ರಾಮು ಆಗಲಿ 12 ದಿನಗಳ ನಂತರ ಭಾವನಾತ್ಮಕ ಪತ್ರ ಬರೆದ ಮಾಲಾಶ್ರೀ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 9- ರಾಮು ಅವರ ನಿಧನದಿಂದ ನಮ್ಮ ಹೃದಯ ಛಿದ್ರವಾಗಿದೆ. ಅವರು ನಮಗೆ ಬೆನ್ನೆಲುಬಾಗಿದ್ದರು, ಮಾರ್ಗದರ್ಶಿ ಬೆಳಕಾಗಿದ್ದರು ಎಂದು ನಟಿ ಮಾಲಾಶ್ರೀ ಭಾವನಾತ್ಮಕ ಪತ್ರ ಬರೆದಿದ್ದಾರೆ.

ಕೋಟಿ ನಿರ್ಮಾಪಕ ರಾಮು ಅಗಲುವಿಕೆಯ 12 ದಿನಗಳ ಬಳಿಕ ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ನೋವನ್ನು ಹಂಚಿಕೊಂಡಿರುವ ಅವರ ಪತ್ನಿ ಮಾಲಾಶ್ರೀ, ಅವರು ಅಗಲಿದ ಕ್ಷಣದಿಂದ ನಾವು ಅನುಭವಿಸಿದ ನೋವು ವರ್ಣಿಸಲು ಸಾಧ್ಯವಿಲ್ಲ. ನಮಗೆ ಎಲ್ಲವೂ ಮಸುಕಾಗಿತ್ತು. ಇಂತಹ ಸಮಯದಲ್ಲಿ ಚಿತ್ರರಂಗದ ಸಮುದಾಯ ತಮಗೆ ತೋರಿಸಿದ ಪ್ರಿತಿ, ಬೆಂಬಲಕ್ಕೆ ಚಿರಋಣಿ ಎಂದಿದ್ದಾರೆ,

ಚಿತ್ರರಂಗದ ಪ್ರತಿಯೊಬ್ಬರು, ಮಾಧ್ಯಮದವರು, ಕಲಾವಿದರು, ನಿರ್ಮಾಪಕರು, ತಂತ್ರಜ್ಞರು, ಸಿಬ್ಬಂದಿಗಳು, ಜೊತೆ ರಾಮು ಅವರ ಅಭಿಮಾನಿಗಳ, ಸ್ನೇಹಿತರು, ಹಿತೈಷಿಗಳ ಬೆಂಬಲಕ್ಕೆ ಮಾಲಾಶ್ರೀ ಧನ್ಯವಾದ ಹೇಳಿದ್ದಾರೆ.

ಸಂಕಷ್ಟ ಕಾಲದಲ್ಲಿ ಕುಟುಂಬದ ಸದಸ್ಯರು ತಮ್ಮವರನ್ನು ಹೊರಗೆ ಕಳುಹಿಸದೆ ಸುರಕ್ಷಿತವಾಗಿರಿ. ಮನೆಯಲ್ಲಿ ಇರಿ ಮನವಿ ಮಾಡಿದ್ದಾರೆ.

Facebook Comments

Sri Raghav

Admin