ಫೇಸ್‍ಬುಕ್ ಲೈವ್ ನಲ್ಲಿ ಫೇಸ್‍ಬುಕ್ ಲೈವ್ ಹಾಡಿ ಆತ್ಮಹತ್ಯೆಗೆ ಶರಣಾದ ಯುವಕ

ಈ ಸುದ್ದಿಯನ್ನು ಶೇರ್ ಮಾಡಿ

Suicide-001

ತುಮಕೂರು, ಅ.11-ಪ್ರಪಂಚದಲ್ಲಿ ತಂದೆ ಬಿಟ್ಟರೆ ಎಲ್ಲರೂ ಮೋಸಗಾರರೇ ಎಂದು ಯುವಕನೊಬ್ಬ ಫೇಸ್‍ಬುಕ್ ಲೈವ್ ಕೊಟ್ಟು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾ ತಾಲ್ಲೂಕಿನ ಕೆ.ಕೆ.ಪಾಳ್ಯದಲ್ಲಿ ನಡೆದಿದೆ. ನಿರಂಜನ (36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಈತ ಜೀವನದಲ್ಲಿ ಭಾರೀ ನೊಂದಿದ್ದು ಜತೆಗೆ ಕೌಟುಂಬಿಕ ಕಲಹದಿಂದಲೂ ರೋಸಿ ಹೋಗಿದ್ದ ಜೀವನದ ಜಂಜಾಟದಿಂದ ಮುಕ್ತಿ ಹೊಂದಬೇಕೆಂಬ ನಿರ್ಧಾರ ಮಾಡಿಕೊಂಡು ತನ್ನ ಜಮೀನಿಗೆ ತೆರಳಿ ಮರದ ಮೇಲೆ ಕುಳಿತು ಮೊಬೈಲ್‍ನಲ್ಲಿ ಫೇಸ್‍ಬುಕ್ ಲೈವ್ ಕೊಟ್ಟು ಪ್ರಪಂಚದಲ್ಲಿ ಕೆಟ್ಟವರಿದ್ದಾರೆ.

ತಂದೆಯನ್ನು ಹೊರತುಪಡಿಸಿ ಎಲ್ಲರೂ ಮೋಸಗಾರರೇ. ಅದರಲ್ಲೂ ಹೆಂಗಸರನ್ನು ನಂಬಬೇಡಿ ಎಂದು ಹೇಳುತ್ತಾ ರಾಷ್ಟ್ರಗೀತೆಯೊಂದಿಗೆ ವೀಡಿಯೋ ಮಾಡಿ ಆ ವೀಡಿಯೋವನ್ನು ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಪಟ್ಟನಾಯಕನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಿರಂಜನ್ಗಗೆ ಮದುವೆಯಾಗಿ ಮೂರು ಮಕ್ಕಳಿದ್ದಾರೆ. ಪತಿ ಪತ್ನಿಯರ ಮೇಲಿಂದ ಮೇಲೆ ಜಗಳ ನಡೆಯುತಿತ್ತು ಎನ್ನಲಾಗಿದೆ ಇದರಿಂದ ಮನನೊಂದ ನಿರಂಜನ್ ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾನೆ.

Facebook Comments