ಇಲ್ಲಿದೆ ನೋಡಿ ಮಂಡ್ಯದ ಮತಗಳ ಲೆಕ್ಕಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ, ಮೇ 24- ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಮಂಡ್ಯದಲ್ಲಿ ನಡೆದ ಸ್ವಾಭಿಮಾನಿ ವರ್ಸಸ್ ಸರ್ಕಾರದ ನಡುವಿನ ಸಮರದಲ್ಲಿ ಸುಮಲತಾ ಅವರು 1,26,436 ಮತಗಳ ಅಂತರದಿಂದ ಭರ್ಜರಿ ಗೆಲುವು ಪಡೆದಿದ್ದಾರೆ. ಚುನಾವಣೆಯಲ್ಲಿ ನಿಖಿಲ್ ಅವರಿಗೆ 5,71,777 ಮತ ಲಭಿಸಿದ್ದರೆ, ಸುಮಲತಾ ಅವರಿಗೆ 6,98,213 ಮತ ಲಭಿಸಿದೆ.

ವಿಧಾನಸಭಾವಾರು ಮತ ಪ್ರಮಾಣ: ಮಂಡ್ಯ ನಗರದಲ್ಲಿ ನಿಖಿಲ್ ಅವರಿಗೆ 67,259 ಮತ ಹಾಗೂ ಸುಮಲತಾ ಅವರಿಗೆ 89,266 ಮತ ಲಭಿಸಿದೆ. ಸ್ವತಃ ಕುಮಾರಸ್ವಾಮಿ ಅವರ ಚನ್ನಪಟ್ಟಣದಲ್ಲಿ ಸುಮಲತಾ ಅವರಿಗೆ 22,007 ಲೀಡ್ ಸಿಕ್ಕಿದೆ.

ಮದ್ದೂರು ಶಾಸಕ ಡಿಸಿ ತಮ್ಮಣ್ಣ ಅವರ ಕ್ಷೇತ್ರದಲ್ಲಿ ನಿಖಿಲ್‍ಗೆ 71,364 ಮತ, ಸುಮಲತಾಗೆ 90,331 ಸಿಕ್ಕಿದ್ದು, 18,967 ಮತಗಳ ಮುನ್ನಡೆಯನ್ನ ಸುಮಲತಾ ಪಡೆದಿದ್ದಾರೆ. ಮೇಲುಕೋಟೆಯಲ್ಲಿ ನಿಖಿಲ್‍ಗೆ 71,998 ಮತ, ಸುಮಲತಾಗೆ 87,884 ಮತ ಗಳಿಸಿದ್ದರೆ 15,886 ಮತಗಳ ಮುನ್ನಡೆಯನ್ನ ಸುಮಲತಾ ಪಡೆದಿದ್ದಾರೆ.

ಮಳವಳ್ಳಿಯಲ್ಲಿ ನಿಖಿಲ್‍ಗೆ 68,749 ಮತ ಹಾಗೂ ಸುಮಲತಾ ಅವರಿಗೆ 10,0320 ಲಭಿಸುವುದರೊಂದಿಗೆ 31,571 ಮತಗಳ ಬಹುದೊಡ್ಡ ಲೀಡ್ ಸಿಕ್ಕಿದೆ.  ಕೆಆರ್ ಪೇಟೆ ಶಾಸಕರಾದ ನಾರಾಯಣಗೌಡ ಕ್ಷೇತ್ರದಲ್ಲಿ ನಿಖಿಲïಗೆ 75,528 ಮತ ಹಾಗೂ ಸುಮಲತಾಗೆ 79,295 ಮತ ಲಭಿಸಿದ್ದು, ಸುಮಲತಾ 3,767 ಮತಗಳ ಮುನ್ನಡೆ ಪಡೆದಿದ್ದಾರೆ.

ನಾಗಮಂಗಲ ಶಾಸಕ ಸುರೇಶ್‍ಗೌಡ ಅವರ ಕ್ಷೇತ್ರದಲ್ಲಿ ನಿಖಿಲ್ ಗೆ 83,092 ಮತ, ಸುಮಲತಾಗೆ 76,134 ಮತ ಸಿಕ್ಕಿದ್ದು, ಈ ಕ್ಷೇತ್ರದಲ್ಲಿ ನಿಕಿಲï 6,958 ಮತಗಳ ಮುನ್ನಡೆ ಪಡೆದಿದ್ದಾರೆ.

ಸಚಿವ ಸಾರಾ ಮಹೇಶ್ ಅವರ ಕ್ಷೇತ್ರವಾದ ಕೆ.ಆರ್. ನಗರದಲ್ಲಿ ನಿಖಿಲ್‍ಗೆ 282 ಮತ ಮುನ್ನಡೆ ಸಿಕ್ಕಿದ್ದು, ಸುಮಲತಾ 74,969 ಮತ ಪಡೆದಿದ್ದರೆ, ನಿಖಿಲ್ 75,251 ಮತ ಗಳಿಸಿದ್ದಾರೆ.

ಉಳಿದಂತೆ ಶಾಸಕ ರವೀಂದ್ರ ಶೀಕಂಠಯ್ಯ ಅವರ ಶ್ರೀರಂಗಪಟ್ಟಣದಲ್ಲಿ ನಿಖಿಲïಗೆ 67,363 ಮತ, ಸುಮಲತಾಗೆ 95,142 ಮತ ಸಿಕ್ಕಿದ್ದು, 27,779 ಮತಗಳನ್ನು ಸುಮಲತಾ ಪಡೆದಿದ್ದಾರೆ.

Facebook Comments

Sri Raghav

Admin