ಮಂಗಳೂರು ಗಲಭೆ ಪ್ರಕರಣ: ನೋಟಿಸ್‍ಗೆ ಹಾಜರಾದ ಕೇರಳಿಗರು

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಜ.20- ನಗರದಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರದಲ್ಲಿ ತೊಡಗಿದ್ದರೆನ್ನಲಾದ ಕೇರಳದ ಕೆಲವರಿಗೆ ಇಲ್ಲಿನ ಬಂದರು ಪೊಲೀಸರು ನೋಟೀಸ್ ನೀಡಿದ್ದು,ಇಂದು ಕೆಲವರು ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸುತ್ತಿದ್ದಾರೆ.

ಹಿಂಸಾಚಾರದಲ್ಲಿ ತೊಡಗಿದ ಯುವಕರ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಹಿನ್ನೆಲೆಯಲ್ಲಿ ಅವರ ಪತ್ತೆ ಕಾರ್ಯ ಕೈಗೊಂಡ ಪೊಲೀಸರು ಅವರ ಮೊಬೈಲ್ ಕರೆಗಳು ಹಾಗೂ ಲೊಕೇಷನ್ ಅನ್ನು ಆದರಿಸಿ ನೋಟೀಸ್ ನೀಡಿದ್ದರು. ಇಂದು ಬೆಳಗ್ಗೆ ಕೇರಳದಿಂದ 10 ರಿಂದ 20 ಮಂದಿ ಠಾಣೆಗೆ ಬಂದು ಸಮಜಾಯಿಷಿ ನೀಡಿದ್ದಾರೆ. ಕೆಲವರ ಹೇಳಿಕೆಗಳು ಅನುಮಾನ ಹುಟ್ಟಿಸಿದ್ದು,ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Facebook Comments