ಮನೆಹೊರಗೆ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬಂಗಾರಪೇಟೆ, ಮೇ 21- ಸೆಕೆಯೆಂದ ಮನೆಯ ಹೊರಗೆ ಮಲಗಿದ್ದ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬಂಗಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಂಗಾರಪೇಟೆ ತಾಲ್ಲೂಕಿನ ಹಾಲಗಾನಹಳ್ಳಿಗ ರಾಮದ ನಿವಾಸಿ ಹರೀಶ್(32) ಕೊಲೆಯಾದ ವ್ಯಕ್ತಿ. ಗ್ರಾಮದಲ್ಲಿ ಅಣ್ಣ -ಅತ್ತಿಗೆ ಜೊತೆ ಹರೀಶ್ ವಾಸವಾಗಿದ್ದನು. ರಾತ್ರಿ ಅವರ ಮನೆ ಮುಂದೆ ಮಲಗಿದ್ದಾಗ ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದಾರೆ.

ಘಟನೆ ಸಂದರ್ಭದಲ್ಲಿ ಮನೆಯೊಳಗೆ ಮಲಗಿದ್ದವರಿಗೂ ಕೊಲೆ ಬಗ್ಗೆ ತಿಳಿದಿಲ್ಲ. ಇಂದು ಬೆಳಗ್ಗೆ ಅತ್ತಿಗೆ ಮನೆ ಬಾಗಿಲು ತೆರೆದು ಹೊರಬಂದಾಗಲೇ ಕೊಲೆ ನಡೆದಿರುವುದು ಗೊತ್ತಾಗಿದೆ.
ಸುದ್ದಿ ತಿಳಿದ ಬಂಗಾರಪೇಟೆ ಠಾಣೆ ಡಿವೈಎಸ್ಪಿ ಉಮೇಶ್, ಸಿಪಿಐ ಶ್ರೀಕಂಠ, ಪಿಎಸ್‍ಐ ಜಗದೀಶ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಶ್ವಾನದಳ ಘಟನಾಸ್ಥಳದಿಂದ ಹಿಡಿದು ಗ್ರಾಮದ ಮಧ್ಯೆ ಹೋಗಿ ಬಲಭಾಗದ ಬಯಲು ಪ್ರದೇಶ ಮಾರ್ಗದಿಂದ ಐತಾಂಡ್ಲಹಳ್ಳ, ತುಮುಲ್ ರಸ್ತೆ ಮಾರ್ಗದಲ್ಲಿ ಹೋಗಿದ್ದು, ಕೊಲೆ ಸುಳಿವುಗಾಗಿ ಪತ್ತೆ ಹಚ್ಚುತ್ತಿದ್ದಾರೆ.

ಏತಕ್ಕಾಗಿ ಹರೀಶ್‍ನನ್ನು ಯಾರು ಕೊಲೆ ಮಾಡಿದ್ದಾರೆಂಬುದು ತಿಳಿದುಬಂದಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ಕೈಗೊಂಡಿದ್ದಾರೆ.

Facebook Comments

Sri Raghav

Admin