‘ಜಿಂದಾಲ್‌ಗೆನೀಡಿದ ಜಾಗದಲ್ಲೇ ನನಗೂ 50 ಎಕೆರೆ ಕೊಡಿ ಕೋಳಿ ಫಾರಂ ಮಾಡ್ತೀನಿ’

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ : ಜಿಂದಾಲ್‌ ಸ್ಟೀಲ್ ಕಂಪನಿಗೆ ಭೂಮಿ ಮಾರಾಟ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಮಂಡ್ಯ ಜಿಲ್ಲೆಯ ಓರ್ವ ವ್ಯಕ್ತಿ ಕೋಳಿ ಫಾರಂ ಹಾಗೂ ಇಟ್ಟಿಗೆ ಫ್ಯಾಕ್ಟರಿ ಮಾಡಲು 50 ಎಕರೆ ಜಮೀನು ನೀಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಅಚ್ಚರಿ ಮೂಡಿಸಿದ್ದಾನೆ.

ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ರಾಜೇಗೌಡನ ದೊಡ್ಡಿ ಗ್ರಾಮದ ಆರ್.ಬಿ.ಬಸವೇಗೌಡ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಭೂಮಿ ನೀಡುವಂತೆ ಮನವಿ‌ ಮಾಡಿರುವ ಪತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಬಸವೇಗೌಡ ಜೂನ್ 19 ರಂದು ರಾಜ್ಯ ಮುಖ್ಯ ಕಾರ್ಯದರ್ಶಿಗೆ‌ ಬರೆದಿರುವ ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ ಜಿಂದಾಲ್ ಗೆ ಸಾವಿರಾರು ಎಕರೆ ಭೂಮಿಯನ್ನು ನೀಡುತ್ತಿರುವ ಜಾಗದಲ್ಲಿ ಕೋಳಿ ಫಾರಂ‌ ಹಾಗೂ ಇಟ್ಟಿಗೆ ಫ್ಯಾಕ್ಟರಿ ತೆರೆಯಲು 50 ಎಕರೆ ಭೂಮಿ ಬೇಕಾಗಿದೆ ಎಂದು ಮನವಿ ಮಾಡಿರುವ ಅವರು ಎಕರೆಗೆ 5 ಲಕ್ಷ ನೀಡುವುದಾಗಿ ಹೇಳಿದ್ದಾರೆ.

ಖಾಸಗಿಯವರಿಂದ ಖರೀದಿಸಲು ಒಂದೇ ಕಡೆ 50 ಎಕರೆ ಜಮೀನು ದೊರೆಯುವುದಿಲ್ಲಾ ಅಲ್ಲದೆ ಸಿಕ್ಕರೂ ಸಹ ಎಕರೆಗೆ 15 ರಿಂದ 20 ಲಕ್ಷ ನೀಡಬೇಕು ಇದರಿಂದ ಹೆಚ್ಚಿನ ಹೊರೆ ಅಲ್ಲದೆ‌ ಅಷ್ಟು ಹಣ ಹೂಡಿಕೆ ಸಾಧ್ಯವಿಲ್ಲ ; ಆದ್ದರಿಂದ ಸರ್ಕಾರ ಎಕರೆಗೆ 5 ಲಕ್ಷದಂತೆ 50 ಎಕರೆ ಭೂಮಿ ನೀಡಿದರೆ 100 ಮಂದಿಗೆ ಉದ್ಯೋಗ‌ ನೀಡಲು ಯೋಜನೆ ರೂಪಿಸಿದ್ದು ಭೂಮಿ ನೀಡುವಂತೆ ವಿನಯ ಪೂರ್ವಕವಾಗಿ ಮನವಿ ಮಾಡುವುದಾಗಿ ಪತ್ರದಲ್ಲಿ ಹೇಳಿದ್ದಾರೆ.

ಈ ಮೂಲಕ ಸರ್ಕಾರದ ಗಮನ ಸೆಳೆದಿರುವ ವ್ಯಕ್ತಿ ಜಿಂದಾಲ್ ಗೆ ಸಾವಿರಾರು ಎಕರೆ ಮಾರಾಟ ಪ್ರಹಸನದ ಮದ್ಯೆ ವ್ಯಕ್ತಿಯು ಅದೇ ಜಾಗದಲ್ಲಿ ತನಗೂ 50 ಎಕರೆ ಭೂಮಿ ನೀಡುವಂತೆ ಬರೆದಿರುವ ಈ ಪತ್ರ ಬಹಿರಂಗ ಗೊಂಡಿದ್ದು ಚರ್ಚೆಗೆ ಗ್ರಾಸವಾಗಿದೆ.

ಅಲ್ಲದೆ ಇದು ವಿಧಾನಸೌಧದಲ್ಲಿನ ರಾಜ್ಯ ಮುಖ್ಯ ಕಾರ್ಯದರ್ಶಿ ಅವರಿಗೆ ತಲುಪಿದ್ದು ಇದಕ್ಕೆ ಅವರು ಯಾವ ರೀತಿಯ ಉತ್ತರ ನೀಡಿದ್ದಾರೆ ಎಂಬ ಕುತೂಹಲ ಹುಟ್ಟಿಸಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin