ಯೋಗಿ ಆದಿತ್ಯನಾಥರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಯುವಕ ಅಂದರ್..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ/ಲಕ್ನೋ, ಮೇ 24-ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಹತ್ಯೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿದ್ದ ಯುವಕನೊಬ್ಬನನ್ನು ಪೊಲೀಸರು ಬಂಸಿದ್ದಾರೆ.

ಮುಂಬೈನ ಚುನಾಬಟ್ಟಿಯ ಕಮ್ರಾನ್ ಖಾನ್ (25) ಬಂತ ವ್ಯಕ್ತಿ. ಉತ್ತರ ಪ್ರದೇಶ ಪೊಲೀಸರ ಸಹಕಾರದೊಂದಿಗೆ ಮಹಾರಾಷ್ಟ್ರದ ಭಯೋತ್ಪಾದನೆ ನಿಗ್ರಹ ದಳ(ಆಂಟಿ ಟೆರರಿಸ್ಟ್‍ಸ್ಕ್ವಾಡ್-ಎಟಿಎಸ್) ಸಿಬ್ಬಂದಿ ಖಾನ್‍ನನ್ನು ಬಂಸಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕಮ್ರಾನ್ ಖಾನ್ ಶುಕ್ರವಾರ ಬೆಳಗ್ಗೆ ಲಕ್ನೋದ ಪೊಲೀಸ್ ಸೋಷಿಯಲ್ ಮೀಡಿಯಾದ ಹೆಲ್ ಡೆಸ್ಕ್‍ಗೆ ಕರೆ ಮಾಡಿ ಯೋಗಿ ಆದಿತ್ಯನಾಥ ಅವರನ್ನು ಬಾಂಬ್ ಸೋಟಿಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ಆತಂಕ ಸೃಷ್ಟಿಸಿದ್ದ.

ಗೋಮತಿನಗರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಫೋನ್ ಕರೆಯ ಜಾಡು ಪತ್ತೆ ಮಾಡಿದಾಗ ಅದು ಮುಂಬೈ ಪೂರ್ವನಗರದ ಚುನಾಬಟ್ಟಿಯಿಂದ ಬಂದಿರುವುದು ಕಂಡುಬಂತು. ಈ ಬಗ್ಗೆ ಪೊಲೀಸರು ಮುಂಬೈನ ಪೊಲೀಸ್ ಪಡೆಗೆ ಮಾಹಿತಿ ನೀಡಿದ್ದರು.

Facebook Comments

Sri Raghav

Admin