲ್ಲಿ 100 ವಿಕೆಟ್ ಪಡೆದ ಆಸೀಸ್ ಬೌಲರ್ ಆಗಿ ಹೊರಹೊಮ್ಮಲು ಕಾತರಿಸುತ್ತಿದ್ದಾರೆ.

# ಸೋಲಿನ ಪೊರೆ ಕಳಚುವುದೇ ಕೆಕೆಆರ್ , ಮತ್ತೆ ಗುಡುಗುವುದೇ ಸಿಎಸ್‍ಕೆ
ಅಬುದಾಬಿ, ಅ. 6- ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಆಸೀಸ್‍ನ ಸೋಟಕ ಆಟಗಾರ ಶೇನ್ ವಾಟ್ಸನ್ ಮತ್ತೆ ಬ್ಯಾಟಿಂಗ್ ಲಯ ಕಂಡುಕೊಂಡಿರುವುದ ಧೋನಿ ಪಡೆಯ ಬ್ಯಾಟಿಂಗ್ ವೈಭವ ಹೆಚ್ಚಾಗಿದ್ದು ಇಂದು ಕೆಕೆಆರ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಮತ್ತೆ ಗುಡುಗಲು ಸಜ್ಜಾಗಿದ್ದಾರೆ.

ಐಪಿಎಲ್ 13ರ ಮೊದಲ ಪಂದ್ಯದಿಂದಲೂ ರನ್‍ಗಳ ಸುರಿಮಳೆ ಸುರಿಸುತ್ತಿರುವ ದಕ್ಷಿಣ ಆಫ್ರಿಕಾದ ಡುಪ್ಲೆಸಿಸ್ ಕಳೆದ ಪಂದ್ಯದಲ್ಲಿ ಶೇನ್ ವಾಟ್ಸನ್ ಜೊತೆಗೂಡಿ ಮೊದಲ ವಿಕೆಟ್‍ಗೆ ಅಜೇಯ 181 ರನ್‍ಗಳ ಕಾಣಿಕೆ ನೀಡುವ ಮೂಲಕ ಸಿಎಸ್‍ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದು ಇಂದಿನ ಪಂದ್ಯದಲ್ಲೂ ಕೂಡ ಕೆಕೆಆರ್ ವಿರುದ್ಧ ಸೋಟಕ ಬ್ಯಾಟಿಂಗ್‍ನಿಂದ ತಂಡಕ್ಕೆ ಮತ್ತೊಂದು ಗೆಲುವು ತಂದುಕೊಡಲು ವಾಟ್ಸನ್- ಪ್ಲೆಸಿಸ್ ಜೋಡಿ ಕಾತರಿಸುತ್ತಿದೆ.

ಆರಂಭಿಕ ಪಂದ್ಯದ ನಂತರ ಧೋನಿ ಬಳಗ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತಾದರೂ ಅಂಬಾಟಿ ರಾಯುಡು ಹಾಗೂ ಡೇನ್ ಬ್ರಾವೋ ಅವರು ತಂಡವನ್ನು ಕೂಡಿಕೊಂಡಿರುವುದರಿಂದ ಬ್ಯಾಟಿಂಗ್ ಬಲ ಹೆಚ್ಚಿದೆ. ಸಿಎಸ್‍ಕೆಯ 8, 9, 10ನೆ ಕ್ರಮಾಂಕದಲ್ಲಿ ಇಳಿಯುವ ಶಾರ್ದೂಲ್ ಠಾಕೂರ್, ದೀಪಕ್‍ಚಹರ್, ಪಿಯೂಸ್ ಚಾವ್ಲಾ ಕೂಡ ಅದ್ಭುತ ಬ್ಯಾಟಿಂಗ್ ಮಾಡುವುದರಿಂದ ಅಬುದಾಯಿಯಲ್ಲಿ ರನ್ ಸುರಿಮಳೆ ಸುರಿಸಲು ಸಿಎಸ್‍ಕೆ ಕಾತರಿಸುತ್ತಿದೆ.

ಬೌಲಿಂಗ್‍ನಲ್ಲೂ ಬ್ರಾವೋ, ಜಡೇಜಾ, ಠಾಕೂರ್, ಸ್ಯಾಮ್ ಕೂರಿನ್‍ರಂತಹ ಅಂತಾರಾಷ್ಟ್ರೀಯ ಬೌಲರ್‍ಗಳನ್ನು ಹೊಂದಿರುವುದು ಸಿಎಸ್‍ಕೆ ಬೌಲಿಂಗ್ ಸದೃಢವಾಗಿದ್ದು ಕೆಕೆಆರ್ ಬೌಲಿಂಗ್ ಲಗಾಮು ಹಾಕಲು ಸಜ್ಜಾಗಿದೆ.

# ಕೆಕೆಆರ್‍ಗೆ ಬ್ಯಾಟಿಂಗ್ ಬರ:
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಬ್ಯಾಟಿಂಗ್ ಬರ ಅನುಭವಿಸುತ್ತಿದೆ. ಆರಂಭಿಕ ಆಟಗಾರ ಶುಭಮನ್ ಗಿಲ್ ಅವರು ಮಿಂಚುತ್ತಿದ್ದರೆ , ಸುನೀಲ್ ನರೇನ್ ಸತತವಾಗಿ ವೈಫಲ್ಯವಾಗುತ್ತಿರುವುದು ರನ್ ವೇಗವನ್ನು ಕೂಗಿಸಿದೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳಾದ ನಿತೀಶ್ ರಾಣಾ, ಇಯಾನ್ ಮಾರ್ಗನ್, ರಾಹುಲ್ ತ್ರಿಪಾಠಿ ಮಿಂಚಿದರೂ ಕೂಡ ನಾಯಕ ದಿನೇಶ್ ಕಾರ್ತಿಕ್ ಹಾಗೂ ಸೋಟಕ ಆಟಗಾರ ಆ್ಯಂಡ್ರೂ ರಸೆಲ್ ಬ್ಯಾಟ್ ಸದ್ದು ಮಾಡದಿರುವುದು ತಂಡದ ಬ್ಯಾಟಿಂಗ್ ಕುಸಿಯಲು ಕಾರಣವಾಗಿದೆ.

# ನರೇನ್ ಡಲ್:
ಬ್ಯಾಟಿಂಗ್‍ನಲ್ಲಿ ಮಿಂಚಲು ವಿಫಲರಾಗಿರುವ ಕೆರೆಬಿಯನ್‍ನ ಸುನೀಲ್‍ನರೇನ್ ಬೌಲಿಂಗ್‍ನಲ್ಲೂ ಮಿಂಚದಿರುವುದು ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್‍ರ ತಲೆ ಬಿಸಿ ಮಾಡಿದರೂ ದುಬಾರಿ ಬೌಲರ್ ಪ್ಯಾಟ್ ಕಮ್ಮಿನ್ಸ್ , ಯುವ ಆಟಗಾರರಾದ ಶಿವಂ ಮಾವಿ, ವರುಣ್ ಚಕ್ರವರ್ತಿ, ಕಮಲೇಶ್ ನಾಗರಕೋಟಿ ತಂಡದ ಬೌಲಿಂಗ್ ಬಲ ಹೆಚ್ಚಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನ್ನು ಮರೆತು ಗೆಲುವಿನ ನಗೆ ಚೆಲ್ಲಲು ಕೆಕೆಆರ್ ಪ್ರಯತ್ನ ಪಡಬೇಕಾಗಿದೆ.

Facebook Comments

Sri Raghav

Admin