ಕುಡಿದ ಅಮಲಿನಲ್ಲಿ ತಮ್ಮನ ಕೈ ಕತ್ತರಿಸಿದ ಅಣ್ಣ..!

ಈ ಸುದ್ದಿಯನ್ನು ಶೇರ್ ಮಾಡಿ

ಗೌರಿಬಿದನೂರು, ಮೇ 7- ಮದ್ಯದ ಅಮಲಿನಲ್ಲಿ ತಟ್ಟೆ ತೊಳೆಯುವ ವಿಚಾರದಲ್ಲಿ ಸಹೋದರರ ನಡುವೆ ಗಲಾಟೆ ನಡೆದು ಅಣ್ಣನೇ ತಮ್ಮನ ಕೈ ಕತ್ತರಿಸಿರುವ ಘಟನೆ ಗೌರಿಬಿದನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಾಲ್ಲೂಕಿನ ರಮಾಪುರ ಗ್ರಾಮದಲ್ಲಿ ಸಹೋದರರಾದ ಹನುಮಂತ ಮತ್ತು ಕೃಷ್ಣ ನೆಲೆಸಿದ್ದು, ನಿನ್ನೆ ಇಬ್ಬರೂ ಮದ್ಯಪಾನ ಮಾಡಿ ಹೊಟ್ಟೆ ತುಂಬ ಊಟ ಮಾಡಿದ್ದರು.  ತಾವು ಊಟ ಮಾಡಿದ ತಟ್ಟೆ ತೊಳೆಯುವ ವಿಚಾರದಲ್ಲಿ ಸಹೋದರರ ನಡುವೆ ಆರಂಭವಾದ ಗಲಾಟೆಯಲ್ಲಿ ಹನುಮಂತ ಕೈ ಕಳೆದುಕೊಂಡಿದ್ದಾನೆ.

ಅಣ್ಣ ಕೃಷ್ಣ ಹನುಮಂತನ ಕೈ ಕತ್ತರಿಸಿ ಪರಾರಿಯಾಗಿದ್ದು, ಕೈ ಕಳೆದುಕೊಂಡಿರುವ ಹನುಮಂತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಸರ್ಕಲ್ ಇನ್ಸ್‍ಪೆಕ್ಟರ್ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಮ್ಮನ ಕೈ ಕತ್ತರಿಸಿ ಪರಾರಿಯಾಗಿರುವ ಕೃಷ್ಣನ ಬಂಧನಕ್ಕೆ ಎಸ್‍ಐ ಅವಿನಾಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ.

Facebook Comments

Sri Raghav

Admin