ಆಂಗ್ಲರ ನಾಡಿನಲ್ಲಿ ಕೊಹ್ಲಿ ಪಡೆಗೆ ಇಂದಿನಿಂದ ಅಗ್ನಿ ಪರೀಕ್ಷೆ
ಮ್ಯಾನ್ಚೆಸ್ಟರ್, ಜು.3- ಮುಂಬರುವ ಸೀಮಿತ ಓವರ್ಗಳ ವಿಶ್ವಕಪ್ನತ್ತ ಗುರಿನೆಟ್ಟಿರುವ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡಕ್ಕೆ ಇಂದಿನಿಂದ ಆಂಗ್ಲರ ನಾಡಿನಲ್ಲಿ ಅಗ್ನಿ ಪರೀಕ್ಷೆ ಆರಂಭಗೊಂಡಿದೆ. ಐರ್ಲೆಂಡ್ ವಿರುದ್ಧದ ಚುಟುಕು ಕ್ರಿಕೆಟ್ ಸರಣಿಯಲ್ಲಿ ತಂಡದ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೋ ಸ್ಕರ ವಾಷಿಂಗ್ಟನ್ ಸುಂದರ್ ಉಳಿದಂತೆ ಎಲ್ಲ ಆಟಗಾರರಿಗೂ ಅವಕಾಶ ಕಲ್ಪಿಸಿದ್ದ ವಿರಾಟ್ ಕೊಹ್ಲಿಗೆ ಇಂದಿನಿಂದ ಬಲಿಷ್ಠ ಆಂಗ್ಲರ ವಿರುದ್ಧ ನಡೆಯುವ ಚುಟುಕು ಕ್ರಿಕೆಟ್ನಲ್ಲಿ 11 ಆಟಗಾರರ ತಂಡವನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ಸವಾಲಿನ ರೀತಿಯಲ್ಲಿದೆ.
ಸರಣಿ ಆರಂಭಕ್ಕೂ ಮುನ್ನವೇ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದ ಜಸ್ಪ್ರೀತ್ಬೂಮ್ರಾ ಟೂರ್ನಿಯಿಂದಲೇ ಹೊರಗುಳಿದಿರುವುದು ಭಾರತದ ಬೌಲಿಂಗ್ ಬಲ ತುಸು ಕುಂದಿರುವಂತೆ ಕಂಡರೂ ಕೂಡ ಅನುಭವಿಗಳಾದ ಭುವನೇಶ್ವರ್ ಹಾಗೂ ಉಮೇಶ್ಯಾದವ್ ಅವರು ಇಂಗ್ಲೆಂಡ್ನ ಸ್ಟಾರ್ ಬ್ಯಾಟ್ಸ್ಮನ್ಗಳಾದ ಜೋಸ್ಲರ್ ಬಟ್ಲರ್, ಇಯೋನ್ ಮಾರ್ಗನ್, ಅಲೆಕ್ಸ್ ಹೇಲ್ಸ್ರ ಘಟಾನುಘಟಿ ಬ್ಯಾಟಿಂಗ್ ಪಡೆಯನ್ನು ಕಟ್ಟಿ ಹಾಕುವ ಕಾರ್ಯಾತಂತ್ರದಲ್ಲಿದೆ. ಭಾರತ ತಂಡದಲ್ಲಿರುವ ಟ್ವೆಂಟಿ-20 ಬ್ಯಾಟ್ಸ್ಮನ್ಗಳಾಗಿರುವ ರೋಹಿತ್ಶರ್ಮಾ, ಧವನ್, ರಾಹುಲ್, ಕೊಹ್ಲಿ, ಮಹೇಂದ್ರಸಿಂಗ್ ಧೋನಿ ಆಂಗ್ಲರ ಬೌಲಿಂಗ್ ಪಡೆಯನ್ನು ಎದುರಿಸಲು ಸಾಮಥ್ರ್ಯರಾಗಿದ್ದಾರೆ.
ಇತ್ತೀಚೆಗೆ ಆಸ್ಟ್ರೇಲಿಯಾ ತಂಡದ ವಿರುದ್ಧ ಏಕದಿನ ಹಾಗೂ ಟ್ವೆಂಟಿ-20 ಸರಣಿಯನ್ನು ಕ್ಲೀನ್ಸ್ವೀಪ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆಂಗ್ಲರನ್ನು ಎದುರಿಸುವುದು ಕಠಿಣ ಸವಾಲಾಗಿದೆ ಎಂದು ಭಾರತ ತಂಡದ ನಾಯಕ ಕೊಹ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.