ಮಲಯಾಳಂ ಹಿರಿಯ ನಟ ಸತಾರ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಕೊಚ್ಚಿ, ಸೆ.17- ಮಲಯಾಳಂ ಚಿತ್ರರಂಗದ ಹಿರಿಯ ನಟ ಸತಾರ್ (67) ಇಂದು ಮುಂಜಾನೆ ಕೊಚ್ಚಿಯಲ್ಲಿ ನಿಧನರಾಗಿದ್ದಾರೆ. ಪಿತ್ತಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಅಳುವಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಕೇರಳದ ಎರ್ನಾಕುಲಂ ಜಿಲ್ಲೆಯ ಕಡುಂಗಲ್ಲೂರಿನಲ್ಲಿ ಹುಟ್ಟಿದ ಸರ್ತಾ 1975ರಲ್ಲಿ ಎಂ.ಕೃಷ್ಣನ್ ನಾಯರ್ ನಿರ್ದೇಶನದ ಭರಾಯೆ ಅವಶ್ಯಮುಂಡು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1976ರಲ್ಲಿ ಅನಾವರಣಂ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ 1970 ಮತ್ತು 80ರ ದಶಕದಲ್ಲಿ ವಿಲನ್ ಪಾತ್ರಗಳಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದ್ದರು.

ಅಂದಿನ ಸಮಯದ ಖ್ಯಾತ ನಟಿ ಜಯ ಭಾರತಿ ಅವರನ್ನು 1979ರಲ್ಲಿ ವಿವಾಹವಾಗಿದ್ದರು. ಆದರೆ 1987ರಲ್ಲಿ ದಾಂಪತ್ಯ ಜೀವನ ಅಂತ್ಯವಾಗಿದ್ದ. ದಂಪತಿಗೆ ಜನಿಸಿದ್ದ ಪುತ್ರ ಕೃಷ್ ಸರ್ತಾ ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ತಮಿಳು, ತೆಲುಗು ಸೇರಿ ಸುಮಾರು 150 ಚಿತ್ರಗಳಲ್ಲಿ ಸತಾರ್‍ಅಭಿನಯಿಸಿದ್ದಾರೆ.

ಚಿತ್ರರಂಗಕ್ಕೆ ಅಲ್ಪ ವಿರಾಮ ಘೋಷಿಸಿದ್ದ ಸರ್ತಾ 2012ರಲ್ಲಿ 22 ಫಿಮೇಲ್ ಕೊಟ್ಟಾಯಂ ಮೂಲಕ ಮತ್ತೆ ಬಣ್ಣ ಹಚ್ಚಿದರು. 2014ರಲ್ಲಿ ಬಿಡುಗಡೆಯಾದ ಪರಯನ್ ಬಕಿವೆಚಾ ಅವರ ಕೊನೆಯ ಅಭಿನಯದ ಚಿತ್ರ. ಇಂದು ಸಂಜೆ 4 ಗಂಟೆಗೆ ಕುಡಂಗಲ್ಲೂರಿನ ಜುಮಾ ಮಸೀದಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin