ತುತ್ತು ಕೊಟ್ಟ ತಾಯಿಯ ಕೈಯನ್ನೇ ಕತ್ತರಿಸಿದ ಪಾಪಿ ಪುತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

Hand-Cut
ಹಾಸನ,ಡಿ.29-ಪಾಪಿ ಮಗನೊಬ್ಬ ತುತ್ತು ಕೊಟ್ಟ ತಾಯಿಯ ಕೈಯನ್ನೇ ಕತ್ತರಿಸಿರುವ ಅಮಾನವೀಯ ಘಟನೆ ಸಕಲೇಶಪುರ ತಾಲೂಕಿನ ಹಡವರಹಳ್ಳಿಯಲ್ಲಿ ಸಂಭವಿಸಿದೆ.ಲಲಿತಮ್ಮ(55) ಗಂಭೀರವಾಗಿ ಹಲ್ಲೆಗೊಳಗಾಗಿದ್ದು, ಕೃತ್ಯವೆಸಗಿದ ಪಾಪಿ ಮಗ ದಿಲೀಪ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ದಿಲೀಪ್ ಮೊದಲನೇ ಪತ್ನಿಯಿಂದ ವಿಚ್ಛೇದಿತನಾಗಿ ಎರಡನೇ ಮದುವೆಯಾಗಿದ್ದ. ಈ ವಿಚಾರವಾಗಿ ತಾಯಿಗೆ ವೈಮನಸ್ಯವಿತ್ತು. ಅಲ್ಲದೇ ಆಸ್ತಿಗಾಗಿ ತಾಯಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ.

ನಿನ್ನೆ ರಾತ್ರಿ ಮನೆಗೆ ಬಂದ ದಿಲೀಪ್, ತಾಯಿಯೊಂದಿಗೆ ಜಗಳಕ್ಕಿಳಿದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ರೊಚ್ಚಿಗೆದ್ದ ದಿಲೀಪ್ ತಾಯಿಯ ಮೇಲೆ ಮಚ್ಚು ಬೀಸಿದ್ದಾನೆ. ಪರಿಣಾಮ ಲಲಿತಮ್ಮನವರ ಒಂದು ಕೈ ತುಂಡಾಗಿದ್ದು, ಮತ್ತೊಂದು ಕೈನ ಬೆರಳುಗಳು ತುಂಡಾಗಿವೆ.

ಲಲಿತಮ್ಮ ನರಳಾಟ ಕೇಳಿಸಿಕೊಂಡ ಸ್ಥಳೀಯರು ಕೂಡಲೇ ಒಳನುಗ್ಗಿ ಆರೋಪಿ ದಿಲೀಪನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಲಲಿತಮ್ಮನವರನ್ನು ಹಾಸನದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಆರೋಪಿ ವಿರುದ್ಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin