OMG..! ತಾಯಿಗೆ ಬೈದ ಸ್ನೇಹಿತನ ತಲೆ ಕಡಿದು ಪೊಲೀಸ್ ಠಾಣೆಗೆ ತಂದ ಭೂಪ..!

ಈ ಸುದ್ದಿಯನ್ನು ಶೇರ್ ಮಾಡಿ

Murder-Mandya-Malavalli--01

ಮಳವಳ್ಳಿ, ಸೆ.29- ತಾಯಿಯನ್ನು ಕೆಟ್ಟ ದೃಷ್ಟಿಯಿಂದ ನೋಡಿದ್ದರಿಂದ ಕೋಪಗೊಂಡ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ರುಂಡವನ್ನು ಕತ್ತರಿಸಿ ಸುಮಾರು 22 ಕಿ.ಮೀ. ದೂರ ಬೈಕ್‍ನಲ್ಲಿಟ್ಟುಕೊಂಡು ಪೊಲೀಸ್ ಠಾಣೆಗೆ ರುಂಡದೊಂದಿಗೆ ಆಗಮಿಸಿ ಶರಣಾದ ಆಘಾತಕಾರಿ ಘಟನೆ ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಮಳವಳ್ಳಿ ತಾಲೂಕಿನ ಚಿಕ್ಕೆಬಾಗಿಲು ಗ್ರಾಮದ ಗಿರೀಶ್ (38) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ಪಶುಪತಿ (28) ಪೊಲೀಸರಿಗೆ ಶರಣಾದ ಕೊಲೆ ಆರೋಪಿ.

ಗಿರೀಶ್ ಮತ್ತು ಪಶುಪತಿ ಸ್ನೇಹಿತರಾಗಿದ್ದು, ಕಳೆದೆರಡು ದಿನಗಳ ಹಿಂದೆ ಯಾವುದೋ ವಿಚಾರಕ್ಕೆ ಜಗಳ ನಡೆದಾಗ, ಪಶುಪತಿಯ ತಾಯಿಗೆ ಗಿರೀಶ್ ಕೆಟ್ಟದ್ದಾಗಿ ನಿಂದಿಸಿದ್ದ. ಈ ವಿಷಯ ಇಬ್ಬರು ಸ್ನೇಹಿತರ ನಡುವಿನ ವೈಮನಸ್ಸಿಗೆ ಕಾರಣವಾಗಿತ್ತು. ಆದರೆ ಅದನ್ನು ತೋರ್ಪಡಿಸದ ಪಶುಪತಿ ಕಳೆದ ರಾತ್ರಿ ಗಿರೀಶ್‍ನೊಂದಿಗೆ ಸಿನಿಮಾ ನೋಡಲು ಹೋಗಿದ್ದಾನೆ.

Murder-Mandya-Malavalli--02

ಆದರೆ ಬೆಳಗಾಗುತ್ತಿದ್ದಂತೆ ಆತನನ್ನು ಕೊಲೆ ಮಾಡಲು ನಿರ್ಧರಿಸಿದ ಪಶುಪತಿ, ಬೈಕ್‍ನಲ್ಲಿ ಗಿರೀಶ್‍ನ ಮನೆಗೆ ಹೋಗಿ, ತೋಟಕ್ಕೆ ಹೋಗೋಣ ಎಂದು ಆತನನ್ನು ಕರೆದುಕೊಂಡು ಬಂದಿದ್ದಾನೆ. ಮಾರ್ಗಮಧ್ಯೆ ನರಸೀಪುರ ತಾಲೂಕಿನ ಕೊಳತೂರು ಗ್ರಾಮ ತಲುಪಿದಾಗ, ಬೈಕ್ ನಿಲ್ಲಿಸಿದ ಪಶುಪತಿ, ತಾಯಿಗೆ ಬೈದ ವಿಚಾರವನ್ನು ಪ್ರಸ್ತಾಪಿಸಿ ಗಿರೀಶ್‍ನನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಇಬ್ಬರು ಸ್ನೇಹಿತರ ನಡುವೆ ತೀವ್ರ ಜಗಳ ಉಂಟಾಗಿದ್ದು, ಆತ ಪಶುಪತಿ ಏಕಾಏಕಿ ಕತ್ತಿಯಿಂದ ಗಿರೀಶ್‍ನ ಕುತ್ತಿಗೆ ಕಡಿದಿದ್ದಾರೆ. ಕುಸಿದು ಬಿದ್ದ ಗಿರೀಶ್‍ನ ಮುಂಡದಿಂದ ರುಂಡ ಕತ್ತರಿಸಿದ ಪಶುಪತಿ ನೇರವಾಗಿ ಬೈಕ್‍ನಲ್ಲಿ ರುಂಡ ಹಿಡಿದುಕೊಂಡೇ ಪೊಲೀಸ್ ಠಾಣೆಗೆ ಬಂದಿದ್ದಾನೆ.

Murder-Mandya-Malavalli--03

ರಕ್ತಸಿಕ್ತವಾಗಿದ್ದ ರುಂಡದೊಂದಿಗೆ ಠಾಣೆಗೆ ಬಂದ ಪಶಪತಿಯನ್ನು ನೋಡಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ನಡೆದ ಘಟನೆಯನ್ನು ವಿವರಿಸಿದ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಳವಳ್ಳಿ ಗ್ರಾಮಾಂತರ ಪೊಲೀಸ್ ಇನ್ಸ್‍ಪೆಕ್ಟರ್ ಶ್ರೀಕಾಂತ್ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin