ಮದುವೆ ಮನೆಯಲ್ಲಿ ಎಲ್ಲರೂ ಬ್ಯುಸಿ ಇದ್ದಾಗ ಕೈಚಳಕ ತೋರಿಸಿದ ಕಳ್ಳ

ಈ ಸುದ್ದಿಯನ್ನು ಶೇರ್ ಮಾಡಿ

Gold-Theft--01

ಮಂಡ್ಯ, ನ.11-ಛತ್ರದಲ್ಲಿ ಮದುವೆ ಸಂಭ್ರಮದಲ್ಲಿದ್ದ ವಧುವಿನ ಮನೆಯ ಬಾಗಿಲು ಮೀಟಿ 1.20 ಲಕ್ಷ ರೂ. ಹಾಗೂ 20 ಗ್ರಾಂ ಚಿನ್ನ ದೋಚಿರುವ ಘಟನೆ ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪಾಂಡವಪುರ ತಾಲೂಕಿನ ನೀಲನಹಳ್ಳಿ ಗೇಟ್ ಸಮೀಪದ ಲಕ್ಷ್ಮಿಸಾಗರದ ಸಣ್ಣ ಹನುಮೇಗೌಡರ ಮನೆಯಲ್ಲಿ ಚೋರರು ಸಮಯ ಸಾಧಿಸಿ ಕಳ್ಳತನ ಮಾಡಿದ್ದಾರೆ.

ಸಣ್ಣಹನುಮೇಗೌಡರ ಮಗಳ ಮದುವೆ ಇಂದು ಪಾಂಡವಪುರದ ಛತ್ರದಲ್ಲಿ ನಡೆಯುತ್ತಿತ್ತು. ನಿನ್ನೆಯೇ ಚಪ್ಪರಶಾಸ್ತ್ರ ಇದ್ದಿದ್ದರಿಂದ ಮನೆಯವರೆಲ್ಲರೂ ಛತ್ರದಲ್ಲಿ ಮದುವೆ ಸಡಗರದಲ್ಲಿ ಪಾಲ್ಗೊಂಡಿದ್ದರು. ಈ ಸಮಯ ನೋಡಿ ಚೋರರು ಬಾಗಿಲು ಮೀಟಿ ಒಳನುಗ್ಗಿ ಬೀರುವಿನಲ್ಲಿ ಇಟ್ಟಿದ್ದ 1.20 ಲಕ್ಷ ನಗದು ಹಾಗೂ 20 ಗ್ರಾಂ ಚಿನ್ನ ಕದ್ದೊಯ್ದಿದ್ದಾರೆ. ಬೆಳಗ್ಗೆ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments