26 ವರ್ಷಗಳ ಬಳಿಕ ಆರೋಪಿ ಖುಲಾಸೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಜಾಫರ್‍ನಗರ,ನ.24- ಶಸ್ತ್ರಾಸ್ತ್ರ ಅನಿಯಮದಡಿ ದಾಖಲಿಸಲಾದ ಪ್ರಕರಣವೊಂದರಲ್ಲಿ ವ್ಯಕ್ತಿಯೊಬ್ಬನನ್ನು 26 ವರ್ಷಗಳ ಬಳಿಕ ಇಲ್ಲಿನ ನ್ಯಾಯಾಲಯ ಖುಲಾಸೆಗೊಳಿಸಿದೆ.

ಪ್ರಾಸಿಕ್ಯೂಷನ್ ಯಾವುದೇ ಸಾಕ್ಷ್ಯ ಒದಗಿಸಿ ಈ ಆರೋಪವನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮನೋಜ್‍ಕುಮಾರ್ ಜಾತವೆ ಅವರು ಆಪಾದಿತನಾಗಿದ್ದ ಸಲಾಹುದ್ದೀನ್‍ನನ್ನು ಖುಲಾಸೆಗೊಳಿಸಿದ್ದಾರೆ.

ಪ್ರಾಸಿಕ್ಯೂಷನ್ ಪ್ರಕಾರ 1995ರಲ್ಲಿ ಸಲಾಹುದ್ದೀನ್ ಬಳಿ ನಾಲ್ಕು ಕಾಡತೂಸುಗಳನ್ನು ವಶಪಡಿಸಿಕೊಳ್ಳಲಾಗಿತ್ತು ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಆತನ ವಿರುದ್ಧ ಮೊಕದ್ದಮೆ ಹೂಡಲಾಗಿತ್ತು.

ಬಳಿಕ ಆರೋಪಿಯ ವಿರುದ್ಧ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿತ್ತು. ತನ್ನನ್ನು ಈ ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಆರೋಪಿ ಪ್ರತಿಪಾದಿಸಿದ್ದ.

Facebook Comments