ಮಣಿಪಾಲ್ ಆಸ್ಪತ್ರೆಯ ಶುಶ್ರೂಷಾ ಮೇಲ್ವಿಚಾರಕಿಗೆ ಫ್ಲಾರೆನ್ಸ್ ನೈಟಿಂಗೇಲ್ 2019 ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.15- ಮಾಲತಿ ಮಣಿಪಾಲ್ ಆಸ್ಪತ್ರೆಯ ಮುಖ್ಯ ಶುಶ್ರೂಷಾ ಮೇಲ್ವಿಚಾರಕಿ ಬಿನಿ ಮೋಲ್ ಟಿ. ಅವರಿಗೆ ಪ್ರತಿಷ್ಠಿತ ಫ್ಲಾರೆನ್ಸ್ ನೈಟಿಂಗೇಲ್ 2019 ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರದಾನ ಮಾಡಿದರು.

ದಾದಿಯೊಬ್ಬರಿಗೆ ನೀಡಲಾಗುವ ಅತ್ಯುನ್ನತ ಅಂತಾರಾಷ್ಟ್ರೀಯ ಗೌರವ ಎಂದರೆ ಈ ಫ್ಲಾರೆನ್ಸ್ ನೈಟಿಂಗೇಲ್ ಪದಕವಾಗಿದೆ. ನೈಸರ್ಗಿಕ ವಿಕೋಪ ಪೀಡಿತರಿಗೆ ಆರೈಕೆ ನೀಡುವಲ್ಲಿ ಅಸಾಧಾರಣ ಧೈರ್ಯ ಮತ್ತು ಸಮರ್ಪಣಾ ಮನೋಭಾವ ಹಾಗೂ ಸಾರ್ವಜನಿಕ ಆರೋಗ್ಯ ಅಥವ ಶುಶ್ರೂಷಾ ಶಿಕ್ಷಣ ಕ್ಷೇತ್ರಗಳಲ್ಲಿ ಅಸಾಧಾರಣ ಸೇವೆಗಳು, ಸೃಜನಶೀಲತೆ ಗುರುತಿಸಿ ಗೌರವಿಸಲಾಗಿದೆ.

ಮಾಲತಿ ಮಣಿಪಾಲ್ ಆಸ್ಪತ್ರೆಯ ಮುಖ್ಯ ಶುಶ್ರೂಷಾ ಮೇಲ್ವಿಚಾರಕಿ ಬಿನಿ ಮೋಲ್ ಟಿ. ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪ್ರತಿಷ್ಠಿತ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಸಂದಿರುವುದು ನನಗೆ ಹರ್ಷ ಮತ್ತು ಹೆಮ್ಮೆಯ ವಿಷಯವಾಗಿದೆ. ದಾದಿಯರಿಗೆ ಅವರ ಕಠಿಣಶ್ರಮಕ್ಕಾಗಿ ಗುರುತಿಸುತ್ತಿರುವುದಕ್ಕೆ ಫ್ಲಾರೆನ್ಸ್ ನೈಟಿಂಗೇಲ್ ಸಮಿತಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ಸಮಾಜಕ್ಕೆ ಇನ್ನು ಹೆಚ್ಚಿನ ಕೊಡುಗೆ ನೀಡಲು ಈ ಪ್ರಶಸ್ತಿ ನನಗೆ ಸ್ಫೂರ್ತಿ ನೀಡುತ್ತದೆ ಎಂದರು.

ಸಿಸ್ಟರ್ ಬಿನಿ ಮೋಲ್ ಟಿ ಅವರು 2008ರಲ್ಲಿ ಮಣಿಪಾಲ್ ಆಸ್ಪತ್ರೆ ಸೇರಿ ಕಳೆದ 11 ವರ್ಷಗಳಿಂದ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ ಅವರು ಹೊರರೋಗಿ ಮತ್ತು ತುರ್ತು ಸೇವೆ ವಿಭಾಗಕ್ಕೆ ಸೇರಿಕೊಂಡಿದ್ದು, ನಂತರ ದಾದಿಯರ ಮುಖ್ಯಸ್ಥರಾದರು. ಇದಕ್ಕೆ ಅವರ ಸತತ ಮತ್ತು ಸ್ವಾರ್ಥರಹಿತ ಸೇವೆಯೇ ಕಾರಣ.

2010ರಲ್ಲಿ ಹಳೆಯ ವಿಮಾನ ನಿಲ್ದಾಣ ರಸ್ತೆಯ ಕಾರ್ಲ್‍ಟನ್ ಟವರ್ಸ್‍ನಲ್ಲಿ ಸಂಭವಿಸಿದ ಅಗ್ನಿ ದುರಂತ ಸಂದರ್ಭದಲ್ಲಿ ಹಾಗೂ 2017ರಲ್ಲಿ ಮಾಲತಿ ಮಣಿಪಾಲ್ ಆಸ್ಪತ್ರೆಯಲ್ಲ್ಲಿ ರೋಗಿಗಳನ್ನು ಹೊರತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

Facebook Comments

Sri Raghav

Admin