ಮಲೆನಾಡಿಗರಿಗೆ ನೇಣು ಕುಣಿಕೆಯಾದ ಸೆಕ್ಷನ್ 17 ಹಾಗೂ 14ರ ಬಗ್ಗೆ ಜಾಗೃತಿ ಅಗತ್ಯ

ಈ ಸುದ್ದಿಯನ್ನು ಶೇರ್ ಮಾಡಿ

#ಜಾದೂಗಾರ್ ನಿಶ್ಚಲ್ ಶೆಟ್ಟಿ
ಮಲೆನಾಡು ಎಚ್ಚರಗೊಳ್ಳಬೇಕಿದೆ. ಸೆಕ್ಷನ್ 17 ಮತ್ತು 14ರ ಬಗ್ಗೆ ಜಾಗೃತಿಯೊಂದಿಗೆ ಮಲೆನಾಡನ್ನು ಉಳಿಸಲು ಹೋರಾಟ ಮಾಡುತ್ತಿರುವವರೊಂದಿಗೆ ನಾವೆಲ್ಲ ಕೈ ಜೋಡಿಸಬೇಕಿದೆ.  ಎನ್‍ಜಿಒಗಳ ಹಸಿರು ಹಣದಂಧೆಯ ಕಾರ್ಪೊರೇಟ್ ಹಗರಣಕ್ಕೆ ಈಗಾಗಲೇ ಅನೇಕ ಮಲೆನಾಡ ಮೂಲ ನಿವಾಸಿಗಳು, ಉದ್ಯಮಿಗಳು ಬಲಿಯಾಗಿದ್ದಾರೆ.

ಹೀಗಾಗಿ ಸೆಕ್ಷನ್ 17ರ ಬಗ್ಗೆ ಜಾಗೃತರಾಗಿ ನಾವು ನಮ್ಮ ಭೂಮಿಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ನ್ಯಾಯವಾದಿ ಕಾಂಗ್ರೆಸ್ ಮುಖಂಡರೂ ಆದ ಸುೀರ್‍ಕುಮಾರ್ ಮುರೋಳ್ಳಿ ಅವರು ಪ್ರತಿಪಾದಿಸಿದ್ದಾರೆ ಮತ್ತು ಈ ಬಗ್ಗೆ ಆ ಭಾಗದ ಜನರ ಬೆಂಬಲಕ್ಕೆ ನಿಂತಿದ್ದಾರೆ. ಶಾಸಕರಾದ ಟಿ.ಡಿ.ರಾಜೇಗೌಡ ಅವರು ಕೂಡ ಸೆಕ್ಷನ್ 17ರ ಕುರಿತು ಜಾಗೃತಿ ಮೂಡಿಸುತ್ತ ಸಾವಿರಾರು ತಕರಾರು ಅರ್ಜಿಗಳನ್ನು ನೀಡಿ ಜನರ ಭೂಮಿ ಉಳಿಸಲು ಅಹರ್ನಿಷಿ ಶ್ರಮಿಸುತ್ತಿದ್ದಾರೆ.

ಏನಿದು ಸೆಕ್ಷನ್ 17? ಸೆಕ್ಷನ್ 17 ಅಂದರೆ Proposal to declare without hear ಅಂದರೆ ಯಾವುದೇ ಒಂದು ಭೂಮಿ ಅರಣ್ಯ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಂಡು ಅರಣ್ಯೇತರ ಚಟುವಟಿಕೆಗಳಿಗೆ, ನೆಲದ ನಾಗರಿಕರಿಗೆ ಅವಕಾಶ ಕಲ್ಪಿಸದೆ ಹಿಂಬಾಗಿಲಿನಿಂದ ಜನವಸತಿಯೂ ಸೇರಿದಂತೆ ಎಲ್ಲ ಕೃಷಿ ಭೂಮಿಯನ್ನು ಆಕ್ರಮಿಸಿಕೊಳ್ಳುವ ಆದೇಶದ ಪೂರ್ವ ತಯಾರಿ ಇನ್ನೂ ಅಪಾಯಕಾರಿ ವಿಷಯಗಳನ್ನು ಮಲೆನಾಡ ಜನರು ಮುಂದೆ ಎದುರಿಸಬೇಕಿದೆ.

ಒಮ್ಮೆ ಸೆಕ್ಷನ್ 17ರಡಿ ಭೂ ಪರಿವರ್ತನೆಯನ್ನು ಅರಣ್ಯ ಇಲಾಖೆ ಮಾಡಿಕೊಂಡರೆ ಯಾವ ಘನತೆವೆತ್ತ ರಾಷ್ಟ್ರಪತಿ, ರಾಜ್ಯಪಾಲರು ಸಹ ಕಾಯ್ದೆಯನ್ನು ಮುಟ್ಟಲು ಬರುವುದಿಲ್ಲ. ಅಲ್ಲದೆ ಸೆಕ್ಷನ್ 7ರ ಡಿಕ್ಲೆರೇಷನ್ ನಂತರ ವಿವಿಧ ಕಾರಿಡಾರ್ ಯೋಜನೆಗಳನ್ನು ಉದಾಹರಣೆಗೆ ಎಲಿಫೆಂಟ್ ಕಾರಿಡಾರ್, ಹುಲಿ ಕಾರಿಡಾರ್, ಕೋಬ್ರಾ ಕಾರಿಡಾರ್, ನ್ಯಾಷನಲ್ ಪಾರ್ಕ್‍ಗಳಿಗೆ ವಿಸ್ತರಿಸಿಕೊಂಡು ಮನೆಲಾಡು ಜನರನ್ನು ಅತ್ಯಂತ ಉಪಾಯವಾಗಿ ಹೊಡೆಯದೆ, ಬಡಿಯದೆ ಎತ್ತಂಗಡಿ ಮಾಡಿಸುವ ಒಂದು ವಾಮಮಾರ್ಗದ ಕಾಯ್ದೆಯಾಗಿದೆ.

ಈ ಬಗ್ಗೆ ನಮ್ಮನ್ನಾಳುವ ರಾಜಕಾರಣಿಗಳಿಗೆ ಚುನಾವಣೆಯೇ ಮುಖ್ಯ ಹೊರತು ಮುಂದಿನ ಜನಾಂಗವಲ್ಲ ಎಂಬ ಮುರೋಳ್ಳಿ ಅವರ ಆತಂಕ.
ಸೆಕ್ಷನ್ 17ರ ಆದೇಶದ ನಂತರ ನಮ್ಮೂರಿನ ಚೌಡಿ, ಭೂತ, ರಣ, ಮಸೀದಿ, ಚರ್ಚ್, ಗದ್ದುಗೆ ಇವೆಲ್ಲವನ್ನೂ ರಸ್ತೆ ಬದಿಗಳಲ್ಲಿ ಸ್ಥಾಪಿಸ ಬೇಕಾಗುತ್ತದೆ. ಈಗಾಗಲೇ ಕೆರೆಕಟ್ಟೆ (ಶೃಂಗೇರಿ-ಕಾರ್ಕಳ ಅಭಯಾರಣ್ಯ ವ್ಯಾಪ್ತಿ) ಸುತ್ತಮುತ್ತಲಿನ ಬಹುತೇಕ ಮನೆತನದ ದೇವರುಗಳು ಬೀದಿಗೆ ಬಂದಿವೆ.

ಇದಕ್ಕೆ ಸೂಕ್ತ ಪ್ರತಿಭಟನಾ ಅಸ್ತ್ರವನ್ನು ಹೊಂದಿದ್ದರೆ ಕಾಯ್ದೆಯಡಿ ನಮ್ಮ ಭೂಮಿ, ಜಮೀನು, ಮನೆಗಳಲ್ಲದೆ ಪಾರಂಪರಿಕ ಭಾವನೆಗಳನ್ನು ಸಹ ಅರಣ್ಯ ಇಲಾಖೆಗೆ ಮರ್ಯಾದೆಯಿಂದ ಕೊಟ್ಟು ಹೊರಬರಬೇಕಾಗುತ್ತದೆ. ಈಗಾಗಲೇ ಅರಣ್ಯ ಇಲಾಖೆಯವರು ಜೆಸಿಬಿ ಮೂಲಕ ತೋಡಿಸುತ್ತಿರುವ ಟ್ರಂಚುಗಳು ಸಹ ಅರಣ್ಯದ ಗಡಿಕಟ್ಟುವ ಆ ಮೂಲಕ ಸೆಕ್ಷನ್ 17 ಆಗಿ ಪರಿವರ್ತಿಸುವ ಬುದ್ಧಿವಂತಿಕೆಯ ನಡೆ ಆಗಿದೆ.

ಈ ಟ್ರಂಚ್ ವಿಚಾರದಲ್ಲಿ ಅಕ್ಕಪಕ್ಕದ ದಾಯಾದಿ, ಯಾವ ಪಕ್ಷದ ವೈಯಕ್ತಿಕ ದ್ವೆಷವಿದ್ದರೂ ಸಹ ಟ್ರಂಚ್ ತೋಡುವ ವಿಚಾರದಲ್ಲಿ ಅರಣ್ಯ ಇಲಾಖೆಗೆ ದೂರು ನೀಡಬೇಡಿ. ಏಕೆಂದರೆ, ಅವರು ಬಂದು ಮೊದಲು ಮಾಡುವ ಕೆಲಸವೇ ಟ್ರಂಚ್ ಹೊಡೆಯುವುದು ಆ ಮೂಲಕ ದೂರು ಕೊಟ್ಟವರನ್ನೂ ಸೇರಿಸಿ ಇಡೀ ಊರನ್ನೇ ಖಾಲಿ ಮಾಡಿಸುವ ಹುನ್ನಾರ ಅಡಗಿದೆ. ಈ ವಿಚಾರದಲ್ಲಿ ವೈಯಕ್ತಿಕ, ರಾಜಕೀಯ ಅಸೂಯೆ ಬೇಡ. ಒಗ್ಗಟ್ಟಾಗಿ ಹೋರಾಟ ಮಾಡಿದರೆ ಮಾತ್ರ ಸಾಧ್ಯವಿದೆ.

ಹಾಗಾದರೆ ಹೋರಾಟ ಎಂದರೆ ಏನು? ಗುಂಪುಗೋಡಿ ಕಿರುಚಾಡುವುದು ಅಲ್ಲ, ಮಂತ್ರಿ ಮಹೋದಯರಿಗೆ ಮನವಿ ಕೊಟ್ಟರೆ ಪ್ರಯೋಜನವಿಲ್ಲ. ಇರುವ ಏಕೈಕ ಮಾರ್ಗವೆಂದರೆ ತಕರಾರು ಅರ್ಜಿ ನೀಡುವುದು ಸೆಕ್ಷನ್ 17 ಈ ಸಂಬಂಧ ಪ್ರತಿ ಜಿಲ್ಲೆಯಲ್ಲೂ ಒಬ್ಬೊಬ್ಬ ಫಾರೆಸ್ಟ್ ಸೆಟಲ್‍ಮೆಂಟ್ ಆಫೀಸರ್ ಇದ್ದಾರೆ. ಅವರ ಬಳಿ ವೈಯಕ್ತಿಕವಾಗಿ ಮತ್ತು ಸಮುದಾಯದ ಮೂಲಕ (ಸಮುದಾಯವೆಂದರೆ ದೇವಸ್ಥಾನ ಸಮಿತಿ, ಶಾಲಾ ಸಮಿತಿ ಗ್ರಾಮ ಪಂಚಾಯಿತಿ ಸಮಿತಿ ಇತರೆ) ನಿರ್ದಿಷ್ಟ ನಮೂನೆಯ ತಕರಾರು ಅರ್ಜಿಯನ್ನು ಆಯಾಯ ವ್ಯಾಪ್ತಿಯ ಜಿಲ್ಲೆಯಲ್ಲಿರುವ ಫಾರೆಸ್ಟ್ ಸೆಟಲ್‍ಮೆಂಟ್ ಆಫೀಸರ್‍ಗೆ ನೀಡುವ ಮೂಲಕ ನಮ್ಮ ಭೂಮಿ, ಶಾಲೆ, ಮಂದಿರ, ದರ್ಗಾ, ವಿದ್ಯುತ್ ಫೆÇೀನ್ ಕಂಬಗಳು ಸೇರಿದಂತೆ ನಮ್ಮವರನ್ನು ಉಳಿಸಿಕೊಳ್ಳಲು ಇರುವ ಏಕೈಕ ಮಾರ್ಗವಾಗಿದೆ.

ರಾಜಕಾರಣಿಗಳು, ಸರ್ಕಾರಗಳು ಏಕೆ, ಸುಪ್ರೀಂಕೋರ್ಟ್‍ಗಳು ಸಹ ಈ ವಿಚಾರವಾಗಿ ತಲೆ ಹಾಕಲು ಬರುವುದಿಲ್ಲ. ಏಕೆಂದರೆ, ಡಿಸ್ಟ್ರಿಕ್ಟ್ ಫಾರೆಸ್ಟ್ ಸೆಟಲ್‍ಮೆಂಟ್ ಆಫೀಸರ್ ಎಂಬ ಹುದ್ದೆಗೆ ಸಿವಿಲ್ ಜುಡಿಷಿಯಲ್ ಅಕಾರ ವ್ಯಾಪ್ತಿ ನೀಡಿ ಆದೇಶಕ್ಕೆ ಪರಮಾಕಾರ ನೀಡಿಯಾಗಿದೆ.
ಈಗೇನಿದ್ದರೂ ತಕರಾರು ಅರ್ಜಿ ನೀಡುವುದೇ ನಮಗುಳಿದಿರುವ ಏಕೈಕ ಮಾರ್ಗವಾಗಿದೆ.

ಈ ಪರಿಗೆ ತೀರ್ಥಹಳ್ಳಿಯ ಕುವೆಂಪು ಜೈವಿಕ ಅರಣ್ಯ ಸೇರಿದಂತೆ ಶೃಂಗೇರಿ ಕ್ಷೇತ್ರ, ಆಗುಂಬೆ, ಮುತ್ತೂರು ಹೋಬಳಿ, ಬೆಳಗಾವಿಯಿಂದ ಚಾಮರಾಜನಗರದವರೆಗೂ ಇದರ ವ್ಯಾಪ್ತಿ ಇದೆ. ಮೇಗುಂದಾ ಹೋಬಳಿ ವ್ಯಾಪ್ತಿಯ ಜನರು ಅತ್ಯಂತ ಜಾಗರೂಕತೆಯಿಂದ ಇರಬೇಕಾದ ಸನ್ನಿವೇಶ ಇದೆ.

ಕಸ್ತೂರಿ ರಂಗನನ್ನಾದರೂ ನಿಲ್ಲಿಸಲು ಏನಾದರೂ ಅವಕಾಶ ಇದೆಯೇನೋ ಈ ಸೆಕ್ಷನ್ 17ರಲ್ಲಿ ತಕರಾರು ಅರ್ಜಿ ಹೊರತುಪಡಿಸಿ ಯಾವುದೇ ಅವಕಾಶ ಸ್ಪಷ್ಟವಾಗಿಲ್ಲ ಎಂಬುದು ಸುೀರ್‍ಕುಮಾರ್ ಮುರೋಳ್ಳಿ ಅವರ ನಿಖರ ಅಭಿಪ್ರಾಯ.

ಹೋರಾಟಗಾರ ನವೀನ್ ಕುರುವಾನೆ ತಮ್ಮ ಎಲ್ಲ ವೈಯಕ್ತಿಕ ಕೆಲಸಗಳನ್ನು ಬಿಟ್ಟು ಕಳೆದ ಒಂದು ತಿಂಗಳಿನಿಂದ ಸೆಕ್ಷನ್ 17ರ ಕುರಿತು ಜಾಗೃತಿ ಮೂಡಿಸುತ್ತಾ ಸುತ್ತಾಡುತ್ತಿದ್ದರು. ಮೇಗುಂದಾ ಹೋಬಳಿಯ ಸಭೆಯ ದಿನದಂದು ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಸ್ಥಾಪಿತವಾಗಿರುವ ಫಾರೆಸ್ಟ್ ಸೆಟಲ್‍ಮೆಂಟ್ ಆಫೀಸರ್ ಬಳಿ ಸುಮಾರು 3 ಸಾವಿರ ತಕರಾರು ಅರ್ಜಿಗಳನ್ನು ಶಾಸಕರಾದ ಟಿ.ಡಿ.ರಾಜೇಗೌಡರೊಂದಿಗೆ ನೀಡಿದ್ದಾರೆ.
ಎಚ್ಚೆತ್ತುಕೊಳ್ಳಿ… ಜಾಗೃತರಾಗಿ… ಮಲೆನಾಡು ಉಳಿಸಲು ಮುಂದಾಗಿ.

Facebook Comments