ಸೂಟ್‍ಕೇಸ್‍ನಲ್ಲಿ ಸ್ನೇಹಿತತನ್ನು ಸಾಗಿಸಿದ ‘ಏಕಾಂಗಿ’, ಮಂಗಳೂರಲ್ಲಿ ವಿಚಿತ್ರ ಘಟನೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು,ಏ.12: ಲಾಕ್‍ಡೌನ್‍ನಿಂದ ಮನೆಯಲ್ಲೇ ಉಳಿದಿರುವವರ ಪಾಡು ಹೇಳತೀರದು.. ದಿನ ಪೂರ್ತಿ ಕುಟುಂಬದೊಂದಿಗೆ ಕೆಲವರು ಮನೆಯಲ್ಲೇ ಇದ್ದರೆ; ಮತ್ತೆ ಕೆಲವು ಬ್ಯಾಚುಲರ್ಸ್‍ಗಳು ಒಬ್ಬೊಬ್ಬರೇ ಮನೆಯಲ್ಲಿದ್ದು ಬೇಸರಗೊಂಡಿದ್ದಾರೆ. ಮಾತನಾಡಲು ಸ್ನೇಹಿತರಿಲ್ಲದೆ ಒಬ್ಬಂಟಿ ಜೀವನದಿಂದ ಬೇಸತ್ತು ಹೈರಾಣಾಗಿದ್ದಾರೆ.

ಹೀಗೆ ಹೈರಾಣಾದ ವ್ಯಕ್ತಿಯೊಬ್ಬ ತನ್ನ ಸ್ನೇಹಿತನೊಂದಿಗೆ ಕಾಲ ಕಳೆಯಲು ಐನಾತಿ ಪ್ಲಾನ್ ಮಾಡಿ ಅಪಾರ್ಟ್‍ನೊಳಗೆ ಆತನನ್ನು ಕರೆದೊಯ್ಯುತ್ತಿದ್ದಾಗ ಸಿಕ್ಕಿ ಬಿದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಮಂಗಳೂರಿನ ಆರ್ಯ ಸಮಾಜದ ರಸ್ತೆಯಲ್ಲಿನ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದ ವಿದ್ಯಾರ್ಥಿ ಲಾಕ್‍ಡೌನ್ ಪರಿಣಾಮ ಈ ಅಪಾರ್ಟ್‍ಮೆಂಟ್‍ಗೆ ಹೊರಗಿನವರು ಯಾರೂ ಬರುವಂತಿಲ್ಲ, ಹೋಗುವಂತಿಲ್ಲ ಎಂಬ ಕಠಿಣ ನಿಯಮವನ್ನು ಮಾಡಿದ್ದರು. ಕಳೆದ 20 ದಿನಗಳಿಂದ ಒಬ್ಬೊಂಟಿಯಾಗಿದ್ದ ಈ ವಿದ್ಯಾರ್ಥಿಗೆ ತುಂಬಾ ಬೋರಾಗಿತ್ತು.

ತನ್ನ ಆತ್ಮೀಯ ಸ್ನೇಹಿತನೊಂದಿಗೆ ಕಾಲ ಕಳೆಯಬೇಕಾಗಿತ್ತು. ಆದರೆ ಅದು ಸಾಧ್ಯವಾಗದ ಮಾತಾಗಿತ್ತು. ಅದಕ್ಕಾಗಿ ಆತ ಪ್ಲಾನ್‍ವೊಂದನ್ನು ರೂಪಿಸಿದ ಸ್ನೇಹಿತನ ಮನೆಗೆ ಹೋಗಿ ದೊಡ್ಡ ಸೂಟ್‍ಕೇಸ್‍ವೊಂದರಲ್ಲಿ ಆತನನ್ನು ಕೂರಿಸಿಕೊಂಡು ಅದನ್ನು ತಂದು ಅಪಾರ್ಟ್‍ಮೆಂಟ್ ಪ್ರವೇಶಿಸಲು ಮುಂದಾದ.

ಈ ವೇಳೆ ಸೂಟ್‍ಕೇಸ್ ಅಲುಗಾಡುವುದನ್ನು ಕಂಡ ಸೆಕ್ಯೂರಿಟಿ ಹಾಗೂ ಅಕ್ಕಪಕ್ಕದವರಿಗೆ ಅನುಮಾನ ಬಂದು ಪರಿಶೀಲಿಸಿದಾಗ ಸೂಟ್‍ಕೇಸ್ ಒಳಗೆ ವ್ಯಕ್ತಿಯಿರುವುದು ಕಂಡು ಬಂದಿದೆ. ಕೂಡಲೇ ಅವರು ಈತ ಮತ್ತು ಸ್ನೇಹಿತನನ್ನು ಕದ್ರಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ನನಗೆ ಒಬ್ಬನೇ ಇರುವುದಕ್ಕೆ ಬೋರಾಗಿತ್ತು. ಅದಕ್ಕಾಗಿ ಸ್ನೇಹಿತನ ಅನಿವಾರ್ಯತೆಯಿತ್ತು. ಹಾಗಾಗಿ ಈ ರೀತಿ ಮಾಡಿದೆ ಎಂದು ವಿವರಿಸಿದ್ದಾನೆ.ಆದರೂ ಪೊಲೀಸರು ವಿವಿಧ ಆಯಾಮಗಳಲ್ಲಿ ವಿಚಾರಣೆ ಮುಂದುವರೆಸಿದ್ದಾರೆ.

Facebook Comments

Sri Raghav

Admin