BIG NEWS :ಮಹಾ ಮೋಸ ಬಯಲು, ಮಲೈಕಾ ಸೊಸೈಟಿಯ ಗ್ರಾಹಕರಿಗೆ ಕೋಟ್ಯಾಂತರ ರೂ.ಪಂಗನಾಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.22- ಐಎಂಎ, ರಾಘವೇಂದ್ರ ಕೋ ಆಪರೇಟಿವ್, ಲಕ್ಷ್ಮೀ ವಿಲಾಸ್ ಕೋ ಆಪರೇಟಿವ್ ಬ್ಯಾಂಕ್‍ಗಳ ವಂಚನೆ ಪ್ರಕರಣದ ಮಾದರಿಯಲ್ಲೇ ಮಂಗಳೂರಿನಲ್ಲೊಂದು ಮಹಾ ಮೋಸದ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರಿನ ಮಲೈಕಾ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಕೋಟ್ಯಂತರ ರೂ.ಗಳನ್ನು ವಾಪಾಸ್ ನೀಡದೆ ವಂಚಿಸಿದೆ ಎಂದು ದಾಖಲಾಗಿರುವ ದೂರು ಆಧರಿಸಿ ಮಂಗಳೂರಿನ ಸಿಸಿಬಿ ಪೊಲೀಸರು ಸೊಸೈಟಿಯ ವ್ಯವಸ್ಥಾಪಕರನ್ನು ಬಂಸಿದೆ ಎಂದು ಇನ್ಸ್‍ಪೆಕ್ಟರ್ ರಾಮಕೃಷ್ಣ ಅವರು ಈ ಸಂಜೆಗೆ ದೃಢ ಪಡಿಸಿದ್ದಾರೆ.

ಹಲವಾರು ವರ್ಷಗಳಿಂದ ಉಳಿತಾಯ ಖಾತೆ ಮತ್ತು ಠೇವಣಿ ಖಾತೆಗಳ ಮೂಲಕ ಮುಂಬೈ, ಮಂಗಳೂರು, ಗೋವಾದಲ್ಲಿ ಸಾವಿರಾರು ಮಂದಿಯಿಂದ ಠೇವಣಿ ಸಂಗ್ರಹಿಸಲಾಗಿದೆ. ಠೇವಣಿ ಅವ ಮುಗಿದು ನಗದೀಕರಣಗೊಳ್ಳುವ ವೇಳೆಗೆ ಸೋಸೈಟಿಯ ನಿರ್ದೇಶಕರು ನಾಪತ್ತೆಯಾಗಿದ್ದಾರೆ. ಹಲವಾರು ದಿನಗಳಿಂದ ಈ ಕುರಿತು ಭಾರೀ ಚರ್ಚೆಗಳಾಗಿದ್ದವು.

ಮಂಗಳೂರಿನ ಎಲೇರಿ ಕುಟ್ಟಿನೋ ಎಂಬುವರು ನೀಡಿದ ದೂರು ಆಧರಿಸಿ ಕೇಸು ದಾಖಲಿಸಿರುವ ಎನ್‍ಸಿ.ಇ.ಪಿ.ಎಸ್ ಠಾಣೆ ಪೊಲೀಸರು, ಮಂಗಳೂರು ಶಾಖೆಯ ವ್ಯವಸ್ಥಾಪಕರಾದ ರೀನಾ ಜೋಶ್‍ಳನ್ನು ಬಂಸಿದ್ದಾರೆ.vಪ್ರತಿ ತಿಂಗಳ ಬಡ್ತಿ ನೀಡುವ ಭರವಸೆಯ ಮೇಲೆ ಹಲವರಿಂದ ಠೇವಣಿ ಸಂಗ್ರಹಿಸಲಾಗಿದೆ. ಅವ ಮೀರಿದ್ದರೂ ಯಾರಿಗೂ ವಾಪಾಸ್ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಮಂಗಳೂರು, ಮುಂಬಯಿನಲ್ಲಿ ಶಾಖೆಗಳನ್ನು ಹೊಂದಿರುವ ಮಲೈಕಾ ಸಂಸ್ಥೆ ಠೇವಣಿ ವಾಪಾಸ್ ನೀಡದೇ ವಂಚನೆ ಮಾಡಿದೆ. ಸಂಸ್ಥೆ ಶಾಖೆಗಳನ್ನು ಬಂದ್ ಮಾಡಿದ್ದಾರೆ. ಮಂಗಳೂರಿನ ಬೆಂದೂರ್ ವೆಲïನಲ್ಲಿರುವ ಸೊಸೈಟಿಯ ಪ್ರಧಾನ ಕಚೇರಿಯು ಬಂದ್ ಆಗಿದೆ. ವಂಚನೆಗೊಳಗಾದವರು ಮಂಗಳೂರಿನ ಪಾಂಡೇಶ್ವರದ ನಾರ್ಕೋಟಿಕ್ ಮತ್ತು ಆರ್ಥಿಕ ಅಪರಾಧ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಂಸ್ಥೆಯ ಸ್ಥಾಪಕ ಗಿಲ್ಬರ್ಟ್ ಬ್ಯಾಪಿಸ್ಟ್, ಅವರ ಪತ್ನಿ ಮರ್ಸಿಲಿನ್ ಬ್ಯಾಪ್ಟಿಸ್ಟ್ ಸೇರಿದಂತೆ ಆಡಳಿತ ಮಂಡಳಿಯ 12 ಮಂದಿ ವಿರುದ್ದ ದೂರು ದಾಖಲಾಗಿದೆ. ಮಂಗಳೂರು ಬ್ರ್ಯಾಂಚ್ ಮ್ಯಾನೇಜರ್ ರೀನಾ ಜೋಶ್ ಅವರನ್ನು ಪೊಲೀಸರು ಬಂಸಿದ್ದಾರೆ. ಸಂಸ್ಥೆಗೆ ಸಂಬಂಧಪಟ್ಟಂತ ದಾಖಲೆಗಳನ್ನು ಎನ್.ಸಿ.ಇ.ಪಿ.ಎಸ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Facebook Comments