ಮಜವಾಗಿತ್ತು ಮಲೆನಾಡು ಕ್ರೀಡಾ ಕೂಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಬೆಂಗಳೂರಿನ ಮಲೆನಾಡು ಮಿತ್ರವೃಂದ ಪ್ರತಿವರ್ಷದಂತೆ ಈ ಬಾರಿಯೂ ಮಲೆನಾಡಿಗೆರಿಗಾಗಿ ಬೆಂಗಳೂರಿನ ಹೆಚ್.ಎಂ.ಟಿ. ಆಟದ ಮೈದಾನದಲ್ಲಿ ಕ್ರೀಡಾಕೂಟವನ್ನು ಆಯೋಜಿಸಿತ್ತು.ಮಲೆನಾಡು ಮಿತ್ರವೃದ್ಧ ದವರವರು ಆಯೋಜಿಸಿದ್ದ, 2020ನೇ ಸಾಲಿನ ಮಲೆನಾಡು ಕ್ರೀಡಾಕೂಟವೂ ಇಂದು ಬೆಂಗಳೂರಿನ ಹೆಚ್.ಎಂ.ಟಿ. ಕ್ರೀಡಾಂಗಣದಲ್ಲಿ ಜರುಗಿತ್ತು.

11ನೇ ವರ್ಷದ ಈ ಕ್ರೀಡಾಕೂಟದಲ್ಲಿ ಬೆಂಗಳೂರಿನ ವಿವಿಧೆಡೆ ವಾಸವಿರುವ ಮಲೆನಾಡು ಬಂಧುಗಳು ಭಾಗವಹಿಸಿದ್ದು, ತುಂಬಾ ಉತ್ಸುಕರಾಗಿ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು.11ನೇ ವರ್ಷದ ಮಲೆನಾಡು ಕ್ರೀಡಾಕೂಟದಲ್ಲಿ ಮಹಿಳೆಯರಿಗೆಂದೇ ವಿಶೇಷ ಕ್ರೀಡೆಗಳಿದ್ದವು, ಆಟಾಬೊಂಬಾಟ ಎಂಬ ಕ್ರೀಡೆಯನ್ನು ದಂಪತಿಗಳಿಗೆಂದೇ ಆಯೋಜಿಸಲಾಗಿತ್ತು.

ಇಡೀ ಕ್ರೀಡಾಕೂಟದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಮಡೆನಾಡಿಗರು ಎದುರು ನೋಡುತ್ತಿದ್ದ ಕ್ರೀಡೆ ಎಂದರೆ ಅದು ಕಡಬು ತಿನ್ನುವ ಸ್ಪರ್ಧೆ, ಏಕೆಂದರೆ ಮಲೆನಾಡಿಗೂ ಕಡಬಿಗೂ ಇರುವ ಅವಿನಾಭಾವ ಸಂಬಧವೇ ಅಂತಹುದು.

Facebook Comments