ಡಿಕೆಶಿ ವಿರುದ್ಧ ಮಹೇಶ್ ಕುಮಟಳ್ಳಿ ಗರಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಫೆ.9-ಬೆಳಗಾವಿ ರಾಜಕಾರಣ ಬೆಂಕಿ ಚೆಂಡು ಇದ್ದ ಹಾಗೆ. ಅದಕ್ಕೆ ಕೈ ಹಾಕಬೇಡಿ ಎಂದು ನಾವು ಹೇಳಿದ್ದೆವು ಎಂದು ಶಾಸಕ ಮಹೇಶ್ ಕುಮಟಳ್ಳಿ ಪರೋಕ್ಷವಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‍ಗೆ ಪರೋಕ್ಷ ಎಚ್ಚರಿಕೆ ನೀಡಿದರು.

ನೂತನ ಸಚಿವ ರಮೇಶ್ ಜಾರಕಿಹೊಳಿ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷಕ್ಕೆ ನಾವು ಮಂತ್ರಿಯಾಗಬೇಕೆಂದು ಬಂದಿಲ್ಲ. ಬೆಳಗಾವಿ ರಾಜಕಾರಣಕ್ಕೆ ಕೈ ಹಾಕಬೇಡಿ ಎಂದು ಸಮ್ಮಿಶ್ರ ಸರ್ಕಾರ ಇದ್ದಾಗಲೇ ಹೇಳಿದ್ದೆವು. ಗೋಕಾಕ್ ಬೆಂಕಿ ಚೆಂಡು ಇದ್ದ ಹಾಗೆ ಎಂದೂ ಕೂಡ ಹೇಳಿದ್ದೆವು. ಪರಿಣಾಮ ಬಿಜೆಪಿ ಅಧಿಕಾರಕ್ಕೆ ಬಂತು ಎಂದರು.

Facebook Comments