ಸೇನಾ ಕ್ರಾಂತಿ ನಂತರ ಮಾಲಿ ರಾಷ್ಟ್ರಾಧ್ಯಕ್ಷ ಇಬ್ರಾಹಿಂ ರಾಜೀನಾಮೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೊಮ್ಯಾಕೋ, ಆ.19-ಕ್ಷಿಪ್ರ ಸೇನಾಕ್ರಾಂತಿ ನಂತರ ಮಾಲಿ ರಾಷ್ಟ್ರಾಧ್ಯಕ್ಷ ಇಬ್ರಾಹಿಂ ಬೌಬಕರ್‍ಕೈಟಾ ನಿನ್ನೆ ತಡರಾಷ್ಟ್ರತಮ್ಮ ಹುದ್ದೆಗೆರಾಜೀನಾಮೆ ನೀಡಿದ್ದಾರೆ.

ಅಧ್ಯಕ್ಷರ ಪದಚ್ಯುತಿಗಾಗಿದೇಶಾದ್ಯಂತಜನರು ಕೆಲವು ತಿಂಗಳ ಕಾಲ ಪ್ರತಿಭಟನೆ ನಡೆಸಿದ್ದರು. ನಿನ್ನೆ ನಡೆದಕ್ಷಿಪ್ರ ವಿದ್ಯಮಾನದಲ್ಲಿ ಶಸ್ತ್ರಸಜ್ಜಿತ ಸೈನಿಕರುಅವರ ಮನೆ ಮೇಲೆ ಹಠಾತ್ ದಾಳಿ ನಡೆಸಿ ಅವರನ್ನುವಶಕ್ಕೆ ತೆಗೆದುಕೊಂಡಿತು.

ಇದಾದ ಕೆಲವು ಗಂಟೆಗಳ ನಂತರಇಬ್ರಾಹಿಂ ಬೌಬಕರ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ರಾಷ್ಟ್ರೀಯ ದೂರ ದರ್ಶನದಲ್ಲಿ ನಿನ್ನೆ ತಡರಾತ್ರಿ ದೇಶವನ್ನು ಉದ್ದೇಶಿಸಿ ವ್ಯಾಕುಗೊಂಡಿದ್ದ ಇಬ್ರಾಹಿಂ ಮಾತನಾಡಿದರು.

ಕೋವಿಡ್ ವೈರಸ್ ಭೀತಿಯಿಂದಾಗಿ ಮುಖಕ್ಕೆ ಮಾಸ್ಕ್ ಧರಿಸಿದ್ದ ಅವರು, ನನ್ನಅಕಾರಾವ ಪೂರ್ಣಗೊಳ್ಳಲು ಇನ್ನೂ ಮೂರು ವರ್ಷಗಳು ಬಾಕಿ ಇದೆ. ಅದಕ್ಕೆ ಮುನ್ನವೇ ನಾನು ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.

ಅವರು ದೂರ ದರ್ಶನದಲ್ಲಿ ಭಾಷಣ ಮಾಡುವಾಗ ನಿರ್ಗಮಿತ ಅಧ್ಯಕ್ಷ ಎಂಬ ಬ್ರೇಕಿಂಗ್ ನ್ಯೂಸ್ ಬಿತ್ತರವಾಗಿತ್ತು. ಅಕಾರ ಉಳಿಸಿಕೊಳ್ಳಲು ನಾನು ಎಂದಿಗೂ ರಕ್ತಪಾತ ಬಯಸುವುದಿಲ್ಲ. ನಾನು ನನ್ನ ಹುದ್ದೆಗೆರಾಜೀನಾಮೆ ನೀಡುತ್ತಿದ್ದೇನೆ. ನನ್ನ ಸರ್ಕಾರ ಮತ್ತು ನ್ಯಾಷನಲ್‍ಅಸೆಂಬ್ಲಿಯನ್ನು ವಿಸರ್ಜಿಸುತ್ತಿದ್ದೇನೆ ಎಂದು ಅವರು ಘೋಷಿಸಿದರು.

2013ರಲ್ಲಿ ಚುನಾಯಿತರಾದ ಇಬ್ರಾಹಿಂ ಎಂಟು ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಕಳೆದ ಕೆಲವು ತಿಂಗಳಿನಿಂದ ಅಧ್ಯಕ್ಷರ ಆಡಳಿತ ವೈಖರಿ ಬಗ್ಗೆ ಜನರು ಪ್ರತಿಭಟನೆ ನಡೆಸಿದ್ದರು. ಇದೇ ಸಂದರ್ಭದಲಿ ್ಲಇಸ್ಲಾಮಿಕ್ ಬಂಡುಕೋರರ ಉಪಟಳವೂ ತೀವ್ರವಾಗಿತ್ತು.

ನಿನ್ನೆ ಶಸ್ತ್ರಸಜ್ಜಿತ ಸೇನೆ ಅಧ್ಯಕ್ಷರ ವಿರುದ್ದಕ್ಷಿಪ್ರಕ್ರಾಂತಿ ನಡೆಸಿತು. ಸರ್ಕಾರ ಶಸ್ತ್ರಾಸ್ತ್ರಕೋಠ ಮೇಲೆ ದಾಳಿ ನಡೆಸಿ ಅದರಲ್ಲಿದ್ದಎಲ್ಲ ಅಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿತು. ಬಳಿಕ ಪ್ರಧಾನಮಂತ್ರಿ ಬೌಬೌ ಕಿಸ್ಸೆ ಮತ್ತುಇಬ್ರಾಹಿಂಅವರನ್ನು ವಶಕ್ಕೆ ತೆಗೆದುಕೊಂಡಿತು.

ಈ ಮಧ್ಯೆ, ಮಾಲಿಯಲ್ಲಿ ಉದ್ಭವಿಸಿರುವ ಸಮಸ್ಯೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಮಹತ್ವದ ಚರ್ಚೆಗಳು ನಡೆದಿದ್ದು, ಮುಂದಿನ ಬೆಳವಣಿಗೆಯನ್ನು ಕಾದು ನೋಡಲಾಗುತ್ತಿದೆ. ಮಾಲಿ ದೇಶದಲ್ಲಿ ವಿಶ್ವಸಂಸ್ಥೆಯ 15,000ಕ್ಕೂ ಹೆಚ್ಚು ಶಾಂತಿ ಪಾಲನಾ ಪಡೆಯ ಸೈನಿಕರಿದ್ದಾರೆ.

Facebook Comments

Sri Raghav

Admin