‘ರಫೇಲ್‍ವಾಲ ಆಗಿ ಬದಲಾದ ಚಾಯ್‍ವಾಲಾ ಮೋದಿ’ : ದೀದಿ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

Mamata-Banerjee
ಕೊಲ್ಕತ್ತಾ, ಫೆ.9- ಪ್ರಧಾನಿ ನರೇಂದ್ರ ಮೋದಿ ಚಾಯ್ ವಾಲಾನಿಂದ ರಫೇಲ್‍ವಾಲಾ ಆಗಿ ರೂಪಾಂತರಗೊಂಡಿದ್ದಾರೆಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಟೀಕಿಸಿದ್ದಾರೆ.

ರಫೇಲ್ ಒಪ್ಪಂದ ದೇಶದ ಅತಿದೊಡ್ಡ ಹಗರಣವಾಗಿದ್ದು, ಈ ವಿಚಾರದಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡುವುದಾಗಿ ಅವರು ತಿಳಿಸಿದ್ದಾರೆ.

ಚಿಟ್‍ಫಂಡ್ ಹಗರಣದಲ್ಲಿ ತೊಡಗಿಸಿಕೊಂಡವರನ್ನು ರಕ್ಷಿಸಲು ಪಶ್ಚಿಮ ಬಂಗಾಳ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮೋದಿ ಮಾಡಿದ ಆರೋಪದ ಬೆನ್ನಲ್ಲೇ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಭ್ರಷ್ಟಾಚಾರದ ರೂವಾರಿ, ಸೊಕ್ಕಿನ ಮಾಸ್ಟರ್ ಆಗಿರುವ ಮೋದಿ ದೇಶಕ್ಕೆ ಅಪಮಾನ ಎಂಬಂತಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರಧಾನಿ ಸ್ಥಾನಕ್ಕೆ ಗೌರವ ನೀಡುತ್ತೇವೆ. ಆದರೆ, ಆ ಮನುಷ್ಯನಿಗೆ ಗೌರವ ನೀಡುವುದಿಲ್ಲ. ಭಾರತದ ಚರಿತ್ರೆಯಲ್ಲಿ ಮೋದಿ ಅತ್ಯಂತ ಭ್ರಷ್ಟಾಚಾರದ ಮನುಷ್ಯರಾಗಿದ್ದಾರೆ ಎಂದು ಮಮತಾ ಬ್ಯಾನರ್ಜಿ ಲೇವಡಿ ಮಾಡಿದ್ದಾರೆ.

Facebook Comments

Sri Raghav

Admin