ಕೊರೊನಾದಿಂದ ದೂರವಿರಲು ಮಲ್ಲಿಕಾ ಶೆರಾವತ್ ಕೊಟ್ಟ ಸಲಹೆ ಏನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಈಗ ವಿಶ್ವದೆಲ್ಲೆಡೆ ಕೊರೊನಾದ ಸುದ್ದಿ, ಕೋವಿಡ್-19 ವೈರಸ್‍ನದ್ದೇ ಆತಂಕ. ಇದೇ ಕಾರಣಕ್ಕಾಗಿ ಅನೇಕ ನಗರಗಳು ಸ್ತಬ್ಧವಾಗಿ ಜನರು ಮುನ್ನೆಚ್ದರಿಕೆ ಕ್ರಮವಾಗಿ ಮನೆಯೊಳಗೇ ಗೃಹಬಂಧನಕ್ಕೆ ಒಳಗಾಗಿದ್ದಾರೆ. ಬಾಲಿವುಡ್‍ನ ಅನೇಕ ತಾರೆಯರೂ ಕೂಡ ಚಿತ್ರೀಕರಣ ಮತ್ತು ಇತರ ಇವೆಂಟ್‍ಗಳನ್ನು ಮುಂದೂಡಿದ್ದಾರೆ.

ಕೊರೊನಾ ವೈರಾಣು ಸರ್ವಾಂತರ್ಯಾಮಿಯಾಗಿದ್ದು, ಎಲ್ಲಿ ಬೇಕಾದರೂ ಅದು ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬಿ-ಟೌನ್ ಸೆಲೆಬ್ರೆಟಿಗಳು ಜಿಮ್‍ಗಳಿಗೆ ಹೋಗುವ ಬದಲು ತಮ್ಮ ಮನೆಗಳಲ್ಲಿಯೇ ವ್ಯಾಯಾಮ ಮತ್ತು ವರ್ಕ್‍ಔಟ್‍ಗಳನ್ನು ಮಾಡುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಬಾಲಿವುಡ್ ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್ ಜನರಿಗೆ ಉತ್ತಮ ಸಲಹೆಯೊಂದನ್ನು ನೀಡಿದ್ದಾಳೆ.

ಮನೆಯೊಳಗೇ ಪ್ರತ್ಯೇಕಗೊಂಡಿರುವ ಮಲ್ಲಿಕಾ ವರ್ಕ್‍ಔಟ್ ಮತ್ತು ಯೋಗ ಮಾಡುತ್ತಿರುವ ಫೋಟೊಗಳನ್ನು ಅಭಿಮಾನಿಗಳಿಗಾಗಿ ಮಲ್ಲಿಕಾ ಶೀರ್ ಮಾಡಿದ್ದಾಳೆ. ಮನೆಯಲ್ಲಿದ್ದುಕೊಂಡೇ ಯೋಗ ಮಾಡಿ ಇದರಿಂದ ನೀವು ಆರೋಗ್ಯವಾಗಿರಬಹುದು. ಮಾತ್ರವಲ್ಲದೇ ನಿಮ್ಮ ಸುತ್ತಮುತ್ತ ಇವರ ವೈರಾಣುಗಳ ವಿರುದ್ಧ ಹೋರಾಡಲು ಯೋಗಾಸನ ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾಳೆ.

ವೈರಸ್ ಒಡ್ಡಿರುವ ಹೊಸ ಸವಾಲುಗಳಿಗೆ ನಮ್ಮ ಸಂಪ್ರದಾಯಿಕ ಪರಿಹಾರೋಪಾಯಿವಿದೆ ಎಂದು ಶೀರ್ಷಿಕೆ ಬರೆದಿರುವ ಶೇರಾವತ್, ಯೋಗ, ಧಾನ್ಯ ಮತ್ತು ಪ್ರಾರ್ಥನೆಗಳಂತ ನಮ್ಮ ಪ್ರಾಚೀನ ಆಚರಣೆಗಳು ಇಂಥ ಪಿಡುಗನ್ನು ನಿವಾರಿಸುತ್ತವೆ.  ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಜನರು ಆರೋಗ್ಯವಾಗಿರುಬಹುದು. ಇಂಥ ಸಮಯದಲ್ಲಿ ಇದು ತೀರಾ ಅಗತ್ಯವೂ ಆಗಿದೆ ಎಂದು ಹಿಸ್..ಸ್ ಸಿನಿಮಾ ಖ್ಯಾತಿಯ ನಟಿ ಹೇಳಿದ್ದಾಳೆ. ಮಲ್ಲಿಕಾ ಶೇರಾವತ್ ಅಲ್ಲದೇ ಬಾಲಿವುಡ್ ಖ್ಯಾತ ತಾರೆಯರಾದ ಕತ್ರಿನಾ ಕೈಫ್ ಮತ್ತು ಸೋನಾಕ್ಷಿ ಸಿನ್ಹಾ ಸಹ ಈಗ ಮನೆಯಲ್ಲೇ ಇದ್ದು ವ್ಯಾಯಾಮ ಮತ್ತು ವರ್ಕ್‍ಔಟ್‍ಗಳನ್ನು ಮಾಡುತ್ತಿದ್ದಾರೆ.

ಮಲ್ಲಿಕಾ ಶೇರಾವತ್ ಬಾಲಿವುಡ್‍ನ ಬೋಲ್ಡ್ ಅಂಡ್ ಬ್ಯುಟಿಫುಲ್ ನಟಿ. ವಸ್ತ್ರದ್ವೇಷಿಯಾದ ಮಲ್ಲಿಕಾ ವಿವಾದಿತ ನಟಿಯೂ ಆಗಿ ಸುದ್ದಿ ಮಾಡಿದ್ದಾಳೆ. 2002ರಲ್ಲಿ ಜೀನಾ ಸಿರ್ಫ್ ಮೇರೇ ಲಿಯೆ ಸಿನಿಮಾ ಮೂಲಕ ಬಾಲಿವುಡ್‍ಗೆ ಎಂಟ್ರಿಯಾದ ರೀಮಾ ಲಂಬಾ ನಂತರ ಮಲ್ಲಿಕಾ ಶೇರಾವತ್ ಆಗಿ ಗುರುತಿಸಿಕೊಂಡಳು.

2004ರಲ್ಲಿ ತೆರೆಕಂಡ ಮರ್ಡರ್‍ನಲ್ಲಿ ಈಕೆಯ ಬೋಲ್ಡ್ ಪಾತ್ರ ಹಾಲಿವುಡ್ ಮಂದಿಯ ಹುಬ್ಬೇರುವಂತೆ ಮಾಡಿತು. ಸೂಪರ್‍ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಮಲ್ಲಿಕಾ ಕಳೆದ ವರ್ಷದಿಂದ ಚಿತ್ರ ರಂಗದಿಂದ ದೂರ ಉಳಿದಿ ದ್ದಾಳೆ.

Facebook Comments

Sri Raghav

Admin