ಸಂಕಷ್ಟದಲ್ಲಿ ಮಾಲ್ ಮಾಲೀಕರು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಮೇ.7- ದೇಶದ ಪ್ರಮುಖ ನಗರಗಳಲ್ಲಿರುವ ಮಾಲ್‍ಗಳ ಬಾಡಿಗೆ ಶೇ.40 ರಿಂದ 50 ರಷ್ಟು ಕುಸಿದಿದೆ. ಕೊರೊನಾ ಸೋಂಕಿನ ಎರಡನೆ ಅಲೆ ಕಾಣಿಸಿಕೊಂಡ ನಂತರ ಕಳೆದ ಜನವರಿಯಿಂದ ಮಾಲ್‍ಗಳಲ್ಲಿರುವ ಮಳಿಗೆಗೆಗಳ ಬಾಡಿಗೆ ದರ ಕುಸಿಯುತ್ತಿದ್ದು, ಇದು ಇನ್ನು ಕೆಲ ತಿಂಗಳು ಕಾಲ ಮುಂದುವರೆಯಲಿದೆ ಎಂದು ತಿಳಿದುಬಂಧಿದೆ.

ಮಾಲ್‍ಗಳಲ್ಲಿರುವ ಮಳಿಗೆಗಳಲ್ಲಿ ಕನಿಷ್ಠ ವ್ಯಾಪಾರ ವಹಿವಾಟು ನಡೆಯುತಿತ್ತು. ಹೀಗಾಗಿ ಮಾಲ್‍ಗಳ ಮಾಲಿಕರು ನೆಮ್ಮದಿಯಾಗಿದ್ದರು. ಕೊರೊನಾ ಕಾಣಿಸಿಕೊಂಡ ನಂತರ ವ್ಯಾಪಾರ ವಹಿವಾಟು ಕುಸಿದಿರುವುದರಿಂದ ಮಳಿಗೆಗಳು ಖಾಲಿಯಾಗುತ್ತಿವೆ.

ಇನ್ನುಕೆಲವರು ಕಡಿಮೆ ಬಾಡಿಗೆ ಹಣ ನೀಡುತ್ತಿರುವುದರಿಂದ ಕಳೆದ ಹತ್ತು ವರ್ಷಗಳಲ್ಲಿ ಇದೇ ಮೊದಲ ಭಾರಿಗೆ ಮಾಲ್ ಮಾಲೀಕರು ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ಮಾಲ್ ಮ್ಯಾನೆಜ್‍ಮೆಂಟ್ ಸಂಸ್ಥೆಯ ಸಂಸ್ಥಾಪಕ ಸುಶೀಲ್ ದುಂಗರ್‍ವಾಲ್ ತಿಳಿಸಿದ್ದಾರೆ.

Facebook Comments