ಈ ವಾರ ‘ಮಜ್ಜಿಗೆ ಹುಳಿ’ ಮೋಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ಈ ವಾರ ಮಜ್ಜಿಗೆ ಹುಳಿಯ ದರ್ಶನವಾಗಲಿದೆ. ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತದೆ. ಅಂದರೆ ಅದೇ ಹೆಸರಿನಲ್ಲಿ ಚಿತ್ರವೊಂದು ನಿರ್ಮಾಣವಾಗಿದ್ದು, ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿ ನಿನ್ನೆ ಮಲ್ಲೇಶ್ವರಂನ ಎಸ್‍ಆರ್‍ವಿ ಥಿಯೇಟರಿನಲ್ಲಿ ನಡೆಯಿತು.

ಈ ಚಿತ್ರವನ್ನು ಸಂಚಿತ್  ಫಿಲಂಸ್‍ನವರು ರಾಜ್ಯಾದ್ಯಂತ ಬಿಡುಗಡೆ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯಾದ್ಯಂತ ಸುಮಾರು 80ರಿಂದ ನೂರು ಚಿತ್ರಮಂದಿರಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತಿದ್ದೇವೆ ಎಂದು ವಿತರಕ ವೆಂಕಟ್ ಹೇಳಿದರು.

ರವೀಂದ್ರ ಕೊಟಕಿ ಅವರು ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಒಂದೇ ದಿನ ರಾತ್ರಿ ನವದಂಪತಿಗಳು ತಂಗಿದ್ದ ಕೊಠಡಿಯೊಂದರಲ್ಲಿ ನಡೆಯುವ ರೋಚಕ ಘಟನೆಗಳ ಸುತ್ತ ಕಥೆ ಹೆಣೆಯಲಾಗಿದೆ. ದೀಕ್ಷಿತ್ ವೆಂಕಟೇಶ್ ಮತ್ತು ರೂಪಿಕಾ ಈ ಚಿತ್ರದಲ್ಲಿ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.

ಈ ಚಿತ್ರವನ್ನು ರಾಮಚಂದ್ರ ಹಾಗೂ ವೈ. ರಘುರಾಜ್ ಸೇರಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಹಾಡುಗಳಿಗೆ ಶಂಕರ್‍ರಾವ್ ಅವರು ಸುಮಧುರ ಸಂಗೀತವನ್ನು ಒದಗಿಸಿz್ದÁರೆ. ನಿರ್ದೇಶಕ ರವೀಂದ್ರ ಕೊಟಕಿ ಮಾತನಾಡಿ, ಮಜ್ಜಿಗೆಹುಳಿ ಹೆಸರಿನಷ್ಟೇ ರುಚಿಕರವಾದ ಕಥೆ ಈ ಚಿತ್ರದಲ್ಲಿ ಹೇಳಿದ್ದೇವೆ.

ಈ ಚಿತ್ರ ಸವಿಯಾದ ಬಾಡೂಟದ ರುಚಿಯನ್ನು ಪ್ರೇಕ್ಷಕರಿಗೆ ನೀಡಲಿದೆ, ಹೊಸದಾಗಿ ಮದುವೆಯಾದ ದಂಪತಿಗಳು ಮೊದಲ ರಾತ್ರಿಯನ್ನು ಆಚರಿಸಿಕೊಳ್ಳಲು ಹೋಟೆಲ್ ಒಂದಕ್ಕೆ ಬಂದು ತಂಗುತ್ತಾರೆ, ಅವರೊಂದಿಗೆ ಆ ಹೊಟೇಲ್‍ನಲ್ಲಿ  28 ಮಂದಿ ವಾಸವಾಗಿರುತ್ತಾರೆ.

ಆ ರಾತ್ರಿ ಆ ಹೊಟೇಲ್‍ನಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಮಜ್ಜಿಗೆ ಹುಳಿಯಲ್ಲಿ ತೋರಿಸಿದ್ದೇವೆ ಎಂದರು. ನಾಯಕಿ ರೂಪಿಕಾ ಮಾತನಾಡಿ, ನಾನು ಈ ಹಿಂದೆ ಗಂಭೀರ ಪಾತ್ರಗಳಲ್ಲೇ ನಟಿಸಿದ್ದೆ. ಆದರೆ ಯಾವಾಗ ಮಜÁ ಟಾಕೀಸ್‍ನಲ್ಲಿ ಕಾಣಿಸಿಕೊಂಡೆನೋ ಅಲ್ಲಿನ ಹಾಸ್ಯಮಯ ಸನ್ನಿವೇಶದಿಂದ ನಾನು ಕೂಡ ಕಾಮಿಡಿ ಪಾತ್ರಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಕಲಿತೆ.

ಈ ಚಿತ್ರದಲ್ಲಿ ತನ್ನ ಗಂಡನ ರಕ್ಷಣೆ ಮಾಡುವ ಹೆಂಡತಿಯ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ, ಡ್ಯಾನ್ಸ್ ಅಂದರೆ ನನಗೆ ಮೊದಲಿನಿಂದಲೂ ಪಂಚಪ್ರಾಣ, ಈ ಚಿತ್ರದಲ್ಲಿ ಒಂದು ಟಪ್ಪಾಂಗುಚಿ ಹಾಡಿಗೆ ಸಖತ್ತಾಗಿ ನೃತ್ಯ ಮಾಡಿದ್ದೇನೆ ಎಂದರು.

ನಾಯಕ ವೆಂಕಟೇಶ್ ಮಾತನಾಡಿ, ನಾನು ಸಾಫ್ಟ್‍ವೇರ್ ಎಂಜಿನಿಯರ್ ಪಾತ್ರ ಮಾಡಿದ್ದೇನೆ. ಕೊಳ್ಳೇಗಾಲದಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಆಗಿದ್ದೆ. ಆದರೆ, ಮಜ್ಜಿಗೆ ಹುಳಿಯಲ್ಲಿ ನನ್ನದು ಮೃದು ಸ್ವಭಾವದ ಹುಡುಗನ ಪಾತ್ರ. ಚಿತ್ರದಲ್ಲಿ ಬರುವ 28 ಪಾತ್ರಗಳೂ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತ ಹೋಗುತ್ತವೆ. ಹಣ ಕೊಟ್ಟು ಥಿಯೇಟರಿಗೆ ಬರುವ ಪ್ರೇಕ್ಷಕರಿಗೆ ಖಂಡಿತ ಮೋಸ ಆಗಲ್ಲ ಎಂದು ಹೇಳಿದರು.

ಚಿತ್ರದ ನಿರ್ಮಾಪಕರಲ್ಲೊಬ್ಬರಾದ ರಘುರಾಜ್ ವೈ ಮಾತನಾಡಿ, ನನಗೆ ಮೊದಲಿನಿಂದಲೂ ಚಿತ್ರರಂಗದ ಬಗ್ಗೆ ಸೆಳೆತವಿತ್ತು, ಕನ್ನಡದಲ್ಲಿ ನಾನು ಒಂದು ಸದಭಿರುಚಿ ಚಿತ್ರವನ್ನು ನಿರ್ಮಿಸಬೇಕೆಂದುಕೊಳ್ಳುತ್ತಿರುವಾಗ ಈ ಚಿತ್ರದ ಕಥೆ ಬಂತು.

ಹಾಗಾಗಿ ಒಂದು ಉತ್ತಮ ಕಥೆಯುಳ್ಳ ಈ ಚಿತ್ರವನ್ನು ನಿಮಿಸಿರುವುದಾಗಿ ಹೇಳಿದರು. ಚಿತ್ರದ ಮತ್ತೊಬ್ಬ ನಿರ್ಮಾಪಕ ರಾಮಚಂದ್ರ ಮಾತನಾಡಿ ಚಿತ್ರದ ವಿಶೇಷತೆಗಳನ್ನು ಹೇಳಿಕೊಂಡರು. ಪತ್ರಿಕಾಗೋಷ್ಟಿಯಲ್ಲಿ ಇಡೀ ಚಿತ್ರತಂಡ ಹಾಜರಿದ್ದು, ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಬಹಳಷ್ಟು ನಿರೀಕ್ಷೆಗಳೊಂದಿಗೆ ಯುವ ಪಡೆಗಳು ನಿರ್ಮಿಸಿರುವ ಮಜ್ಜಿಗೆ ಹುಳಿ ಈವಾರ ತೆರೆಗೆ ಬರುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ