ಮೋದಿ ಒಬ್ಬ ಮಹಾ ಸುಳ್ಳುಗಾರ : ಖರ್ಗೆ ಕಿಡಿ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಮಾ.9- ಪ್ರಧಾನಿ ನರೇಂದ್ರ ಮೋದಿ ಓರ್ವ ಸುಳ್ಳುಗಾರ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮೋದಿ ಅವರು ಕೇವಲ ಚುನಾವಣಾ ಪ್ರಚಾರ ಮಾಡಿದ್ದಾರೆ. ಪ್ರಚಾರದ ಸಂದರ್ಭದಲ್ಲ ಅವರು ಯಾವುದೇ ಅಭಿವೃದ್ಧಿ ಕೆಲಸದ ಬಗ್ಗೆ ಪ್ರಸ್ತಾಪಿಸಿಲ್ಲ ಎಂದರು.

ಮೋದಿ ಕೇವಲ ಬೆಂಗಳೂರು ಯೋಜನೆ ಹಾಗೂ ಹುಬ್ಬಳ್ಳಿ ಧಾರವಾಡದ ಒಂದು ಯೋಜನೆ ಬಗ್ಗೆ ಮಾತನಾಡಿದ್ದು ಬಿಟ್ಟರೆ ತಾವು ಈವರೆಗೆ ಜನರಿಗೆ ಮಾಡಿದ್ದೇನು ಎಂಬುದನ್ನು ಹೇಳಲಿಲ್ಲ. ಯಾವಾಗಲು ಸುಳ್ಳು ಹೇಳಿ ಜನರಿಗೆ ಮೋಸ ಮಾಡುವುದೇ ಮೋದಿ ಕಾಯಕವಾಗಿದೆ ಎಂದು ಗುಡುಗಿದರು.

ಮೋದಿ 5 ವರ್ಷಗಳಲ್ಲಿ ಸಾಧಿಸಿದ್ದು ಏನೂ ಇಲ್ಲ. ನಿರದ್ಯೋಗಿಗಳಿಗೆ ನೌಕರಿ ಕೊಡಲಿಲ್ಲ. ಅವರ ವರದಿ ಪ್ರಕಾರವೇ 3 ಲಕ್ಷ ನೌಕರಿ ಕಡಿಮೆಯಾಗಿದೆ. 5 ವರ್ಷದಲ್ಲಿ 27 ಲಕ್ಷ ನೌಕರಿ ಕೊಡಲಾಗಿದೆ ಎಂದು ದೂರಿದರು.

ರಾಮ ದೇವರ ಮೇಲೆ ಆಣೆ ಇಟ್ಟು ಕಪ್ಪುಹಣ ತರುತ್ತೇವೆ ಎಂದರು. ಆದರೆ ಈವರೆಗೆ ಕಪ್ಪುಹಣದ ಸುಳಿವೇ ಇಲ್ಲ. ರೈತರ ಆತ್ಮಹತ್ಯೆಯ ಬಗ್ಗೆ ಕಾಳಜಿ ಇಲ್ಲ. ಇನ್ಶುರೆನ್ಸ್ ಕಂಪನಿಗಳಿಗೆ ಲಾಭ ಮಾಡಿಕೊಡುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಸೇನಾ ಕಾರ್ಯಾಚರಣೆಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಯುಪಿಎ ಕಾಲದಲ್ಲಿ ಕೂಡಾ ಸರ್ಜಿಕಲ್ ದಾಳಿ ನಡೆದಿವೆ. ಸೈನಿಕರ ಹೆಣದ ಮೇಲೆ ರಾಜಕಿಯ ಸರಿಯಲ್ಲ, ಎಲ್ಲರೂ ಒಗ್ಗಟ್ಟಾಗಿ ನಡೆಯಬೇಕು ಎಂದರು. ಮೋದಿಯವರ 5 ವರ್ಷಗಳ ವೈಫಲ್ಯಗಳನ್ನು ಜನರ ಮುಂದಿಡಲಿದ್ದೇವೆ ಎಂದು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ