ಮಂಗಳೂರಿನಲ್ಲಿ ಸಿಕ್ಕಿದು ಸ್ವದೇಶಿ ಬಾಂಬ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.21- ಮಂಗಳೂರಿನಲ್ಲಿ ನಿನ್ನೆ ಪತ್ತೆಯಾದ ಬಾಂಬ್ ದೇಶೀ ನಿರ್ಮಿತ (ಐಇಡಿ) ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸುಧಾರಿತ ಸ್ಫೋಟಕ ವಸ್ತುಗಳನ್ನು ಬಳಸಿ ಐಇಡಿ ಬಾಂಬ್ ತಯಾರು ಮಾಡಿ, ಅದನ್ನು ವಿಮಾನ ನಿಲ್ದಾಣಕ್ಕೆ ತಂದಿಟ್ಟಿರುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಬಾಂಬ್ ತಯಾರಿಕಾ ತಂತ್ರಜ್ಞಾನ ಕಲಿತ ಉಗ್ರರು ಕಾರ್ಯಾಚರಣೆಗಿಳಿದಿದ್ದಾರೆಯೇ ಎಂಬ ಅನುಮಾನಗಳು ವ್ಯಕ್ತವಾಗಿದೆ.

ಒಂದು ವೇಳೆ ಅದು ನಿಜವೇ ಆಗಿದ್ದರೆ, ಆತಂಕದ ಸನ್ನಿವೇಶಗಳು ಕಣ್ಣೆದುರಿಗೇ ಇವೆ. ಸ್ಥಳೀಯ ವ್ಯಕ್ತಿಗಳು ಬಾಂಬ್ ತಯಾರಿಸುವ ತರಬೇತಿ ಪಡೆದು ಕಾರ್ಯಾಚರಣೆಗೆ ಇಳಿದಿದ್ದಾರೆ ಎಂಬುದಾದರೆ ವ್ಯವಸ್ಥಿತವಾದ ಉಗ್ರರ ಜಾಲ ಸಕ್ರಿಯವಾಗಿದೆ ಎಂಬುದು ಖಚಿತವಾಗಲಿದೆ.

ನಿನ್ನೆ ಸ್ಫೋಟಿಸಿ ನಾಶಪಡಿಸಲಾದ ಬಾಂಬ್‍ನ ಅವಶೇಷಗಳನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ರವಾನಿಸಲಾಗಿದೆ. ಪ್ರಯೋಗಾಲಯದ ವರದಿ ಬಂದ ಬಳಿಕ ಬಾಂಬ್‍ನ ಸ್ವರೂಪ ಮತ್ತು ಯಾವ ರೀತಿಯ ರಸಾಯನಿಕ ವಸ್ತುಗಳನ್ನು ಬಳಸಲಾಗಿತ್ತು ಎಂಬುದು ತಿಳಿದು ಬರಲಿದೆ.

Facebook Comments