ಮತ್ತೊಂದು ಭಯಾನಕ ವೈರಸ್ ಪತ್ತೆ, ಇಂದು ಕೊರೊನಾಗಿಂತಲೂ 10 ಪಟ್ಟು ಡೇಂಜರ್..!

ಈ ಸುದ್ದಿಯನ್ನು ಶೇರ್ ಮಾಡಿ

ಕ್ವಾಲಾಲಂಪುರ್( ಮಲೇಶಿಯಾ), ಆ.17- ಲೋಕ ಕಂಟಕವಾಗಿರುವ ಕೋವಿಡ್ -19 ಹೆಮ್ಮಾರಿ ಈಗಾಗಲೇ ವಿಶ್ವದಲ್ಲಿ 2 ಕೋಟಿಗೂ ಹೆಚ್ಚು ಸೋಂಕು ಮತ್ತು 8 ಲಕ್ಷಕ್ಕೂ ಅಕ ಮಂದಿಯ ಸಾವಿಗೆ ಕಾರಣವಾಗಿರುವ ಗಂಡಾಂತರ ನಡುವೆಯೇ ಮತ್ತೊಂದು ಆತಂಕಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ.

ಕೊರೊನಾಗಿಂತಲೂ 10 ಪಟ್ಟು ಸೋಂಕುಕಾರಕ ವೈರಸ್ ಅನ್ನು ಮಲೇಶಿಯಾ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಕೋವಿಡ್-19 ವೈರಸ್ ಸ್ವರೂಪದಲ್ಲೇ ಇರುವ ಈ ವೈರಾಣುವಿಗೆ ಡಿ614 ಜಿ ಎಂದು ಹೆಸರಿಡಲಾಗಿದೆ.

ಇದು ಈಗ ಕಾಡುತ್ತಿರುವ ಕೊರೊನಾ ವೈರಸ್‍ಗಿಂತಲೂ 10 ತೀವ್ರ ಸೋಂಕಿಗೆ ಕಾರಣವಾಗಲಿದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೊರೊನಾ ತೀವ್ರ ಸೋಂಕಿನಿಂದ ನರಳುತ್ತಿದ್ದ 45 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮೂವರಲ್ಲಿ ಡಿ614ಜಿ ವೈರಸ್‍ನ ಉಲ್ಬಣಗೊಂಡಿರುವುದು ಕಂಡು ಬಂದಿತು.

ವೈರಸ್‍ಗೆ ಪರಿಣಾಮಕಾರಿ ಔಷ ಅಥವಾ ಲಸಿಕೆ ಕಂಡು ಹಿಡಿದರೆ ಹೊಸ ವೈರಾಣುವನ್ನು ಸಹ ನಿಗ್ರಹಿಸಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಈಗಾಗಲೇ ಕೊರೊನಾ ವೈರಸ್ ವಿವಿಧ ಸ್ವರೂಪದಲ್ಲಿ ಕಾಡುತ್ತಿದ್ದು , ಹೊಸ ಸೋಂಕು ರೋಗಗಳು ಪತ್ತೆಯಾಗುತ್ತಿರುವುದು ಆತಂಕದ ಸಂಗತಿಯಾಗಿದೆ.

Facebook Comments

Sri Raghav

Admin