ಇಬ್ಬರು ಹೆಂಡಿರ ಕಾಟ ತಾಳಲಾರದೆ ಕಾರು ಚಾಲಕ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

hanging--suicide
ಕನಕಪುರ, ಜೂ.17- ಕೌಟುಂಬಿಕ ಕಲಹ ಹಾಗೂ ಸಾಲಗಾರರ ಬಾಧೆಯಿಂದ ಬೇಸತ್ತ ಕಾರು ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಇಂದು ಬೆಳಗ್ಗೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಸಬಾ ಹೋಬಳಿ ಬರಡನಹಳ್ಳಿ ಸಮೀಪದ ಸುಂಕರದೊಡ್ಡಿ ಗ್ರಾಮದ ಶಿವರಾಜ್(43) ಆತ್ಮಹತ್ಯೆ ಮಾಡಿಕೊಂಡಿರುವ ಚಾಲಕ.

ಘಟನೆ ವಿವರ:
ಶಿವರಾಜ್ ಸ್ವಂತ ಕಾರು ಇಟ್ಟುಕೊಂಡು ಚಾಲಕ ವೃತ್ತಿ ಮಾಡುತ್ತಿದ್ದ. ಇತ್ತೀಚೆಗೆ ಸಾಲ ಮಾಡಿ ಇನ್ನೂ ಎರಡು ಕಾರುಗಳನ್ನು ಕೊಂಡುಕೊಂಡಿದ್ದ. ಈತನಿಗೆ ಇಬ್ಬರು ಪತ್ನಿಯರಿದ್ದು, ಮೊದಲನೆ ಪತ್ನಿ ತನಗೆ ಜೀವನಾಂಶ ನೀಡಬೇಕೆಂದು ಕೋರ್ಟ್ ಮೊರೆ ಹೋಗಿದ್ದಾಳೆ. ಈತ ಇಬ್ಬರನ್ನು ದುವೆಯಾಗಿರುವುದರಿಂದ ಮನೆಯಲ್ಲಿ ಕಲಹ ನಡೆಯುತ್ತಲೇ ಇತ್ತು. ಸಾಲಬಾಧೆ ಹಾಗೂ ಕೌಟುಂಬಿಕ ಕಲಹದಿಂದ ಬೇಸತ್ತು ಇಂದು ಬೆಳಗ್ಗೆ ಶಿವರಾಜ್ ಮನೆಯ ಜಂತಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಗ್ರಾಮಾಂತರ ಠಾಣೆ ಎಸ್‍ಐ ರವಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments

Sri Raghav

Admin