ಪೊಲೀಸ್ ಠಾಣೆಯಿಂದ ಸಿನಿಮಾ ಸ್ಟೈಲಲ್ಲಿ ಎಸ್ಕೇಪ್ ಆಗಿದ್ದ ಸರಗಳ್ಳ ಕೊನೆಗೂ ಲಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಆ.19- ಕೋರಾ ಠಾಣೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಸಿನಿಮೀಯ ರೀತಿಯಲ್ಲಿ ಪರಾರಿ ಯಾಗಿದ್ದ ಖತರ್ನಾಕ್ ಸರಗಳ್ಳ ಮತ್ತೆ ಸಿಕ್ಕಿಬಿದ್ದಿದ್ದಾನೆ.

ಮಧುಗಿರಿ ತಾಲ್ಲೂಕಿನ ಕಾಟ ಗೊಂಡನಹಳ್ಳಿ ನಿವಾಸಿ ರಂಗಪ್ಪ ರಾಜ ಪ್ರತಾಪ ಪ್ರಭು (38) ಸಿಕ್ಕಿಬಿದ್ದ ಸರಗಳ್ಳ. ಕೊರೊನಾ ಭೀತಿಯ ಹಿನ್ನೆಲೆ ಯಲ್ಲಿ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಂಡು ಕರ್ತವ್ಯ ನಿರ್ವಹಿಸುವ ವೇಳೆ ಊಟದ ಎಲೆ ಎಸೆಯುವ ನೆಪದಲ್ಲಿ ರಂಗಪ್ಪ ಸಿನಿಮೀಯ ರೀತಿಯಲ್ಲಿ ಕೋರಾ ಠಾಣೆಯಿಂದ ಪರಾರಿಯಾಗಿದ್ದ.

ಘಟನೆ ಹಿನ್ನೆಲೆಯಲ್ಲಿ ಕೋರಾ ಪೊಲೀಸ್ ಠಾಣೆಯ ಆರು ಮಂದಿ ಪೊಲೀಸರನ್ನು ಅಮಾನತು ಪಡಿಸಲಾಗಿತ್ತು. ಕಳೆದ ಆ.1ರ ಮಧ್ಯರಾತ್ರಿ ಅಪರಿಚಿತ ವ್ಯಕ್ತಿ ಅಂಚಿಹಳ್ಳಿ ಗ್ರಾಮದ ಪಿರಾದಿ ಮುನೇಶ್ ಎಂಬುವವರ ಮನೆಗೆ ನುಗ್ಗಿ ಪತ್ನಿ ಚೈತ್ರ ಅವರ ಕೊರಳಿ ನಲ್ಲಿದ್ದ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿರುವುದಾಗಿ ಕೋರಾ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ವಡ್ಡರಹಳ್ಳಿ, ಶಂಭೂನಹಳ್ಳಿ, ಮುದ್ದ ರಾಮಯ್ಯನಪಾಳ್ಯ, ಕೊರಟಗೆರೆ, ಹಿರೇ ಗುಂಡಗಲ್ , ಹಂಚಿಹಳ್ಳಿ ಗ್ರಾಮಗಳ ಒಂಟಿ ಮನೆಗಳಲ್ಲಿ ಸರಗಳ್ಳತನ ಹೆಚ್ಚಾಗು ತ್ತಿರುವ ಕುರಿತಂತೆ ಡಿವೈಎಸ್‍ಪಿ ತಿಪ್ಪೆಸ್ವಾಮಿ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚನೆ ಮಾಡಲಾಗಿತ್ತು.

ಎಸ್‍ಐ ಹರೀಶ್ ಮತ್ತವರ ಸಿಬ್ಬಂದಿ ಕಳೆದ ಆ.5ರಂದು ಆರೋಪಿ ರಂಗಪ್ಪನನ್ನು ಬಂಸಿ 6 ಸುಲಿಗೆ ಪ್ರಕರಣಗಳಿಗೆ ಸಂಬಂಸಿದಂತೆ ಒಟ್ಟು 194 ಗ್ರಾಂ. ತೂಕದ 5 ಮಾಂಗಲ್ಯ ಸರ ಹಾಗೂ 2 ಚಿನ್ನದ ಸರ ಸೇರಿದಂತೆ ಒಟ್ಟು 10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.

ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಆ.6ರಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕಿತ್ತು. ಆದರೆ, ಆ.5ರ ಮಧ್ಯರಾತ್ರಿ ರಂಗಪ್ಪ ಸಿನಿಮೀಯ ರೀತಿ ಪರಾರಿಯಾಗಿದ್ದ.

ನಂತರ ಸದರಿ ಆರೋಪಿಯ ಬಂಧನಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಕಾರಿ ಕೋನಾವಂಶಿ ಕೃಷ್ಣ ಅವರು ವಿಶೇಷ ತಂಡ ರಚಿಸಿ ಆರೋಪಿಯನ್ನು ಬಂಸಲು ಖಡಕ್ ಸೂಚನೆ ನೀಡಿದ್ದರು.

ಶಿರಾ ಪೆÇಲೀಸ್ ಠಾಣೆ ಪಿಎಸ್‍ಐ ಭಾರತಿ ಮತ್ತವರ ಸಿಬ್ಬಂದಿ ಮಧುಗಿರಿ ತಾಲೂಕಿನ ಕಾನ್ಸ್‍ಟೆಬಲ್‍ವೊಬ್ಬರು ನೀಡಿದ ಸುಳಿವಿನ ಮೇರೆಗೆ ನಿನ್ನೆ ಮರುವೇಕೆರೆ ಗ್ರಾಮದಲ್ಲಿ ತಲೆಮರೆಸಿಕೊಂಡಿದ್ದ ರಂಗಪ್ಪನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಿಂದೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 11ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ರಂಗಪ್ಪ ತನ್ನ ಕಾರ್ಯ ಕ್ಷೇತ್ರವನ್ನು ತುಮಕೂರಿಗೆ ವರ್ಗಾಯಿಸಿಕೊಂಡಿದ್ದ.

ಖತರ್ನಾಕ್ ಸರಗಳ್ಳನನ್ನು ಮತ್ತೆ ಸೆರೆ ಹಿಡಿಯು ವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಸಿಬ್ಬಂದಿಯ ಕಾರ್ಯ ವೈಖರಿಯನ್ನು ಎಸ್‍ಪಿ ಕೋನಾ ವಂಶಿಕೃಷ್ಣ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Facebook Comments

Sri Raghav

Admin