Friday, March 29, 2024
Homeರಾಜ್ಯಮಲ್ಲಿಕಾರ್ಜುನ ಖರ್ಗೆಯವರೇ ಬಿಜೆಪಿಗೆ ಬರುವ ಸಾಧ್ಯತೆ ಇದೆ : ಯತ್ನಾಳ್

ಮಲ್ಲಿಕಾರ್ಜುನ ಖರ್ಗೆಯವರೇ ಬಿಜೆಪಿಗೆ ಬರುವ ಸಾಧ್ಯತೆ ಇದೆ : ಯತ್ನಾಳ್

ಬೆಂಗಳೂರು, ಫೆ.22- ವಿಧಾನಸಭೆಯಲ್ಲಿ ಬಜೆಟ್ ಮೇಲೆ ಚರ್ಚೆಯ ನಡುವೆ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಮತ್ತೊಮ್ಮೆ ಗಮನ ಸೆಳೆಯುವ ಹೇಳಿಕೆ ನೀಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಬಿಜೆಪಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಿದರು. ಬಿಜೆಪಿ ಉಪನಾಯಕ ಅರವಿಂದ ಬೆಲ್ಲದ್ ಬಜೆಟ್ ಮೇಲೆ ಚರ್ಚೆ ಮಾಡುವಾಗ, ಸಿದ್ದರಾಮಯ್ಯ ಅವರ ಸರ್ಕಾರ ಸಾಲ ಮಾಡಿ ತುಪ್ಪ ತಿನ್ನುವಂತಹ ಬಜೆಟ್ ಮಂಡಿಸಿದೆ.

ರೈತರ ಮೇಲಷ್ಟೆ ಅಲ್ಲ ಮುಖ್ಯಮಂತ್ರಿಯವರು ಡಿ.ಕೆ.ಶಿವಕುಮಾರ್ ಮೇಲಿನ ಸಿಟ್ಟಿಗೆ ನೀರಾವರಿ ಇಲಾಖೆಗೆ ಕಡಿಮೆ ಅನುದಾನ ಕಡಿತ ಮಾಡಿದ್ದಾರೆ. ಸಚಿವ ಪ್ರಿಯಾಂಕ ಖರ್ಗೆಗೆ ರಾಜ್ಯದ ಉದಯೋನ್ಮುಖ ನಾಯಕ ಎನ್ನುತ್ತಿದ್ದಂತೆ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಎಷ್ಟು ಬಾಕಿ ಉಳಿಸಿತ್ತು ಎಂದು ಹೇಳಿ ಎಂದು ಸವಾಲು ಹಾಕಿದರು.

ಸಚಿವ ಪ್ರಿಯಾಂಕ್ ಖರ್ಗೆ ಇದಕ್ಕೆ ಧ್ವನಿಗೂಡಿಸಿದರು. ಮಧ್ಯ ಪ್ರವೇಶಿಸಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಶೇ.40ರಷ್ಟು ಕಮಿಷನ್ ತನಿಖೆ ಪೂರ್ಣಗೊಳಿಸಿ. ಈ ಸರ್ಕಾರ ಬಂದು ಒಂಬತ್ತು ತಿಂಗಳಾಯಿತು. ಪಿಎಸ್‍ಐ ಹಗರಣದ್ದು ತನಿಖೆ ಪೂರ್ಣಗೊಂಡಿಲ್ಲ ಎಂದಾಗ, ಪ್ರಿಯಾಂಕ್ ಖರ್ಗೆ, ಬಹಿರಂಗವಾಗಿ ಹೇಳಿಕೆ ನೀಡಿದ್ದ ಯತ್ನಾಳ್ ಅವರು ಪಿಎಸ್‍ಐ ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ವೀರಪ್ಪ ಆಯೋಗದ ಮುಂದೆ ಹೇಳಿಕೆ ನೀಡಿಲ್ಲ. ನಾವು ನಿಮ್ಮ ಹೇಳಿಕೆ ಕಾಯುತ್ತಿದ್ದೇವೆ. ತನಿಖೆಗೆ ನಿಮ್ಮ ಸಹಕಾರ ಬೇಕಿದೆ ಎಂದು ಮನವಿ ಮಾಡಿದರು.

ವಿದ್ಯುತ್ ಕಂಬದಿಂದ ಬಿದ್ದು ಲೈನ್‍ಮನ್ ಸಾವು

ಇನ್ನು ಶೇ.40ರಷ್ಟು ಹಗರಣದಲ್ಲಿ ಎಷ್ಟು ನುಂಗಿದ್ದಾರೆ ಎಂದರೆ, ಅದರ ಆಳ ಅಗಲವೇ ಗೊತ್ತಾಗುತ್ತಿಲ್ಲ. ಎಂದು ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತ ಪಡಿಸಿದರು. ಬಸನಗೌಡ ಪಾಟೀಲ್ ಯತ್ನಾಳ್ ಈ ಸರ್ಕಾರ ಬಂದಾಗ ಶುರುವಾಗಿರುವ ಶೇ.40ರಷ್ಟು ಕಮಿಷನ್ ಬಗ್ಗೆಯೂ ತನಿಖೆಯಾಗಬೇಕು. ಸಿಬಿಐಗೆ ವಹಿಸಿ ಎಂದರು. ಆಗ ಕಾಂಗ್ರೆಸ್ ಶಾಸಕರು ಯತ್ನಾಳ್ ಅವರನ್ನು ಕೆಣಕಿದಾಗ, ಸರ್ವಪಕ್ಷದ ಅಧಿಕೃತ ವಿರೋಧ ಪಕ್ಷದ ನಾಯಕ ನಾನೇ ಎಂದು ಯತ್ನಾಳ್ ಸೆಟೆದು ನಿಂತರು.

ಮುಂದುವರೆದ ಚರ್ಚೆಯಲ್ಲಿ ಅರವಿಂದ್ ಬೆಲ್ಲದ್ ಪ್ರಿಯಾಂಕ್ ಖರ್ಗೆ ಕಾಂಗ್ರೆಸ್‍ನಿಂದ ತಾವು ಮುಖ್ಯಮಂತ್ರಿಯಾಗುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಯಾಗಬಹುದು ಎಂದಾಗ ಬಸನಗೌಡ ಪಾಟೀಲ್ ಯತ್ನಾಳ್, ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಕಾಂಗ್ರೆಸ್ ನ ಕಮಲ್ ನಾಥ್ ಬಿಜೆಪಿಗೆ ಬರುತ್ತಿದ್ದಾರೆ. ಮುಂದೆ ಮತ್ತಷ್ಟು ಮಂದಿ ಬರುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಕೂಡ ಬಿಜೆಪಿಗೆ ಬರುತ್ತಾರೆ ಎಂದರು.

ಆಗ ಪ್ರಿಯಾಂಕ್ ಖರ್ಗೆ, ನಮ್ಮ ಹೆಣ ಕೂಡ ಬಿಜೆಪಿಗೆ ಹೋಗಲ್ಲ. ಅದು ನಮ್ಮ ರಕ್ತದಲ್ಲೇ ಇಲ್ಲ. ಸಂವಿಧಾನ ಹೇಗೆ ನಿಮ್ಮ ರಕ್ತದಲ್ಲಿ ಇಲ್ಲವೋ ಹಾಗೇ, ಆರ್ ಎಸ್ ಎಸ್ ನಮ್ಮ ರಕ್ತದಲ್ಲಿ ಇಲ್ಲ ಎಂದರು. ಯತ್ನಾಳ್, ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಮಾಡುತ್ತಿರುವುದು ನಾವೇ ಎಂದು ಸಮರ್ಥಿಸಿಕೊಂಡರು. ಪ್ರಿಯಾಂಕ್ ಖರ್ಗೆ, ನೀವು ಹೇಗೆ ಸಂವಿಧಾನ ಸರಿಯಾಗಿ ಜಾರಿ ಮಾಡಿದ್ದೀರಾ ಸರ್, ಒಂದು ಧರ್ಮಕ್ಕೆ ಮಾತ್ರ ಆದ್ಯತೆ ನೀಡುವುದು ಸಂವಿಧಾನ ಬದ್ಧವೇ ಎಂದು ಪ್ರಶ್ನಿಸಿದರು.

ಶಿಕ್ಷಕರ ಕ್ಷೇತ್ರದ ಗೆಲುವು ಲೋಕಸಭೆಗೆ ದಿಕ್ಸೂಚಿ : ಸಿಎಂ

ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಎದ್ದು ನಿಂತು, ಅರವಿಂದ್ ಬೆಲ್ಲದ್ ಅವರು ಸಾಲದ ಬಗ್ಗೆ ಹೇಳಿದ್ದಾರೆ, ಅದರ ಬಗ್ಗೆ ನಾನು ಸ್ಪಷ್ಟನೆ ನೀಡಬೇಕು ಎಂದು ಮಾತನಾಡಲು ಅವಕಾಶ ಕೇಳಿದರು. ಅದಕ್ಕೆ ಚರ್ಚೆಯಲ್ಲಿ ಭಾಗವಹಿಸಿದ್ದ ಅರವಿಂದ್ ಬೆಲ್ಲದ್ ಅವಕಾಶ ನೀಡಲಿಲ್ಲ. ನಾನು ಯೀಡ್ಲ್ ಆಗಿಲ್ಲ ಎಂದು ಪ್ರದೀಪ್ ಈಶ್ವರ್ ಹೇಳಿದರು. ಮಾತನಾಡುವ ಸರದಿಯಲ್ಲಿ ಇರುವವರು ಅರವಿಂದ್ ಬೆಲ್ಲದ್ ಅವರು ಯೀಲ್ಡ್ ಆಗಬೇಕಿರುವುದು ಅವರು ನೀವಲ್ಲ ಎಂದು ಹಿರಿಯ ಶಾಸಕರು ಪ್ರದೀಪ್ ಈಶ್ವರ್‍ಗೆ ತಿಳಿ ಹೇಳಿದರು.

RELATED ARTICLES

Latest News