ಹಸೆಮಣೆ ಏರಬೇಕಾಗಿದ್ದ ಮಧುಮಗ ಕಾರು ಅಪಘಾತದಲ್ಲಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Car-Accidet--01

ಚಿತ್ರದುರ್ಗ, ಜೂ.25- ತಿಂಗಳು ಕಳೆದಿದ್ದರೆ ಹಸೆಮಣೆ ಏರಬೇಕಾಗಿದ್ದ ಮಧು ಮಗ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಹೊಸದುರ್ಗ ಬಳಿಯ ಬೆಳಗೂರು ಸಮೀಪ ಸಂಭವಿಸಿದೆ. ಚಿತ್ರದುರ್ಗದ ಬಾರ್‍ಲೈನ್ ರಸ್ತೆಯ ನಿವಾಸಿ ರಂಜಿತ್ (25) ಮೃತಪಟ್ಟ ಯುವಕ.
ಈತನಿಗೆ ಮದುವೆ ನಿಶ್ಚಯವಾಗಿದ್ದು , ಮದುವೆಗೆ ಇನ್ನೊಂದು ತಿಂಗಳಿತ್ತು. ಈ ಸಂಬಂಧ ಕುರುಬರಹಳ್ಳಿಯಲ್ಲಿ ಶಾಸ್ತ್ರ ಕೇಳಿ ನಂತರ ಬೆಳಗೂರಿನ ಸಂಬಂಧಿಕರ ಮನೆಗೆ ತೆರಳಿ ಚಿತ್ರದುರ್ಗಕ್ಕೆ ವಾಪಸಾಗುತ್ತಿದ್ದಾಗ ಊರಿನಿಂದ ಸಮೀಪದೂರ ತೆರಳುತ್ತಿದ್ದಂತೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಶ್ರೀರಾಂಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin