ಮಕ್ಕಳನ್ನೂ ಬಿಟ್ಟಿಲ್ಲ ಮಂಡ್ಯ ಎಲೆಕ್ಷನ್ ರಿಸಲ್ಟ್ ಕುತೂಹಲ, ಕ್ರೇಜಿ ಕಿಡ್ಸ್ ವಿಡಿಯೋ ವೈರಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಲೋಕ ಚುನಾವಣೆ ಫಲಿತಾಂಶಕ್ಕೆ ಇನ್ನು‌ ಕೆಲವೇ ದಿನ ಬಾಕಿ ಇದೆ. ಈ‌ ನಡುವೆ ಫಲಿತಾಂಶ ಬಗ್ಗೆ ಬಿಸಿ ಬಿಸಿ ಚರ್ಚ್ ನಡೆಯುತ್ತಿರುವಾಗಲೇ ಗ್ರಾಮದ ಸೋಮಾರಿ ಕಟ್ಟೆಯಲ್ಲಿ ಮಕ್ಕಳು ಸೇರಿ‌ ಮೈಮೇಲೆ ದೇವರು ಬಂದಂತೆ‌ ನಟಿಸುವ ವಿಡಿಯೋ ಸಾಮಾಜಿಕ ಜಾಲ‌ ತಾಣದಲ್ಲಿ ವೈರಲ್ ಆಗಿದೆ.

ಗ್ರಾಮದ ಸೋಮಾರಿ ಕಟ್ಟೆಯಲ್ಲಿ ಮುರ್ನಾಲ್ಕು ಮಕ್ಕಳ‌ ಪೈಕಿ ಓರ್ವ ದೇವರು ಬಂದಂತೆ ನಟಿಸುತ್ತಾನೆ. ಮತ್ತೊರ್ವ ಬಾಲಕ ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳ‌‌ ಬಗ್ಗೆ ಪ್ರಸ್ತಾಪಿಸುತ್ತಾ “ಈ ಬಾರಿ ನಿಖಿಲ್ ಬಂದಾನ ಸುಮಲತಾ ಬಂದಾಳ” ಎಂದು ಕೇಳಿದಾಗ ದೇವರು ಬಂದಂತೆ ನಟಿಸುವ ಬಾಲಕ ಸುಮಲತಾ ಎಂದು ಉಚ್ಚರಿಸುತ್ತಾ ಮತ್ತೆ ಹೆಜ್ಜೆ ಹಾಕುತ್ತಾನೆ.

ಚುನಾವಣೆ ಫಲಿತಾಂಶಕ್ಕೆ ಕಾಯುತ್ತಾ ಬೆಟ್ಟಿಂಗ್ ಭರಾಟೆ ಯಲ್ಲಿ ತೊಡಗಿರುವ ಹಲವು‌ ಮಂದಿ ಹಾಗೂ ಗ್ರಾಮದ‌ ಟೀಸ್ಟಾಲ್ , ಸುಮಾರಿ‌ ಕಟ್ಟೆ , ಮನೆಗಳ ಜಗಲಿ ಮುಂದೆ ಇಂತಹ ಹಲವು ಪ್ರಸಂಗವನ್ನು ನಾವು ಕಾಣಬಹುದು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin