ಗೋ ವಧೆ ಶಂಕೆ ಮೇಲೆ ಗುಂಪು ಥಳಿತಕ್ಕೆ ವ್ಯಕ್ತಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

ಕುಂಠಿ(ಜಾರ್ಖಂಡ್), ಸೆ.23-ಗೋವು ವಧೆ ಶಂಕೆ ಮೇರೆಗೆ ಉದ್ರಿಕ್ತ ಗುಂಪಿನ ದಾಳಿಯಲ್ಲಿ ವಿಕಲಚೇತನ ವ್ಯಕ್ತಿಯೊಬ್ಬ ಹತನಾಗಿ ಇನ್ನಿಬ್ಬರು ತೀವ್ರ ಗಾಯಗೊಂಡಿರುವ ಘಟನೆ ಜಾರ್ಖಂಡ್‍ನ ಕುಂಠಿ ಜಿಲ್ಲೆಯಲ್ಲಿ ನಡೆದಿದೆ. ಜಲತಂಗ ಗ್ರಾಮದ ನದಿಯೊಂದರ ಬಳಿ ಹಸುವಿನ ಮೃತ ದೇಹವನ್ನು ನೋಡಿ ಉದ್ರಿಕ್ತಗೊಂಡ ಹಳ್ಳಿಗರ ಗುಂಪೊಂದು ಗೋ ವಧೆ ಮಾಡಿದ್ದಾರೆಂಬ ಗುಮಾನಿಯಿಂದ ಈ ಕೃತ್ಯ ಎಸಗಿದೆ.

ಮೃತ ಹಸುವಿನ ಬಳಿ ಇದ್ದ ಕಲಾಂಟುಸ್ ಬರ್ಲಾ, ಫಗು ಕಚಪ್ ಮತ್ತು ಫಿಲಿಪ್ ಹೊರೋ ಅವರ ಮೇಲೆ ಗ್ರಾಮಸ್ಥರು ಮಾರಣಾಂತಿಕ ಹಲ್ಲೆ ನಡೆಸಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತೀವ್ರ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಬರ್ಲಾ ಕೊನೆಯುಸಿರೆಳೆದರು. ಇವರು ವಿಕಲಚೇತರು.  ತೀವ್ರ ಗಾಯಗೊಂಡ ಇನ್ನಿಬ್ಬರನ್ನು ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ಸೇರಿಸಲಾಗಿದೆ.  ಈ ಸಂಬಂಧ ಆರು ಜನರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

Facebook Comments