ಬಿಗ್ ಬ್ರೇಕಿಂಗ್ : ಇಂಡಿಯಾದಲ್ಲೇ ಸುದ್ದಿಯಾಗಿದ್ದ ಮಂಡ್ಯದಲ್ಲಿ ಸುಮಲತಾಗೆ ರೋಚಕ ಗೆಲುವು..! ಫಲಿಸಿತು ಜೋಡೆತ್ತುಗಳ ಶ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು ಮೇ 23- ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾದಾದ್ಯಂತ ಸುದ್ದಿಯಾಗಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಕೊನೆಗೂ ಮಂಡ್ಯದ ಸೊಸೆ ಸುಮಲತಾ ಅಂಬರೀಷ್ ಅವರು ಗೆದ್ದು ಬೀಗಿದ್ದಾರೆ. ನಿಖಿಲ್ ಸೋಲಿನ ಮೂಲಕ ಸಿಎಂ ಕುಮಾರಸ್ವಾಮಿ ಅವರಿಗೆ ತೀವ್ರ ಮುಖಭಾಗವಾಗಿದೆ.

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿತವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ನಡುವೆ ಕೊನೆವರೆಗೂ ಸಮಬಲದ ಹೋರಾಟ ಕಂಡುಬಂದಿತ್ತು.

ಒಮ್ಮೆ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದರೆ, ಮತ್ತೊಮ್ಮೆ ಸುಮಲತಾ ಮುನ್ನಡೆ ಸಾಧಿಸಿ ಮತ ಎಣಿಕೆಯ ವಿವರಗಳು ಹಾವು-ಏಣಿಯಂತೆ ಕಂಡುಬಂದವು. ಅಂತಿಮವಾಗಿ ಸುಮಾಲಾ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

ಮೊದಲ ಸುತ್ತಿನಲ್ಲೇ ನಿಖಿಲ್ ಕುಮಾರ ಸ್ವಾಮಿ 12ಮತಗಳ ಮುನ್ನಡೆ ಸಾಧಿಸಿದ್ದು, ನಂತರ ಎಣಿಕೆಯಲ್ಲಿ ಸುಮಲತಾ 120 ಮತಗಳ ಮುನ್ನಡೆ ಸಾಧಿಸಿ ಪ್ರತಿ ಹಂತದಲ್ಲೂ 100-200 ಅಂತರದಲ್ಲೇ ಇಬ್ಬರಲ್ಲೂ ಪೈಪೋಟಿ ಏರ್ಪಟ್ಟಿತ್ತು. 2800ರವರೆಗೂ ಮುನ್ನಡೆ ಸಾಧಿಸಿದರು.

ಮತ್ತೊಂದು ಹಂತದಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ ಸಾಧಿಸುತ್ತಿದ್ದರು. ಪ್ರತಿ ಹಂತದಲ್ಲೂ ಇಬ್ಬರ ನಡುವೆ 3ಸಾವಿರಕ್ಕಿಂತಲೂ ಹೆಚ್ಚಿನ ಅಂತರ ಬರಲೇ ಇಲ್ಲ, ಅಷ್ಟು ಜಿದ್ದಾಜಿದ್ದಿನ ಹೋರಾಟ ಮಂಡ್ಯದಲ್ಲಿ ನಡೆದಿತ್ತು.

ಸುಮಲತಾ ಅವರನ್ನು ಸೋಲಿಸಬೇಕೆಂದು. ಸುಮಲತಾ ಎಂಬ ಹೆಸರಿನಲ್ಲಿ ಇತರ ಮೂವರನ್ನು ಕಣಕ್ಕಿಳಿಸಿ ಜೆಡಿಎಸ್ ನನನ್ ಪ್ರಯತ್ನ ಮಾಡಿತ್ತು, ಆದರೆ ಅದ್ಯಾವ ತಂತ್ರವೂ ಕೈಗೂಡಲಿಲ್ಲ.

ಈ ಮೂಲಕ ಇಂಡಿಯಾದಾದ್ಯಂತ ಸುದ್ದಿಯಾಗಿದ್ದ ಮಂಡ್ಯ ಚುನಾವಣಾ ಫಲಿತಾಂಶದ ಕುತೂಹಲಕ್ಕೆ ತೆರೆಬಿದ್ದಿದೆ. ಸುಮಲತಾ ಅಂಬರೀಷ್ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿ ಪಾರ್ಲಿಮೆಂಟ್ ಮೆಟ್ಟಿಲೇರಲಿದ್ದಾರೆ.

# ಫಲಿಸಿದ ಜೋಡೆತ್ತುಗಳ ಶ್ರಮ :
ಮಂಡ್ಯ ಲೋಕಸಭಾ ಜಿದ್ದಾಜಿದ್ದಿನಲ್ಲಿ ಸುಮಲತಾ ಅವರನ್ನು ಗೆಲ್ಲಿಸಲೇಬೇಕೆಂದು ಸ್ಯಾಂಡಲ್ವುಡ್ ನ ಸ್ಟಾರ್ ನಟರಾದ ರಾಕಿಂಗ್ ಸ್ಟಾರ್ ಯಶ್ ಹಾಗೂ ಡಿಬಾಸ್ ದರ್ಶನ್ ನೆತ್ತಿಸುಡುವ ಬಿಸಿಲನ್ನೇ ಲೆಕ್ಕಿಸದೆ ಹಗಲಿರುಳು ಮಾಡಿದ ಪ್ರಚಾರಕ್ಕೆ ಕೊನೆಗೂ ಫಲ ಸಿಕ್ಕಂತಾಗಿದೆ. ಪ್ರಚಾರದ ವೇಳೆ ಕೆಲವರ ಟೀಕೆ ಟಿಪ್ಪಣಿಗಳಿಗೂ ಗುರಿಯಾಗಿದ್ದರೂ ಸಹ ಯಾರನ್ನೂ ಲೆಕ್ಕಿಸದೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡು ಸುಮಲತಾ ಅವರ ಪರ ಮತಯಾಚನೆ ಮಾಡಿದ್ದರು.
ಇದರ ಫಲವೇ ಇಂದು ಸುಮಾಳ ಗೆಲುವುಗೆ ಕಾರಣವೆಂದರೆ ತಪ್ಪಾಗಲಾರದು. ಇಬ್ಬರೂ ನಟರು ಜೋಡೆತ್ತುಗಳನೆ ಸುಮಲತಾ ಗೆಲುವಿಗೆ ಶ್ರಮಿಸಿದ್ದರು. ಸುಮಲಾತಾ ಗೆಲುವಿಗೆ ಕಾರಣಕರ್ತರಾದ ಕ್ಷೇತ್ರದ ಮತದಾರರಿಗೂ ಇಬ್ಬರೂ ನಟರು ಅಭಿನಂದನೆ ಸಲ್ಲಿಸಿದ್ದಾರೆ.

 

Facebook Comments

Sri Raghav

Admin