ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್‍ಗೂ ಕೊರೊನಾ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.13-ಕಿಲ್ಲರ್ ಕೊರೊನಾ ದಾಳಿಯಿಂದ ಭಾರತೀಯರು ಹೆದರಿ ಕಂಗಲಾಗಿದ್ದು, ಗಣ್ಯಾತಿಗಣ್ಯರಿಗೂ ಮಹಾಮಾರಿಯ ಆತಂಕ ಎದುರಾಗಿದೆ.

ಮಾಜಿ ಪ್ರಧಾನಿ, ವಿಶ್ವದ ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಕಾಂಗ್ರೆಸ್ ಮುತ್ಸದ್ಧಿ ಡಾ. ಮನಮೋಹನ್ ಸಿಂಗ್ ಅವರೂ ಸಹ ಕೊರೊನಾ ವೈರಸ್ ಸೋಂಕು ಸಾಧ್ಯತೆಯ ಆತಂಕಕ್ಕೆ ಒಳಗಾಗಿದ್ದಾರೆ.

ದೆಹಲಿಯ ಮೋತಿಲಾಲ್ ನೆಹರು ರಸ್ತೆಯಲ್ಲಿರು ಡಾ. ಸಿಂಗ್ ಅವರ ಮನೆಯ ಕೆಲಸಗಾರರೊಬ್ಬರ ಪುತ್ರಿಗೆ ಕೋವಿಡ್-19 ವೈರಸ್ ಸೋಂಕು ದೃಢಪಟ್ಟಿದ್ದು, ಇಡೀ ಕುಟುಂಬವನ್ನು ಪ್ರತ್ಯೇಕವಾಗಿರಿಸಲಾಗಿದೆ.

ದೆಹಲಿಯ ಆರೋಗ್ಯ ಇಲಾಖೆ ಸಿಬ್ಬಂದಿ ಇಂದು ಬೆಳಗ್ಗೆ ಮಾಜಿ ಪ್ರಧಾನಿ ಅವರ ನಿವಾಸಕ್ಕೆ ಕ್ವಾರಂಟೈನ್ (ಪ್ರತ್ಯೇಕ ವಾಸ) ನೋಟಿಸ್ ಅಂಟಿಸಿದ್ದಾರೆ.

ಡಾ. ಸಿಂಗ್ ಅವರ ಮನೆಯ ನೌಕರನ ಮಗಳಿಗೆ ಸೋಂಕು ಪಾಸಿಟಿವ್ ದೃಢಪಟ್ಟ ನಂತರ ಆ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದವರಲ್ಲಿ ಆತಂಕ ಶುರುವಾಗಿದೆ.

ಡಾ, ಮನಮೋಹನ್ ಸಿಂಗ್ ಅವರ ಕುಟುಂಬದ ಸದಸ್ಯರಲ್ಲೂ ಭೀತಿಯ ವಾತಾವರಣ ಉಂಟಾಗಿದೆ. ಸದ್ಯಕ್ಕೆ ಇಡೀ ಬಂಗಲೆಯನ್ನು ಕ್ವಾರಂಟೈನ್‍ನಲ್ಲಿ ಇರಿಸಿ ಎಲ್ಲರ ತಪಾಸಣೆ ಮಾಡಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ.

Facebook Comments