ವಿವಾಹ ಇನ್ನಿಂಗ್ಸ್ ಆರಂಭಿಸಿದ ಮನೀಷ್‍ ಪಾಂಡೆ- ಆಶ್ರಿತಾ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಡಿ.3- ಮನ್ಸೂರ್ ಅಲಿಖಾನ್ ಪಟೌಡಿ- ಶರ್ಮಿಳಾ ಟಾಗೋರ್, ಮೊಹಮ್ಮದ್ ಅಜರುದ್ದೀನ್- ಸಂಗೀತಾ ಬಿಜಾಲನಿ, ಯುವರಾಜ್‍ಸಿಂಗ್- ಹೆಜಲ್‍ಕಿಚ್, ಸಾಗಾರಿಕಾ- ಜಹೀರ್‍ಖಾನ್, ಹರ್ಭಜನ್‍ಸಿಂಗ್- ಗೀತಾಬಸ್ರಾ, ವಿರಾಟ್‍ಕೊಹ್ಲಿ- ಅನುಷ್ಕಾಶರ್ಮಾರ ವಿವಾಹದ ನಂತರ ಮತ್ತೊಬ್ಬ ನಟಿ ಹಾಗೂ ಕ್ರಿಕೆಟ್ ಆಟಗಾರ ನವಜೀವನಕ್ಕೆ ದಾಪುಗಾಲಿಟ್ಟಿದ್ದಾರೆ.

ಸಯ್ಯದ್‍ಮುಷ್ತಾಕ್‍ಅಲಿ ಸರಣಿಯಲ್ಲಿ ತಮಿಳುನಾಡು ವಿರುದ್ಧ 1 ರನ್‍ನಿಂದ ರೋಚಕ ಗೆಲುವು ಸಾಧಿಸಿದ್ದ ಸಂಭ್ರಮದಲ್ಲಿದ್ದ ಕರ್ನಾಟಕ ತಂಡದ ನಾಯಕ ಮನೀಷ್‍ಪಾಂಡೆ ನಿನ್ನೆ ನಟಿ ಅಶ್ರಿತಾಶೆಟ್ಟಿಯನ್ನು ವರಿಸುವ ಮೂಲಕ ದಾಂಪತ್ಯ ಜೀವನದ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮುಂಬೈನಲ್ಲಿ ನಡೆದ ಮನೀಷ್ , ಆಶ್ರಿತಾರ ಮದುವೆಯಲ್ಲಿ ಎರಡು ಕುಟುಂಬದವರು, ಆಪ್ತೇಷ್ಟರು ಪಾಲ್ಗೊಂಡು ನೂತನ ಜೋಡಿಗೆ ಶುಭಕೋರಿದರು.

ಆಶ್ರಿತಾ ಶೆಟ್ಟಿ ತುಳು, ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು ತುಳುವಿನ ತೆಲಿಕಾಡಬೊಲೈ ಚಿತ್ರದ ಮೂಲಕ ಬಣ್ಣದ ಬದುಕಿಗೆ ಬಂದ ಆಶ್ರಿತಾ, ಸಿದ್ಧಾರ್ಥ ನಟಿಸಿದ್ದ ಉದಯಮ್ ಎನ್‍ಎಚ್4, ಇಂದ್ರಜಿತ್, ನಾನ್ ಧಾನ್ ಶಿವ ಚಿತ್ರಗಳಲ್ಲಿ ನಟಿಸಿದ್ದಾರೆ.

ಸಯ್ಯದ್ ಮುಷ್ತಾಕ್ ಟ್ರೋಫಿ ಗೆದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮನೀಷ್ ಪಾಂಡೆ, ನಾನು ಮುಂಬರುವ ಭಾರತ ಸರಣಿಗಳತ್ತ ಚ ಚಿತ್ತ ಹರಿಸಿದ್ದೇನೆ, ಆದರೆ ಅದಕ್ಕೂ ಮುನ್ನ ನಾಳೆ ನಾನು ವಿವಾಹ ಜೀವನಕ್ಕೆ ಎಂಟ್ರಿ ಕೊಡುತ್ತಿದ್ದೇನೆ ಎಂಬ ಸುಳಿವನ್ನು ಬಿಟ್ಟುಕೊಟ್ಟಿದ್ದರು.

Facebook Comments