ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಮಂಜು, ಉಪಾಧ್ಯಕ್ಷರಾಗಿ ಇಶ್ರತ್ ಫಾತಿಮಾ ಅವಿರೋಧ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ : ಮಂಡ್ಯ ನಗರಸಭೆ ಅಧ್ಯಕ್ಷರಾಗಿ ಎಚ್. ಎಸ್. ಮಂಜು,ಉಪಾಧ್ಯಕ್ಷರಾಗಿ ಇಶ್ರತ್ ಫಾತಿಮಾ ಇಂದು ನೆಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾ ದರು. ಇಂದು ನೆಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಾ.ದಳದಿಂದ 20ನೇ ವಾರ್ಡಿನ ಎಚ್ಎಸ್ ಮಂಜು ಕಾಂಗ್ರೆಸ್ ಪಕ್ಷದಿಂದ10ನೇ ವಾರ್ಡನ ಶಿವಪ್ರಕಾಶ್ ಅವರು ನಾಮಪತ್ರ ಸಲ್ಲಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆಜಾ.ದಳ ದಿಂದ 13ನೇ ವಾರ್ಡ್ ಇಶ್ರತ್ ಫಾತಿಮಾ ಹಾಗೂ ಕಾಂಗ್ರೆಸ್ ಪಕ್ಷದಿಂದ 5ನೇ ವಾರ್ಡಿನ ನಯೀಮ್ ಅವರು ನಾಮಪತ್ರ ಸಲ್ಲಿಸಿದರು.

ನಗರಸಭೆಯಲ್ಲಿ ಒಟ್ಟು ಸದಸ್ಯರ ಬಲಾಬಲ 35 ಸದಸ್ಯರಿದ್ದು, ಇದರಲ್ಲಿ ಜೆಡಿಎಸ್‌ 18, ಕಾಂಗ್ರೆಸ್‌ 10, ಬಿಜೆಪಿ 2, ಪಕ್ಷೇತರರು 5 ಮಂದಿ ಇದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿತ್ತು.

ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಶಿವಪ್ರಕಾಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಯೀಮ್ ಅವರು ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್ ಪಡೆದ ಕಾರಣ ಅಧ್ಯಕ್ಷರಾಗಿ ಹೆಚ್. ಎಸ್. ಮಂಜು ಹಾಗೂ ಉಪಾಧ್ಯಕ್ಷರಾಗಿ ಇಶ್ರತ್ ಫಾತಿಮಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಹಾಗೂ ಪ್ರೋಫೆಷನರಿ ಉಪವಿಭಾಗಧಿಕಾರಿ ಆದ ನೇಹಾ ಜೈನ್ ಪ್ರಕಟಿಸಿದರು

ಕಳೆದ 2 ವರ್ಷ ಮೀಸಲಾತಿ ಗೊಂದಲದಿಂದ ನೆನೆಗುದಿಗೆ ಬಿದ್ದಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಹೈಕೋರ್ಟ್‌ ಹಸಿರು ನಿಶಾನೆ ತೋರಿದೆ. ನ.2ರೊಳಗೆ ಚುನಾವಣೆ ಮುಗಿಸುವಂತೆ ಸೂಚಿಸಿದೆ.

Facebook Comments

Sri Raghav

Admin