ಜೋಗಮ್ಮ ಭವಿಷ್ಯ ನುಡಿದ ವಿಡಿಯೋ ವೈರಲ್, ಮಂಡ್ಯದಲ್ಲಿ ಗೆಲ್ಲೋರು ಯಾರು ಗೊತ್ತೆ…!

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ : ಏ. 01 : ದೇಶದಲ್ಲಿ ನಡೆಯುತ್ತಿರುವ  ಲೋಕಸಭಾ  ಚುನಾವಣಾ ಒಂದೆಡೆಯಾದರೆ ಮಂಡ್ಯದ  ಚುನಾವಣೆ  ಮತ್ತೊಂದೆಡೆ  ಎನ್ನುವಷ್ಟರ ಮಟ್ಟಿಗೆ ಮಂಡ್ಯ ಲೋಕಸಭಾ ಕ್ಷೇತ್ರ ಹೈ ವೋಲ್ಟೇಜ್  ಕ್ಷೇತ್ರವಾಗಿ  ಮಾರ್ಪಟ್ಟಿದೆ. ಮಂಡಿದ ಗಂಡು ಅಂಬರೀಷ್ ಪತ್ನಿ ಸುಮಲತಾ ಮತ್ತೊಂದೆಡೆ ರಾಜ್ಯದ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರ್ ನಡುವೆ ಭಾರಿ ಹಣಾಹಣಿ ನಡೆಯುತ್ತಿದೆ.

ಇದರ ‌ನಡುವೇ ಇವರಿಬ್ಬರಲ್ಲಿ ಯಾರಿಗೆ ಸೋಲು, ಯಾರಿಗೆ ಗೆಲುವು ಎಂಬ ಬಗ್ಗೆ ಸಾರ್ವಜನಿಕರಲ್ಲಿ ಜಿಜ್ಞಾಸೆ ಶುರುವಾಗಿದ್ದು, ಕೆಲವರು ದೈವದ ಮೊರೆ ಹೋಗಿದ್ದಾರೆ.

ಮಂಡ್ಯದಲ್ಲಿ ಸುಮಲತಾ ಗೆಲುತ್ತಾರೋ ಅಥವಾ ನಿಖಿಲ್ ಕುಮಾರಸ್ವಾಮಿ ಗೆಲುತ್ತಾರೋ ಎಂದು‌ ಮಹಿಳೆಯೊಬ್ಬರು ಜೋಗಮ್ಮನ ಮೂಲಕ ಯಲ್ಲಮ್ಮ ದೇವಿಯ ತುಂಬಿದ ಕೊಡದ ಭವಿಷ್ಯ ಕೇಳಿದ್ದು, ಇದು ಈಗ ಸಖತ್ ವೈರಲ್ ಆಗಿದೆ.

ಯಲ್ಲಮ್ಮ ದೇವಿ ಸುಮಲತಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ತೋರಿಸಿದ್ದಾಳೆ. ಇನ್ನು ದೇವೇಗೌಡ ಸೇರಿದಂತೆ ಅವರ ಕುಟುಂಬದ ಯಾರು ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದಿಲ್ಲ ಎಂತಲೂ ಹೇಳಿದ್ದಾರೆ.

ಅದರ ಜೊತೆಗೆ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ಸೂಚನೆ ನೀಡಿದ್ದು ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಒಟ್ಟಿನಲ್ಲಿ ಜೋಗಮ್ಮನ ಭವಿಷ್ಯ ಎಷ್ಟರ ಮಟ್ಟಿಗೆ ನಿಜವಾಗುತ್ತೋ ಚುನಾವಣಾ ಫಲಿತಾಂಶದ ವರೆಗೂ ಕಾದು  ನೋಡಬೇಕು.  ಸಕ್ಕರೆ ನಾಡಿನ   ಜನ ಯಾರಿಗೆ ಸಿಹಿ ಅನುಭವ ಕೊಡುತ್ತಾರೋ ಯಾರಿಗೆ ಕಹಿ ನೀಡುತ್ತಾರೆ ಕಾದು  ನೋಡಬೇಕು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin