ಮಂಡ್ಯದಲ್ಲಿ ಮೋಸ್ಟ್ ಥ್ರಿಲ್ಲಿಂಗ್ ಗೇಮ್, ನಿಖಿಲ್-ಸುಮಲತಾ ನಡುವೆ ಹಾವು-ಏಣಿ ಆಟ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲೂ ಕೊನೆಯ ಕ್ಷಣದವರೆಗೂ ಜಿದ್ದಾಜಿದ್ದಿ ಕಾಯ್ದುಗೊಂಡಿದ್ದು ಮಂಡ್ಯದ ಕಣ.  ಮೊದಲ ಸುತ್ತಿನಲ್ಲೇ ನಿಖಿಲ್ ಕುಮಾರ ಸ್ವಾಮಿ 12ಮತಗಳ ಮುನ್ನಡೆ ಸಾಧಿಸಿದ್ದು, ನಂತರ ಎಣಿಕೆಯಲ್ಲಿ ಸುಮಲತಾ 120 ಮತಗಳ ಮುನ್ನಡೆ ಸಾಧಿಸಿ ಪ್ರತಿ ಹಂತದಲ್ಲೂ 100-200 ಅಂತರದಲ್ಲೇ ಇಬ್ಬರಲ್ಲೂ ಪೈಪೋಟಿ ಏರ್ಪಟ್ಟಿತ್ತು. 2800ರವರೆಗೂ ಮುನ್ನಡೆ ಸಾಧಿಸಿದರು.

ಮತ್ತೊಂದು ಹಂತದಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸುತ್ತಿದ್ದರು. ಪ್ರತಿ ಹಂತದಲ್ಲೂ ಇಬ್ಬರ ನಡುವೆ 3ಸಾವಿರಕ್ಕಿಂತಲೂ ಹೆಚ್ಚಿನ ಅಂತರ ಬರಲೇ ಇಲ್ಲ, ಅಷ್ಟು ಜಿದ್ದಾಜಿದ್ದಿನ ಹೋರಾಟ ಮಂಡ್ಯದಲ್ಲಿ ನಡೆದಿತ್ತು. [ LOKSABHA ELECTIONS 2019 RESULT – Live Updates]

ಸುಮಲತಾ ಅವರನ್ನು ಸೋಲಿಸಬೇಕೆಂದು. ಸುಮಲತಾ ಎಂಬ ಹೆಸರಿನಲ್ಲಿ ಇತರ ಮೂವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ಅವರ್ಯಾರು 2ಸಾವಿರಕ್ಕಿಂತ ಹೆಚ್ಚಿನ ಮತ ಗಳಿಸಲಿಲ್ಲ.

ಕೊಡಗು-ಮೈಸೂರು ಕ್ಷೇತ್ರದಲ್ಲಿ ಪ್ರತಾಪ್ ಸಿಂಹ ಗೆಲುವು  : ಮೈಸೂರು, ಮೇ 23-ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅಪಾರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆರಂಭದಿಂದಲೂ ಮೈತ್ರಿ ಅಭ್ಯರ್ಥಿ ವಿಜಯ್‍ಶಂಕರ್ ಅವರಿಂದ ಸಾಕಷ್ಟು ಮುನ್ನಡೆ ಸಾಧಿಸಿದ್ದ ಪ್ರತಾಪ್ ಸಿಂಹ ಹೆಚ್ಚಿನ ಅಂತರದಲ್ಲಿ ಜಯಗಳಿಸಿದ್ದಾರೆ. ಈ ಕುರಿತಂತೆ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.

Facebook Comments

Sri Raghav

Admin