ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಮಂಡ್ಯದ ಇಬ್ಬರು ಸುರಕ್ಷಿತವಾಗಿ ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

mount-evarest

ಮಂಡ್ಯ, ಜು.5-ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಇಬ್ಬರು ನಿನ್ನೆ ಸಂಜೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ.
ಶ್ರೀಕಾಂತ್ ಮತ್ತು ಕೃಷ್ಣಕುಮಾರ್ 15 ದಿನಗಳ ಹಿಂದೆ 26 ಜನರ ತಂಡದೊಂದಿಗೆ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು. ಇತ್ತೀಚೆಗೆ ಉಂಟಾದ ಹವಾಮಾನ ವೈಪರೀತ್ಯದಿಂದಾಗಿ ಯಾತ್ರಾರ್ಥಿಗಳಿಗೆ ತೀವ್ರ ತೊಂದರೆ ಎದುರಿಸಿದ್ದರು. ಈ ವೇಳೆ ಈ ಇಬ್ಬರ ಕುಟುಂಬಗಳು ಆತಂಕಕ್ಕೀಡಾಗಿದ್ದವು.
ಶ್ರೀಕಾಂತ್ ಹಾಗೂ ಕೃಷ್ಣಕುಮಾರ್ ಮಂಡಲಂ ಟೂರಿಸ್ಟ್ ಏರ್ಪಡಿಸಿದ್ದ ಮಾನಸ ಸರೋವರ ಯಾತ್ರೆಗೆ ಮಂಡ್ಯ ಜಿಲ್ಲೆಯಿಂದ ತೆರಳಿದ್ದರು.

Facebook Comments

Sri Raghav

Admin