ಮದ್ದೂರಿಗೂ ವಕ್ಕರಿಸಿದ ಮಹಾಮಾರಿ ಕೊರೊನಾ

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಜೂ.17- ಮಹಾಮಾರಿ ಕೊರೊನಾ ಮದ್ದೂರಿನಲ್ಲೂ ಖಾತೆ ತೆರೆದಿದೆ. ಟಯೋಟಾ ಕಂಪೆನಿಯಲ್ಲಿ ಕೆಲಸ ಮಾಡುವ ನೌಕರನೊಬ್ಬನಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಕೊರೊನಾ ಕಾಣಿಸಿಕೊಡ ಆರಂಭದಲ್ಲಿ ಮೈಸೂರು ಜಿಲ್ಲೆ ನಂಜನಗೂಡಿನ ಜ್ಯುಬಿಲೆಂಟ್ ಔಷಧಿ ಕಾರ್ಖಾನೆ ನೌಕರರಿಂದ ಸೋಂಕು ಸುತ್ತಮುತ್ತಲಿನ ಮಂಡ್ಯ, ಹಾಸನ ಜಿಲ್ಲೆಗಳಿಗೂ ವ್ಯಾಪಿಸಿತ್ತು. ಈಗ ಟಯೋಟಾ ಕಂಪೆನಿಯ ನೌಕರನಿಗೆ ಸೋಂಕು ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.

ಜ್ಯುಬಿಲೆಂಟ್ ಕಾರ್ಖಾನೆಯಿಂದ ಸೋಂಕು ಹರಡಿದ ವೇಳೆ ಮಂಡ್ಯ ಜಿಲ್ಲೆಯ ಮಳವಳ್ಳಿ, ಕೆ.ಆರ್.ಪೇಟೆ ಸೇರಿದಂತೆ ಹಲವು ತಾಲ್ಲೂಕುಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಎಲ್ಲವೂ ತಣ್ಣಗಾದ ಹೊತ್ತಿನಲ್ಲಿ ಟಯೋಟಾ ಕಾರ್ಖಾನೆ ನೌಕರ ಸೋಂಕು ಪೀಡಿತವಾಗಿರುವುದರಿಂದ ಮದ್ದೂರು ಜನತೆ ಭಯ ಭೀತರಾಗಿದ್ದಾರೆ.

ಪಟ್ಟಣದ ನಾಲ್ಕನೇ ವಾರ್ಡ್‍ನ ವಾಸಿಯಾಗಿದ್ದ ಈ ವ್ಯಕ್ತಿ ವಾಸಿಸುತ್ತಿದ್ದ ಮನೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಆತನ ಪ್ರಾಥಮಿಕ ಮತ್ತು ಎರಡನೇ ಹಂತದ ಸಂಪರ್ಕಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‍ಗೆ ಒಳಪಡಿಸುವ ಪ್ರಯತ್ನಗಳು ನಡೆಯುತ್ತಿವೆ.

Facebook Comments