ಎಣ್ಣೆ ಹೊಡೆದು ಟೈಟ್ ಆಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Man-dEd

ವಿಜಯಪುರ, ಜೂ.6 ಕುಡಿದ ಮತ್ತಿನಲ್ಲಿದ್ದ ಯುವಕ ಅನುಮಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಂದಗಿ ನಿವಾಸಿ ಸಂಗು ಸುಣಗಾರ (28) ಸಾವನ್ನಪ್ಪಿರುವ ಯುವಕ ನಿನ್ನೆ ರಾತ್ರಿ ಶ್ರೀಶೈಲಾ ಮತ್ತು ಸಂಗು ಇಬ್ಬರು ಸಿಂದಗಿ ಪಟ್ಟಣದ ಹೊರ ವಲಯದ ಟಾಟಾ ಗ್ಯಾರೆಜ್‍ನಲ್ಲಿ ಪಾರ್ಟಿ ಮಾಡಿದ್ದಾರೆ.  ಈ ನಡುವೆ ಬೆಳಗಾಗುವುದರಲ್ಲಿ ಅನುಮಾನಸ್ಪದವಾಗಿ ಸಂಗು ಸಾವನ್ನಪ್ಪಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ಸ್ನೇಹಿತ ಶ್ರೀಶೈಲನ ಮೇಲೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

Facebook Comments

Sri Raghav

Admin