ಕಾರು ಕಳುವಾಗಿದೆ ಎಂದು ಸುಳ್ಳು ದೂರು ಕೊಟ್ಟ ಮಾಲೀಕ ಅಂದರ್..!
ತುಮಕೂರು, ನ.29- ಲೋನ್ ಕಟ್ಟಲಾಗದೆ ಕಾರು ಕಳುವಾಗಿದೆ ಎಂದು ಸುಳ್ಳು ದೂರು ನೀಡಿದ್ದ ಮಾಲೀಕನೇ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಪರಿಚಿತರು ಯಾರೋ ಇನೋವಾ ಕಾರನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದ ವ್ಯಕ್ತಿಯನ್ನು ತಾಲ್ಲೂಕಿನ ಮಿಡಿಗೇಶಿ ಠಾಣೆ ಪೊಲೀಸರು ಬಂಸಿದ್ದಾರೆ.
ಆಂಧ್ರ ಪ್ರದೇಶದ ಮಡಕಶಿರ ತಾಲ್ಲೂಕಿನ ಈಚಲಡ್ಡಿ ಗ್ರಾಮದ ವಾಸಿ ದೊಡ್ಡೇಗೌಡ ಬಂತ ಆರೋಪಿ. ಈತ ಸೆಪ್ಟೆಂಬರ್ 21ರಂದು ರಾತ್ರಿ 8 ಗಂಟೆ ಸಮಯದಲ್ಲಿ ತಾನು ಮಧುಗಿರಿ ಕಡೆಯಿಂದ ಸ್ವಗ್ರಾಮ ಈಚಲಡ್ಡಿಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಯಾರೋ ದುಷ್ಕರ್ಮಿಗಳು ನಿನ್ನ ಕಾರು ಪಂಕ್ಚರ್ ಆಗಿದೆ ಎಂದು ಹೇಳಿ ನಿಲ್ಲಿಸಿ ನನ್ನನ್ನು ಥಳಿಸಿ ಕಾರಿನ ಬೀಗದ ಕೀ ಕಿತ್ತುಕೊಂಡು 14 ಲಕ್ಷ ರೂ. ಬೆಲೆಬಾಳುವ ಇನೋವಾ ಕಾರನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದು ಮಿಡಿಗೇಶಿ ಠಾಣೆಗೆ ದೂರು ನೀಡಿದ್ದ.
ಮಧುಗಿರಿ ಸಿಪಿಐ ಎಂ.ಎಸ್.ಸರ್ದಾರ್ ಅವರ ನೇತೃತ್ವದ ತಂಡ ಎರಡು ತಿಂಗಳ ಕಾಲ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ವಾಹನದ ಮೇಲೆ ಸಾಲ ಇದ್ದ ಕಾರಣ ನಾನೇ ಆಂಧ್ರ ಪ್ರದೇಶದ ಎಂ.ರಂಗಾಪುರ ಗ್ರಾಮದ ಪರಿಚಯಸ್ಥರ ಮನೆ ಬಳಿ ಕಾರನ್ನು ಬಚ್ಚಿಟ್ಟಿದ್ದುದಾಗಿ ಬಾಯಿಬಿಟ್ಟಿದ್ದಾನೆ.
ಮಡಕಶಿರ ಠಾಣೆ ಪೊಲೀಸರು ಕಾರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಹೆಚ್ಚುವರಿ ಪೊಲೀಸ್ ಅೀಕ್ಷಕರಾದ ಟಿ.ಜೆ.ಉದೇಶ್ ಹಾಗೂ ಮಧುಗಿರಿ ಉಪಾಧ್ಯಕ್ಷರಾದ ಎಂ.ಪ್ರವೀಣ್ ಅವರ ಮಾರ್ಗದರ್ಶನದಲ್ಲಿ ಮಧುಗಿರಿ ಸಿಪಿಐ ಎಂ.ಎಸ್.ಸರ್ದಾರ್, ಸಿಬ್ಬಂದಿಗಳಾದ ರಾಮಕೃಷ್ಣ, ವಿನೋದ್, ರೆಹಾನಾ ಭಾನು, ನಟರಾಜು, ಗೋವಿಂದರಾಜು ಮತ್ತು ಶಿವಕುಮಾರ್ ಅವರು ಆರೋಪಿ ದೊಡ್ಡೇಗೌಡನನ್ನು ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.