ಮಲೆನಾಡು ಚಿಣ್ಣರ ಕ್ರೀಡಾ ಕಲರವ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.5- ಮಲೆನಾಡಿಗರು ಇಂದು ಆಟೋಟಗಳಲ್ಲಿ ಮಿಂದೆದ್ದರು.ಮಲೆನಾಡು ಮಿತ್ರ ವೃಂದ 11ನೆ ವರ್ಷದ ಕ್ರೀಡಾಕೂಟದ ಅಂಗವಾಗಿ ಎಚ್‍ಎಂಟಿ ಆಟದ ಮೈದಾನದಲ್ಲಿ 5 ವರ್ಷದ ಮಕ್ಕಳಿಂದ ಹಿಡಿದು 40 ವರ್ಷ ಮೇಲ್ಪಟ್ಟವರಿಗಾಗಿ ಏರ್ಪಡಿಸಿದ್ದ ಓಟದ ಸ್ಪರ್ಧೆ, ಪಿರಮಿಡ್ ರೇಸ್, ಬಾಲ್ ರೇಸ್, ಸ್ಕಿಪಿಂಗ್ ರೇಸ್, ಥ್ರೋ ಬಾಲ್, ಗೋಣಿ ಚೀಲದ ಓಟ, ಡಬಲ್ ಲ್ಯಾಂಡ್ , ಥ್ರೋ ಬಾಲ್, ಗುಂಡು ಎಸೆತ, ವೇಗದ ನಡಿಗೆ, ಹಗ್ಗ ಜಗ್ಗಾಟ, ವಾಲಿಬಾಲ್ ಸ್ಪರ್ಧೆ ಹೀಗೆ ಎಲ್ಲಾ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಸ್ಫೂರ್ತಿಯನ್ನು ಮೆರೆದರು.

ಇದಲ್ಲದೆ ವಿಶೇಷ ಸ್ಪರ್ಧೆಯಾದ ಕಡುಬು ತಿನ್ನುವ ಸ್ಪರ್ಧೆ ಕೂಡ ಎಲ್ಲರ ಗಮನ ಸೆಳೆಯಿತು. ಬೆಂಗಳೂರಿನಲ್ಲಿ ನೆಲೆಸಿರುವ ಮಲೆನಾಡಿಗರನ್ನು ಒಟ್ಟುಗೂಡಿಸಲು ಮಲೆನಾಡು ಮಿತ್ರ ವೃಂದ ಪ್ರತಿ ವರ್ಷ ಮಲೆನಾಡು ಕ್ರೀಡಾಕೂಟ ವನ್ನು ಆಯೋಜಿಸುತ್ತಾ ಬಂದಿದೆ. ಕ್ರೀಡಾಕೂಟದ ಮೂಲಕ ಎಲ್ಲರೂ ಒಂದುಗೂಡುವ ಮೂಲಕ ತಮ್ಮ ಸೌಹಾರ್ದತೆಯನ್ನು ಮೆರೆಯುತ್ತಾರೆ.

ಸಮಾರಂಭಕ್ಕೆ ಮೆರುಗು ನೀಡಿದವರು ಮಲೆನಾಡು ಮಿತ್ರ ವೃಂದದ ಅಧ್ಯಕ್ಷರಾದ ವಾಸಪ್ಪ ಪಡುಬೈಲು, ಉಪಾಧ್ಯಕ್ಷರಾದ ಸಂದೇಶ ಹಂದಿಗೋಡು, ಸುಖೇಶ್ ದಾಸನಕೊಡಿಗೆ, ಅಂಜೂರು ಕೂಡುಮಲ್ಲಿಗೆ , ಜನಪ್ರತಿನಿಧಿಗಳು ಕೂಡ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಕ್ಯಾಲೆಂಡರ್ ಅನ್ನು ವಿತರಿಸಲಾಯಿತು.

Facebook Comments