ಕಾಣೆಯಾದ ಮಗನ ಬಗ್ಗೆ ವಿಚಾರಿಸಿದ್ದಕ್ಕೆ ಪಾನಪತ್ತರಿಂದ ಕೊಲೆಯಾದ ತಂದೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.29- ಮಗನನ್ನು ಹುಡುಕುತ್ತಿದ್ದ ತಂದೆ ರಸ್ತೆಯಲ್ಲೇ ನಿಂತಿದ್ದ ಇಬ್ಬರು ವ್ಯಕ್ತಿಗಳನ್ನು ಈ ಬಗ್ಗೆ ವಿಚಾರಿಸಿದ್ದಕ್ಕೆ, ಪಾನಮತ್ತರಾಗಿದ್ದ ಇಬ್ಬರು ಸಹೋದರರು ಆತನನ್ನು ರಾಡ್‍ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಕೃಷ್ಣಕುಮಾರ್(40) ಕೊಲೆಯಾಗಿರುವ ವ್ಯಕ್ತಿ.  ದೆಹಲಿಯ ಓಖ್ಲಾ ಕೈಗಾರಿಕಾ ಪ್ರದೇಶದಲ್ಲಿ ರಾಜಸ್ಥಾನ ಮೂಲದ ಕೃಷ್ಣಕುಮಾರ್ ಮತ್ತು ಮೀನಾ ದಂಪತಿ ಕಾಣೆಯಾದ ತನ್ನ ಮಗನನ್ನು ಹುಡುಕುತ್ತಿದ್ದಾಗ ದಾರಿಯಲ್ಲಿ ಕಂಡ ಈ ಕುಡುಕರ ಬಳಿ ಹೋಗಿ ವಿಚಾರಿಸಿದ್ದಾರೆ.

ಇದರಿಂದ ಕಿರಿಕಿರಿಗೊಂಡ ಈ ಇಬ್ಬರು ಕಬ್ಬಿಣದ ರಾಡುಗಳಿಂದ ಕೃಷ್ಣನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಗರ್ಭಿಣಿ ಮೀನಾ ಅವರಿಗೂ ಗಾಯಗಳಾಗಿವೆ.

ಈ ಸಂದರ್ಭದಲ್ಲಿ ಅಸಹಾಯಕಳಾಗಿ ಅಳುತ್ತಾ ನಿಂತಿದ್ದ ಮೀನಾ ಅವರನ್ನು ತುರ್ತು ಪ್ರತಿಕ್ರಿಯೆ ವಾಹನ (ಇಆರ್‍ವಿ) ವಿಚಾರಿಸಿದಾಗ ಗದ್ಗರಿತಳಾಗಿದ್ದ ಆಕೆ ವಿಷಯ ತಿಳಿಸಲು ತಡವರಿಸಿದ್ದರು. ನಂತರ ಘಟನೆ ತಿಳಿದು ಇಬ್ಬರು ಆರೋಪಿಗಳನ್ನು ಆಗ್ನೇಯ ದೆಹಲಿ ಪೊಲೀಸರು ಬಂಸಿದ್ದಾರೆ.

ಕೂಡಲೇ ಮೀನಾ ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಇಎಸ್‍ಐ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗ ರಾಹುಲ್ (7) ಕಾಣೆಯಾಗಿದ್ದಾನೆ. ಅವನನ್ನು ಹುಡುಕುತ್ತಿದ್ದೇವೆ. ಕಾಣೆಯಾದ ತನ್ನ ಮಗುವಿನ ಬಗ್ಗೆ ಪತಿ ಈ ಇಬ್ಬರು ವ್ಯಕ್ತಿಗಳನ್ನು ವಿಚಾರಿಸಿದಾಗ ಕಿರಿಕಿರಿಗೊಂಡ ಅವರು ಏಕಾಏಕಿ ಗಂಡನ ಮೇಲೆ ಹಲ್ಲೆ ನಡೆಸಿದರು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಓಖ್ಲಾ ಕೈಗಾರಿಕಾ ಪ್ರದೇಶದಲ್ಲಿ ಗ್ರಾಮೀಣ ಸೇವಾ ಚಾಲಕರಾಗಿ ಕೆಲಸ ಮಾಡುತ್ತಿರುವ ಸಹೋದರರಾಗಿರುವ ೀರಜ್ ಅರೋರಾ ಮತ್ತು ರಾಕೇಶ್ ಅರೋರಾ ಬಂತ ಕೊಲೆ ಆರೋಪಿಗಳು.

Facebook Comments

Sri Raghav

Admin