ಮೆಟ್ರೋ ರೈಲಿನಲ್ಲಿ ಯುವತಿಗೆ ತನ್ನ ಗುಪ್ತಾಂಗ ತೋರಿಸಿದ ಪಾಗಲ್ ಪ್ರಯಾಣಿಕ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಫೆ.14-ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಗಳು ಹೆಚ್ಚಾಗುತ್ತಿದ್ದು, ದೆಹಲಿ ಮೆಟ್ರೋರೈಲಿನಲ್ಲಿ ನಡೆದಘಟನೆಯೊಂದು ನಾಗರಿಕ ಸಮಾಜತಲೆತಗ್ಗಿಸುವಂತೆ ಮಾಡಿದೆ.

ಸಹ ಪ್ರಯಾಣಿಕನೊಬ್ಬ ಯುವತಿಯೊಬ್ಬಳಿಗೆ ತನ್ನ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ ನೀಡಿದಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.  ಗುರ್‍ಗಾಂವ್‍ ಕಚೇರಿಯಲ್ಲಿ ಕೆಲಸ ಮುಗಿಸಿ ದೆಹಲಿ ಮೆಟ್ರೋ ರೈಲಿನ ಹಳದಿ ಮಾರ್ಗದಲ್ಲಿ ಸಂಜೆ ಹಿಂದಿರುತ್ತಿದ್ದ ಯುವತಿ ತನಗೆ ಆದ ಆಘಾತಕಾರಿ ಮತ್ತು ಇರಿಸುಮುರಿಸು ಪ್ರಕರಣದ ಬಗ್ಗೆ ಟ್ವೀಟ್ ಮಾಡಿ, ಈ ಅಸಹ್ಯ ಘಟನೆ ಫೋಟೋಗಳನ್ನೂ ಸಹ ಅಪ್‍ಲೋಡ್ ಮಾಡಿದ್ದಾನೆ.

ಜೀನ್ಸ್ ಪ್ಯಾಂಟ್, ಜಾಕೆಟ್ ಧರಿಸಿದ್ದ ಯುವಕತನ್ನ ಬ್ಯಾಕ್‍ಬ್ಯಾಗ್‍ನನ್ನು ಮುಂಭಾಗದಲ್ಲಿ ಹಾಕಿಕೊಂಡಿರುವಚಿತ್ರಇದರಲ್ಲಿದೆ. ಆ ವಿಕೃತ ಕಾಮಿ ತನ್ನ ಜನನಾಂಗವನ್ನು ಹೊರಹೊಮ್ಮಿಸಿ ನನ್ನತ್ತ ಪ್ರದರ್ಶಿಸಿದ. ಬೇರೆಯವರಿಗೆಗೊತ್ತಾಗದಂತೆತನ್ನ ಬ್ಯಾಗ್‍ನನ್ನುಅಡ್ಡವಾಗಿಟ್ಟುಕೊಂಡಿದ್ದ.  ಈ ಘಟನೆಯಿಂದ ನನಗೆ ಆಘಾತ ಮತ್ತು ಹೇಸಿಗೆಯಾಯಿತು. ಆತ ನಂತರರೈಲಿನಿಂದ ಇಳಿದು ಹೋದ.

ನನಗೆ ಆತಂಕದಲ್ಲಿಆತಯಾವ ನಿಲ್ದಾಣದಲ್ಲಿ ಇಳಿದು ಹೋದಎಂಬುದುಗೊತ್ತಾಗಿಲ್ಲಎಂದುಯುವತಿಟ್ವೀಟ್ ಮಾಡಿದ್ದಾರೆ. ಈ ಸಂಬಂಧಯುವತಿ ಮಹಿಳಾ ಪೊಲೀಸ್‍ಠಾಣೆಗೆದೂರು ನೀಡಿದ್ದಾರೆ. ಪ್ರಕರಣ ಮತ್ತುಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು ವಿಕೃತ ಕಾಮಿಗಾಗಿ ಶೋಧ ನಡೆಸುತ್ತಿದ್ದಾರೆ.

Facebook Comments

Sri Raghav

Admin