ಶ್ರೀಲಂಕಾ ಪ್ರಧಾನಿಯಾಗಿ ರಾಜಪಕ್ಸೆ ಪ್ರಮಾಣ ವಚನ ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಕೊಲೊಂಬೊ, ಆ.9-ಶ್ರೀಲಂಕಾ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಇಂದು ದ್ವೀಪ ರಾಷ್ಟ್ರದ ನೂತನ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜಧಾನಿ ಕೊಲೊಂಬೊದ ಬೌದ್ಧ ದೇವಾಲಯದಲ್ಲಿ ಇಂದು ಬೆಳಗ್ಗೆ ನಡೆದ ಸಮಾರಂಭದಲ್ಲಿ ಮಹಿಂದಾ ಅವರ ಕಿರಿಯ ಸಹೋದರ ಮತ್ತು ಶ್ರೀಲಂಕಾ ಅಧ್ಯಕ್ಷ ಗೊಟಬಾಯಾ ರಾಜಪಕ್ಸೆ ಪ್ರಮಾಣ ವಚನ ಬೋಸಿದರು.

ಉತ್ತರ ಕೊಲೊಂಬೋದ ಕೆಲನಿಯಾ ಪ್ರದೇಶದಲ್ಲಿರುವ ರಾಜಮಹಾ ವಿಹಾರಾಯ ಬೌಧ್ಧ ಮಂದಿರದಲ್ಲಿ ನಡೆದ ಪ್ರಧಾನಮಂತ್ರಿ ಪ್ರಮಾಣ ವಚನ ಸಮಾರಂಭಕ್ಕಾಗಿ ವ್ಯಾಪಕ ಬಂದೋಬಸ್ತ್ ಮಾಡಲಾಗಿತ್ತು.

ಶ್ರೀಲಂಕಾ ಅಧ್ಯಕ್ಷ ಗೋಟಬಾಯ ರಾಜಪಕ್ಸೆ ಮತ್ತು ಅವರ ಸಹೋದರ ಪ್ರಧಾನಮಂತ್ರಿ ಮಹಿಂದಾ ರಾಜಪಕ್ಸೆ ನೇತೃತ್ವದ ಆಡಳಿತಾರೂಢ ಶ್ರೀಲಂಕಾ ಪೀಪಲ್ಸ್ ಪಾರ್ಟಿ (ಎಸ್‍ಎಲ್‍ಪಿಪಿ) ಒಂಭತ್ತನೇ ಸಂಸದೀಯ ಚುನಾವಣೆಯಲ್ಲಿ ಭರ್ಜರಿ ಜಯ ಸಾಸಿತ್ತು.

ಪ್ರಬಲ ರಾಜಪಕ್ಸೆ ಕುಟುಂಬದ ರಾಜಕೀಯ ಪಕ್ಷವು ಸಂಸದೀಯ ಚುನಾವಣೆಗಳಲ್ಲಿ ಏರಡನೇ ಮೂರು ಭಾಗದಷ್ಟು ಸ್ಪಷ್ಟ ಬಹುಮತದೊಂದಿಗೆ ಐತಿಹಾಸಿಕ ಜಯ ಜಯ ದಾಖಲಿಸಿದೆ. 225 ಸದಸ್ಯ ಬಲದ ಸಂಸತ್ತಿನಲ್ಲಿ ರಾಜಪಕ್ಸೆ ಸಹೋದರರ ನೇತೃತ್ವದ ಪಕ್ಷವು 145 ಸ್ಥಾನಗಳನ್ನು ಗಳಿಸಿದೆ.

Facebook Comments

Sri Raghav

Admin