ಮೋದಿಗೆ ರಸಗುಲ್ಲಾ ನೀಡುತ್ತೇನೆ, ಆದರೆ ಬಿಜೆಪಿಗೆ ಮತ ಹಾಕಲ್ಲ: ದೀದಿ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲ್ಕತ್ತಾ, ಏ.25- ನಾವು ಅತಿಥಿ ಸತ್ಕಾರದಲ್ಲಿ ಮುಂದು. ಅತಿಥಿಗಳಿಗೆ ರಸಗುಲ್ಲಾ ಸೇರಿದಂತೆ ರುಚಿಕರ ಬಂಗಾಳಿ ಸ್ವೀಟ್‍ಗಳನ್ನು ನೀಡುತ್ತೇವೆ.  ಅಂದ ಮಾತ್ರಕ್ಕೆ ನಾವು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಪರಮೋಚ್ಛ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ಅವರು ಪ್ರತಿವರ್ಷ ಕುರ್ತಾ, ಸಿಹಿತಿಂಡಿಯನ್ನು ನನಗೆ ಉಡುಗೊರೆಯನ್ನಾಗಿ ಕಳಿಸುತ್ತಾರೆ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗೆ ನಡೆದ ರಾಜಕಿಯೇತರ ಸಂದರ್ಶನದ ವೇಳೆ ನೀಡಿದ್ದ ಹೇಳಿಕೆಗೆ ಮಮತಾ ಬ್ಯಾನರ್ಜಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ನಾವು ಅತಿಥಿಗಳನ್ನು ರಸಗುಲ್ಲಾ, ಉಡುಗೊರೆ ಕೊಟ್ಟು ಸ್ವಾಗತಿಸುತ್ತೇವೆ. ಆದರೆ ಒಂದೇ ಒಂದು ಮತ ಬಿಜೆಪಿಗೆ ನೀಡುವುದಿಲ್ಲ ಎಂದು ಪ್ರಧಾನಿಯವರ ಹೆಸರು ಉಲ್ಲಾಖಿಸದೆ ಹೇಳಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಅತಿಥಿಗಳನ್ನು ವಿಶೇಷ ಉಡುಗೊರೆ ಕೊಟ್ಟು ಸ್ವಾಗತಿಸುವುದು ಬಂಗಾಳಿಯರ ಸಂಸ್ಕøತಿ. ಆದರೆ, ಬಿಜೆಪಿಗೆ ನಾವು ಮತ ಹಾಕುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಹೂಗ್ಲಿ ಜಿಲ್ಲಾಯ ಸೇರಾಂಪುರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ವಿಶೇಷ ಸಂದರ್ಭಗಳಲ್ಲಿ, ಹಬ್ಬಗಳಲ್ಲಿ ಅತಿಥಿಗಳಿಗೆ ಶುಭಾಶಯ ಹೇಳುವುದು, ಉಡುಗೊರೆ ನೀಡುವುದು ಪಶ್ಚಿಮಬಂಗಾಳದ ಸಂಸ್ಕøತಿ ಎಂದಿದ್ದಾರೆ.

ನಾನು ಈ ಮಾತು ಹೇಳಿದರೆ ಜನರಿಗೆ ಆಶ್ಚರ್ಯವಾಗಬಹುದು. ಚುನಾವಣೆ ಸಂದರ್ಭದಲ್ಲಿ ಹೀಗೆ ಹೇಳಬಾರದು. ಆದರೆ, ಮಮತಾ ದೀದಿ ಪ್ರತಿವರ್ಷ ನನಗೆ ಗಿ¥s್ಟï ಕಳುಹಿಸುತ್ತಾರೆ. ಮಮತಾ ದೀದಿ ಅವರೇ ಆಯ್ಕೆ ಮಾಡಿದ ಒಂದೊ, ಎರಡೊ ಕುರ್ತಾವನ್ನು ಪ್ರತಿವರ್ಷ ಕಳುಹಿಸುತ್ತಾರೆ.

ಬಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಕೂಡ ಪ್ರತಿವರ್ಷ ಸ್ವೀಟ್ ಕಳುಹಿಸುತ್ತಾರೆ. ಅವರನ್ನು ನೋಡಿ ಮಮತಾ ದೀದಿ ಕಳುಹಿಸುತ್ತಾರೆ ಎಂದು ಪ್ರಧಾನಿ ಹೇಳಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ